ಲೋಹಿಯಾ ವಿಚಾರ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ   

0
109

ಮಳವಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಕಡುಬಡವರಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಗ್ರಾಮಪಂಚಾಯಿತಿಗಳಿಗೆ ಆರೋಗ್ಯ ಕ್ಕಾಗಿ  ಮೊಬೈಲ್ ವ್ಯಾನ್ ವಿತ್ ಡಾಕ್ಟರ್ ನೇಮಿಸಬೇಕು ಎಂದು ಲೋಹಿಯಾ ವಿಚಾರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಡಾ. ದಡದಪುರಶಿವಣ್ಣ  ಒತ್ತಾಯಿಸಿದರು

ಮಳವಳ್ಳಿ ತಾಲ್ಲೂಕಿನ ದಡದಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ರಾಮಮನೋಹರ ಲೋಹಿಯಾ ವಿಚಾರವೇದಿಕೆ,ಆಚಾರ್ಯ ಶಾಂತಿಸಾಗರ್ ಪೌಂಡೇಶನ್, ಕರ್ನಾಟಕ ಜೈನ್ ಅಸೋಷಿಯೇಷನ್  ಹಾಗೂ ADD ಪೌಂಡೇಷನ್  ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಚೆನ್ನಾಗಿದರೆ ಮಾತ್ರ ದೇಶದ ಜನರು ಆರೋಗ್ಯದಿಂದ ಸಾಧ್ಯ, ಎಂದರು

Contact Your\'s Advertisement; 9902492681

ಪ್ರದಾನಿಮಂತ್ರಿ ಮೋದಿರವರು   ಗ್ರಾಮೀಣ ಪ್ರದೇಶದ ಜನರು ನಗರ ಪ್ರದೇಶಗಳಿಗೆ ಚಿಕಿತ್ಸೆಗೆ ಬರುವುದಕ್ಕೆ ಆಗದ ಸ್ಥಿತಿ ಇದ್ದು ಅವರಿಗಾಗಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ  ಮೊಬೈಲ್ ವ್ಯಾನ್ ವಿತ್ ಡಾಕ್ಟರ್ ಯೋಜನೆ ಜಾರಿಗೆ ತರಬೇಕು ಇದರಿಂದ ಹಳ್ಳಿಗಾಡಿನ ರೈತಾಪಿ ಜನರು , ಕಡುಬಡವರಿಗೆ  ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು

ಇದೇ ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾವೀರ್  ಜೈನ್ ಆಸ್ವತ್ರೆ, ಕರ್ನಾಟಕ ಜೈನ್ ಆಸೋಷಿಯೇಷನ್  ವತಿಯಿಂದ ಹೃದಯರೋಗ, ಕಣ್ಣಿನತಪಾಸಣೆ,  ಕಿವಿ ಮೂಗು ಮತ್ತು ಗಂಟಲು,ಸ್ತ್ರೀರೋಗ ಮತ್ತು ಪ್ರಸೂತಿ,ಮಕ್ಕಳ ತಜ್ಞರು, ದಂತ ಚಿಕಿತ್ಸೆ, ಇಸಿಜಿ ಸಹ ನಡೆಸಲಾಯಿತು . ಇನ್ನೂ ಕರ್ನಾಟಕ ಜೈನ್ ಅಸೋಷಿಯೇಷನ್ ಹಾಗೂ ADD ಪೌಂಡೇಷನ್  ವತಿಯಿಂದ ಕಣ್ಣಿನ ದೋಷವಿರುವ ರೋಗಿಗಳಿಗೆ ಉಚಿತ ಕನ್ನಡಕವನ್ನು ಸ್ಥಳದಲ್ಲೇ  ನೀಡಲಾಯಿತು.

ಈ ಶಿಭಿರದಲ್ಲಿ ದಡದಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ   ವಯೋವೃದ್ದರು   ಸೇರಿದಂತೆ ನೂರಾರು  ರೋಗಿಗಳ ಆಗಮಿಸಿ ಸದರಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಂಡರು

ಕಾರ್ಯಕ್ರಮದಲ್ಲಿ   ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜು, ಹೊಂಬಾಳಮ್ಮ, ಲೋಹಿಯಾ ವಿಚಾರ ವೇದಿಕೆ ಕಾರ್ಯದರ್ಶಿ ರಮೇಶ್, ಡಾ.ಅನಿತ, ಮಲ್ಲೇಗೌಡ,  ಸೇರಿದಂತೆ ಮತ್ತಿತ್ತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here