ಮಂಗಳೂರು: ಇಲ್ಲಿನ ಬಜಪೆ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಅಂತರಾಷ್ಟ್ರೀಯ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಚಲಿಸಿ ಕಾರಣ ಬಾರಿ ಅನಾಹುತ ತಪ್ಪಿದೆ.
ದುಬೈಯಿಂದ ಮಂಗಳೂರಿಗೆ ಸಂಜೆ 5:40ಕ್ಕೆ ಆಗಮಿಸಿದ IX384 ಎರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಂದರ್ಭದಲ್ಲಿ ರನ್ ವೇಯಿಂದ ಸಾಕಷ್ಟು ದೂರ ಚಲಿಸಿದ ಕಾರಣ 183 ಪ್ರಯಾಣಿಕರ ಪ್ರಣ ಸಂಕಟಕ್ಕೆ ಸಿಲುಕಿತು. ಸ್ವಲ್ಪ ಎಡವಟಾದರು ವಿಮಾನ ದುರಂತ ಸಂಭವಿಸುತ್ತಿತ್ತು. ಆದರೆ ಏರ್ ಇಂಡಿಯಾದ ಪೈಲೆಟ್ ನ ಸಮಯ ಪ್ರಜ್ಞೆಯಿಂದಾಗಿ ಕೊದಲೆಲೆ ಅಂತರದಲ್ಲೆ ಅನಾಹುತ ಕೈ ತಪ್ಪಿದರ ಜೊತೆಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
Mangalore Airport Official: IX384 Air India Express Dubai to Mangalore aircraft veered off the taxiway around 5:40 pm today. All passengers are safe & have been deboarded. More details awaited. pic.twitter.com/wHh4EAlH9G
— ANI (@ANI) June 30, 2019
ಘಟನೆಯಲ್ಲಿ ಪ್ರಯಾಣಿಕರಿಗೆ ಸೇರಿದಂತೆ ಯಾವುದೇ ಜೀವಹಾನಿ ಉಂಟಾಗಿಲ್ಲ ಎಂದು ಏರ್ ಇಂಡಿಯಾ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಏರ್ ಇಂಡಿಯಾ ವಕ್ತಾರ ಮತ್ತು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುರಿ ಸಚಿವ ಸಚಿವ ಯು.ಟಿ. ಖಾದರ್ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.