ಶರಣಬಸವ ವಿಶ್ವವಿದ್ಯಾಲಯದಲ್ಲಿ ಬೃಹತ್ ವ್ಯಾಕ್ಸಿನೇಷನ್ ಅಭಿಯಾನ

0
19

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ನಾಲ್ಕು ದಿನಗಳ ಸಾಮೂಹಿಕ ವ್ಯಾಕ್ಸಿನೇಷನ್ ಅಭಿಯಾನವನ್ನು ಜುಲೈ ೦೭ ಬುಧವಾರದಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕೈಗೊಳ್ಳಲಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲಕುಮಾರ ಬಿಡವೆ ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಕಚೇರಿಯ ಸಹಯೋಗದೊಂದಿಗೆ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಬುಧವಾರ ಬೆಳಿಗ್ಗೆ ೧೦.೦೦ ರಿಂದ ಸಾಮೂಹಿಕ ವ್ಯಾಕ್ಸಿನೇ?ನ್ ಅಭಿಯಾನ ಕೈಗೊಳ್ಳಲಿದ್ದು, ಆರಂಭಿಕ ಅಂದಾಜಿನ ಪ್ರಕಾರ ಸುಮಾರು ೧೮೦೦ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿಯಾನದಲ್ಲಿ ಲಸಿಕೆ ನೀಡಲಾಗುವುದು. ಲಸಿಕೆ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಕಚೇರಿಯ ತಜ್ಞರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ, ಜಿಲ್ಲಾ ಆರೋಗ್ಯ ಕಚೇರಿಯ ಅಧಿಕಾರಿಗಳ ತಂಡ ಮಂಗಳವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿಶ್ವವಿದ್ಯಾಲಯದ ಸಿಬ್ಬಂದಿಗೆ ತರಬೇತಿ ನೀಡಿ, ಬುಧವಾರದ ವ್ಯಾಕ್ಸಿನೇ?ನ್ ಅಭಿಯಾನದಲ್ಲಿ ಸಹ ಭಾಗಿಯಾಗಲಿದೆ.

Contact Your\'s Advertisement; 9902492681

ಲಸಿಕೆ ಅಭಿಯಾನದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವ್ಯಾಕ್ಸಿನೇ?ನ್ ಆಯ್ಕೆ ಮಾಡಿಕೊಂಡರೆ, ಎಲ್ಲರನ್ನೂ ತಲುಪಲು ಅಭಿಯಾನವನ್ನು ಒಂದು ಅಥವಾ ಎರಡು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ಡಾ.ಬಿಡವೆ ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here