ಕಲಬುರಗಿ ಮಹಾನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ನಿರ್ಮಿಸುವ ಕನಸು: ದತ್ತಾತ್ರೇಯ ಪಾಟೀಲ್ ರೇವೂರ್

0
32

ಕಲಬುರಗಿ: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ದಕ್ಷಿಣ ಮತಕ್ಷೇತ್ರದ ವಾರ್ಡ.ನಂ.೫೫ ರಲ್ಲಿ ಬರುವ ಗಣೇಶ ನಗರ ಮತ್ತು ಬ್ಯಾಂಕ ಕಾಲೋನಿಯಲ್ಲಿ ೧ ಕೋಟಿ ಸಿ.ಸಿ.ರಸ್ತೆ, ಮಾನಕರ ಲೇಜೌಟಿನಲ್ಲಿ ೧.೫೦ ಕೋಟಿ ಡಾಂಬರಿಕರಣ ರಸ್ತೆ ಹಾಗೂ ಜಗಜ್ಯೋತಿ ನಗರದಲ್ಲಿ ೧.೫೦ ಸಿ.ಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು ೪ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ್ ರೇವೂರ್ ಅವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಅವರು ಅಮೃತ ಯೋಜನೆ,೨೪/೭ ಕುಡಿವ ನೀರಿನ ಯೋಜನೆ, ಸಿ ಆರ್ ಎಫ್ ಯೋಜನೆ ಹಾಗೂ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಅನುದಾನವನ್ನು ಮಂಜೂರ ಮಾಡಿಸಿ ಕಲಬುರಗಿ ಮಹಾನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ನಿರ್ಮಾಣ ನಿರ್ಮಿಸುವ ಕನಸು ಹೊಂದಿದ್ದಾಗಿ ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ನಗರಕ್ಕೆ ೨೪/೭ ಕುಡಿಯುವ ನೀರಿನ ಯೋಜನೆಯನ್ನು ಈಗಾಗಲೇ ಸರ್ವೆ ಕಾರ್ಯ ಪ್ರಾರಂಭವಾಗಿದ್ದು ಶೀಘ್ರದಲ್ಲಿ ಕಾಮಗಾರಿಗಳಿಗೂ ಕೂಡ ಚಾಲನೆ ನೀಡಲಾಗುವುದು ಹಾಗೂ ಅಮೃತ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕೂಡ ಕಲಬುರಗಿ ಮಹಾನಗರವನ್ನು ಸ್ಮಾರ್ಟ್ ಸಿಟಿಯ ನಾಗಿಸುವ ನಿಟ್ಟಿನಲ್ಲಿ ಬೇಕಾಗು ಎಲ್ಲ ಯೋಜನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಮಹಾನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ರೇವೂರ ಹೇಳಿದರು.

ಈ ಸಂದರ್ಭದಲ್ಲಿ ರಾಜು ವಾಡೇಕರ, ಶಿವು ಸ್ವಾಮಿ, ವಿಶ್ವನಾಥ ಸಾಲಿಮಠ, ಗುಂಡಪ್ಪ ಜಮಶೇಟ್ಟಿ, ಪ್ರಭು ಪಾಟೀಲ, ಪದ್ಮಾಜ ರೇಡ್ಡಿ, ನಂದಕುಮಾರ ಮಾಲಿಪಾಟೀಲ, ಶ್ರೀನಿವಾಸ ದೇಸಾಯಿ, ಧನಂಜಯ ಪೂರಿ, ಪ್ರದೀಪ ಮಾನಕರ್, ಮಲ್ಲಾರೆಡ್ಡಿ, ಜಗದೀಶ ಬಡಶೇಟ್ಟಿ, ಡಾ.ಕೆಶವ ಎಸ್.ಕಾಬಾ, ಅಪ್ಪಸಾಹೇಬ, ಬಸವರಾಜ ಬಿರಾಳ, ಶಾಂತಯ್ಯ ಹಿರೇಮಠ, ರಾಜಶೇಖರ ರೆಡ್ಡಿ, ಆದಪ್ಪ ಬಗಲಿ, ಎಸ್ ಎಸ್ ಮೈನಾಳ, ಜಯಕುಮಾರ ಮೂಲಿಮನಿ, ಸುಂದರ ಕುಲಕರ್ಣಿ, ಶಿವಾನಂದ ರೆಡ್ಡಿ ಮಾಲಿ ಪಾಟೀಲ್, ಪವನ ಕುಲಕರ್ಣಿ, ಸುರೇಶ ಕುಲಕರ್ಣಿ, ಕುಪೇಂದ್ರ ಶಾಹಪೂರಕರ್, ರಾಜೇಶೇಖರ ಪಾಟೀಲ, ಈಪಾಕ ಪಟೇಲ್, ರಾಜು ದೇವದುರ್ಗ, ಮಜರ ಖಾನ್, ನಾಗರಾಜ ಸಜ್ಜನ್, ಅಭಿಶೇಖ, ಗುತ್ತೀಗೆದಾರರಾದ ಎಸ್ ಎಂ ಪಿ ಕಂಟ್ರೇಕ್ಷನ ಮಹ್ಮದ ಶಿರಾಜೋದ್ದಿನ್, ಕೆಎಂಪಿ ಕಂಟ್ರೇಕ್ಷನ ಇಸಾಕ್ ಪಟೇಲ್ ಸಾಬ್ ಹಾಗೂ ಬಡಾವಣೆಯ ಹಿರಿಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here