ಅರಣ್ಯ ಬೆಳೆಸುವ ಯೋಜನೆ ಅಡಿ ಕೋಟಿಗಟ್ಟಲೇ ಹಣ ದುರುಪಯೋಗ: ಮಲ್ಲಿಕಾರ್ಜುನ ಕ್ರಾಂತಿ

0
80

ಸುರಪುರ: ತಾಲೂಕಿನ ಗ್ರಾಮೀಣ ರಸ್ತೆಗಳು ಹಾಗೂ ಇನ್ನೀತರ ಕಡೆಗಳಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಸಸಿಗಳನ್ನು ನೆಡುವ ಯೋಜನೆ ಅಡಿ ಸುರಪುರ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಾಮಾಜಿಕ ಆರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿಯವರು ಇಬ್ಬರೂ ಕೂಡಿಕೊಂಡು ಅರಣ್ಯ ಬೆಳೆಸುವ ಹೆಸರಿನಲ್ಲಿ ಸರಕಾರದ ಕೋಟಿಗಟ್ಟಲೇ ಅನುದಾನವನ್ನು ಲೂಟಿ ಮಾಡಿದ್ದು ಕೂಡಲೇ ಈ ಬಗ್ಗೆ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.

ನಗರದ ತಾಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ಜಿಲ್ಲೆಯಾದಾದ್ಯಂತ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳಲ್ಲಿ ಸಸಿಗಳನ್ನು ನೆಡುವ ಹಾಗೂ ನೆಟ್ಟ ಗಿಡಗಳನ್ನು ರಕ್ಷಿಸುವ ಕೆಲಸದಲ್ಲಿ ಪಂಚಾಯಿತಿ ಮತ್ತು ಇತರೆ ಜನಪ್ರತಿನಿಧಿಗಳು ಕೂಡಿಕೊಂಡು ಅರಣ್ಯ ಬೆಳೆಸುವ ಹೆಸರಿನಲ್ಲಿ ಕೋಟಿಗಟ್ಟಲೇ ಅನುದಾನವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ರಸ್ತೆಯ ಎರಡು ಬದಿಗಳಲ್ಲಿ ೧೦ ಅಡಿಗೆ ಒಂದರಂತೆ ಸಸಿಗಳನ್ನು ನೆಡುವುದು ಹಾಗೂ ೩ ವರ್ಷ ರಕ್ಷಣೆ ಮಾಡುವುದು ಕಾಮಗಾರಿಯಲ್ಲಿ ಒಳಗೊಂಡಿದ್ದು ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಷಾಮೀಲಾಗಿ ಸರಕಾರದ ಕೋಟಿಗಟ್ಟಲೇ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡು ೩ ವರ್ಷಗಳಲ್ಲಿ ಜಿಲ್ಲೆಯಲ್ಲಿ ಎಷ್ಟು ಸಸಿಗಳನ್ನು ನೆಡಲಾಗಿದೆ ಕುರಿತು ಸಮಗ್ರ ತನಿಖೆ ಕೈಗೊಂಡು ಗ್ರಾಮ ಪಂಚಾಯಿತಿಗಳಲ್ಲಿ ಸಾಮಾಜಿಕ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಅನುದಾನ ಖರ್ಚಾಗಿರುವ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥ ಎರಡು ಇಲಾಖೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಲ್ಲಿ ಗಿಡಮರಗಳನ್ನು ಕಾಪಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ಜಿ.ಪಂ. ಸಿ.ಇ.ಓ ಅವರಿಗೆ ಬರೆದಿರುವ ಮನವಿ ಪತ್ರವನ್ನು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಸಲ್ಲಿಸಲಾಯಿತು, ಸಮಿತಿಯ ಮುಖಂಡರಾದ ಮಾನಪ್ಪ ಬಿಜಾಸಪುರ, ಜಟ್ಟೆಪ್ಪ ನಾಗರಾಳ, ತಿಪ್ಪಣ್ಣ ಶೆಳ್ಳಗಿ, ಖಾಜಾ ಹುಸೇನ ಗುಡಗುಂಟಿ, ಬಸವಲಿಂಗಪ್ಪ ಏವೂರ, ಮರಲಿಂಗಪ್ಪ ನಾಟೇಕಾರ, ಮಹಿಮೂದಸಾಬ ಹಾಗೂ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here