ವಾಡಿ: ಕಮರವಾಡಿ ಗ್ರಾಪಂಗೆ ಬಿಡುಗಡೆಯಾದ ವಿವಿಧ ಯೋಜನೆಗಳ ಒಟ್ಟು ೧೩.೭೫ ಲಕ್ಷ ರೂ. ಅನುದಾನವನ್ನು ಕೊಟ್ಟಿ ಬಿಲ್ ತಯಾರಿ ಲೂಟಿ ಮಾಡಿರುವ ಪಿಡಿಒ ಶೇಕಪ್ಪ ಶಂಕು ಹಾಗೂ ಅಧ್ಯಕ್ಷೆ ಸರೋಜಿನಿ ಬಸವರಾಜ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜು.೫ ರಂದು ಬೆಳಗ್ಗೆ ೧೦:೩೦ಕ್ಕೆ ಕಮರವಾಡಿ ಗ್ರಾಪಂ ಸರ್ವ ಸದಸ್ಯರ ನೇತೃತ್ವದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುತ್ತಿದೆ ಎಂದು ಪಂಚಾಯತಿ ಉಪಾಧ್ಯಕ್ಷ ಢಾಕು ರಾಠೋಡ ತಿಳಿಸಿದ್ದಾರೆ.