ಕಲಬುರಗಿ: ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ತಿರುಗಾಡಿದ 28 ಜನರ ಮೇಲೆ FIR ದಾಖಲಾಗಿದ್ದು, 8 ಜನರನ್ನು ಮರಳಿ ಸಾಂಸ್ಥಿಕ ಕ್ವಾರಂಟೈನ್ ಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿತ ರೋಗಿಯ ಎರಡನೇಯ ಸಂಪರ್ಕ ಹೊಂದಿದ ಹೊರ ರಾಜ್ಯಗಳಿಂದ ಬಂದ ಗರ್ಭಿಣಿ ಮಹಿಳೆಯರ, 10 ವರ್ಷಕ್ಕಿಂತ ಕಡಿಮೆ ವಯ್ಯಸ್ಸಿನ ಮಕ್ಕಳ, 65 ವರ್ಷ ಮೇಲ್ಪಟ್ಟ ಹಿರಿಯರ ಮತ್ತು ಬೇರೆ ರೋಗದಿಂದ ಬಳಲುತ್ತಿರುವರ ಹಿತದೃಷ್ಟಿಯಿಂದ ಸಾಂಸ್ಥಿಕ ಕ್ಟಾರೆಂಟೆನ್ ಮಾಡುವ ಬದಲಾಗಿ ಹೋಂ ಕ್ವಾರೈಂಟ್ ನಲ್ಲಿ ನಿಗಾವಹಿಸಲಾಗುತ್ತಿದೆ.
ಆದರೆ ಕೆಲವು ಜನರು ಅನಾವಶ್ಯಕವಾಗಿ ನಿಯಮ ಉಲ್ಲಂಘನೆ ಮಾಡಿ ಹೋಂ ಕ್ವಾರಂಟೈನ್ ನಿಂದ, ಹೊರ ಬಂದು ಸಾರ್ವಜನಿಕವಾಗಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ 28 ಜನರ ಮೇಲೆ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಲಾಗಿದೆ.