ಸಮೀಕ್ಷೆ ನಡೆಸಿ ಬಿಟ್ಟಿ ಚಾಕರಿಯ ಫಲಾನುಭವಿಗಳನ್ನು ಗುರುತಿಸಲಾಗಿದೆ: ಡಾ: ಕಿರಣ್ ಪ್ರಸಾದ್

0
19

ಕಲಬುರ್ಗಿ: ಜಿಲ್ಲೆಯಲ್ಲಿ ಸುಮಾರು ನೂರಕ್ಕೆ ನೂರು ರ? ದಲಿತರು ರಾಜ್ಯದ ಉತ್ತರ ಕರ್ನಾಟಕದಲ್ಲಿ ಜೀತ ಸಮಸ್ಯೆ ಮತ್ತು ಬಿಟ್ಟಿ ಚಾಕರಿ ತುಂಬಿ ತುಳುಕುತ್ತಿದ್ದು ಈ ಒಂದು ಪದ್ಧತಿಯನ್ನು ಹೋಗಲಾಡಿಸಲು ಜೀವಿಕ ಸಂಘಟನೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ೮ ದಿನಗಳಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ಬಿಟ್ಟಿ ಚಾಕರಿಯ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಜೀವಿಕ ಸಂಘಟನೆ ರಾಜ್ಯ ಸಂಚಾಲಕರು ಹಾಗೂ ಸಂಸ್ಥಾಪಕ ಅಧ್ಯಕ್ಷ ಡಾ. ಕಿರಣ್ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಐವಾನ್-ಇ-ಶಾಹಿ ರಸ್ತೆಯಲ್ಲಿರುವ ಗುಲ್ಲಾಬಾಡಿ ಅಂಬೇಡ್ಕರ ಸಮುದಾಯ ಭವನದಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಬಿಟ್ಟಿ ಚಾಕ್ರಿ ಕುರಿತಂತೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡುತ್ತಾ ಅವರು, ಗುರುತಿಸಿದಂತಹ ಫಲಾನುಭವಿಗಳಿಗೆ ಸರ್ಕಾರದಿಂದ ಬರುವಂತಹ ಜೀತ ಕಾನೂನಿನಡಿ ಜೀತದಾಳುಗಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಬಿಟ್ಟಿ ಚಾಕರಿ ಪದ್ಧತಿಯಲ್ಲಿ ತೊಡಗಿಕೊಂಡವರಿಗೆ ಸೌಲಭ್ಯಗಳನ್ನು ಕೊಡಬೇಕೆಂದು ಎಡಿಸಿ ಯವರಿಗೆ ಮನವಿ ಪತ್ರವನ್ನು ನೀಡಲಾಯಿತು ಎಂದು ಡಾ. ಕಿರಣ್ ಪ್ರಸಾದ್ ತಿಳಿಸಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಕುರಿತು ಡಿಎಂಎಸ್‌ಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್ ರವರು ಮಾತನಾಡುತ್ತಾ, ಮನು? ತನ್ನ ಕೆಲಸದಿಂದ ಶ್ರೇ? ನಗುತ್ತಾನೆ ಹೊರತು ಹುಟ್ಟಿನಿಂದ ಅಲ್ಲ ಜೀವಿಕ ಸಂಘಟನೆಯ ಸಂಸ್ಥಾಪಕರು, ಜೀತದಾಳುಗಳ ಮತ್ತು ಬಿಟ್ಟಿ ಚಕಾರಿ ಮಾಡುವವರಿಗೆ ಆಶಾಕಿರಣ ಡಾ. ಕಿರಣ ಕಮಲ್ ಪ್ರಸಾದ್ ರವರು ಎಂದು ಹೇಳುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದರು.

ಆರೋಗ್ಯಕರ ಸಮಾಜವನ್ನು ಕಟ್ಟುವ ಕನಸನ್ನು ಹೊತ್ತು ಜೀತಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು ತಪಸ್ವಿಯಂತೆ ನಂಬಿ ನಿ?ಯಿಂದ ಸೇವೆ ಗೈಯುತ್ತಾ ಆರೋಗ್ಯಕರ ಸಮಾಜ ಕಟ್ಟಲು ಪಣತೊಟ್ಟಿರುವ, ತಮ್ಮ ಬದುಕಿನಲ್ಲಿ ಎ? ಕಠಿಣ ಪರಿಸ್ಥಿತಿಗಳು ಬಂದರೂ ಅವುಗಳನ್ನು ಎದುರಿಸಿಕೊಂಡು ಇತರರಿಗೆ ಸಂತೋ?ವನ್ನು ಉಣಬಡಿಸುವ ಬೆಂಕಿಯಲ್ಲಿ ಅರಳಿದ ಹೂವು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ರೂಢಿಸಿಕೊಂಡು ಸಂಘಟಕರಾಗಿ ಪ್ರಾಮಾಣಿಕತೆ,, ಸಹೃದಯತೆ,, ಸ್ನೇಹಮಯ ವ್ಯಕ್ತಿತ್ವದ ವ್ಯಕ್ತಿ ಎಂದರೆ ಖಂಡಿತಾ ತಪ್ಪಾಗಲಾರದು ಎಂದರು.

ಅಂಬೇಡ್ಕರ್ ರವರ ಕನಸನ್ನು ನನಸು ಮಾಡಲು ಹೊರೆಟಿರುವ ನಿಮ್ಮ ನಿಸ್ವಾರ್ಥ ಸೇವೆ ಮತ್ತ? ಇನ್ನ? ನಮ್ಮ ಸಮಾಜಕ್ಕೆ ಸಿಗಲಿ ಜೀವಿಕಸಂಘಟನೆ ಜನಪರ ಸಂಘಟನೆಯಾಗಿ ಇಡೀ ದೇಶಕ್ಕೆ ಜೀವಿಕ ಸಂಘಟನೆ ಸಂಘಟನೆಗಳ ಮಾದರಿ ಯಾಗಲು ನಿಮ್ಮ ಹಿಂದೆ ನಾವು ಇರುತ್ತೇವೆ ಎಂದು ಲಿಂಗರಾಜ್ ತಾರಫೈಲ್ ಹೇಳಿದರು.

ಡಿಎಂಎಸ್‌ಎಸ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ ಮಾತನಾಡುತ್ತಾ ಅವರು, ಡಿಎಂಎಸ್‌ಎಸ್ ಸಂಘಟನೆ ಕಲಬುರಗಿ ಜಿಲ್ಲೆಯಲ್ಲಿ ಮಕ್ಕಳ ಬಗ್ಗೆ, ಬಲಕಾರ್ಮಿಕರ ಬಗ್ಗೆ, ಶಾಲೆ ಬಿಟ್ಟ ಮಕ್ಕಳ ಬಗ್ಗೆ, ಮತ್ತು ಇತರೆ ಶೋ?ಣೆ ಒಳಗೊಂಡ ದಲಿತರ ಬಗ್ಗೆ, ಕೆಲಸ ಮಾಡುತಿದ್ದು ಈ ಜೀವಿಕ ಸಂಘಟನೆ ಉತ್ತರ ಕರ್ನಾಟಕದ ಜೀತದಾಳುಗಳ ಮತ್ತು ಬಿಟ್ಟಿ ಚಾಕ್ರಿಯ ಪದ್ಧತಿಯನ್ನು ಕೈಗೆತ್ತಿಕೊಂಡು ಕೆಲಸ ಮಾಡುತ್ತಿರುವುದು ತುಂಬಾ ಖುಷಿಯನ್ನು ತಂದಿದೆ ಅದರಂತೆ ಜೀವಿಕ ಸಂಘಟನೆಯ ಸಂಸ್ಥಾಪಕರಾದ ಡಾಕ್ಟರ ಕಿರಣ್ ಕಮಲ್ ಪ್ರಸಾದ್ ರವರಿಗೆ ನಮ್ಮ ಸಂಘಟನೆ ಸಹಕಾರ ಯಾವಾಗಲು ಇರುತ್ತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ಜೀವಿಕ ಜಿಲ್ಲಾ ಉಸ್ತುವಾರಿ ಸಂಚಾಲಕ ಡಾ. ನಾರಾಯಣಸ್ವಾಮಿ, ಮುಖಂಡರಾದ ರವಿಕುಮಾರ್ ಕಲಬುರಗಿ, ಅಮರಾವತಿ, ನರಸಿಂಹಮೂರ್ತಿ ಇತರರು ಭಾಗವಹಿಸಿದ್ಧರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here