ಸಾಕ್ಷಾತ್ ನರಕದರ್ಶನ ; ಜೇವರ್ಗಿ ಮಿನಿವಿಧಾನಸೌಧ ಆವರಣ: ತಾಲೂಕ ಕಚೇರಿಯ ಸ್ವಚ್ಛತೆ ಇಲ್ಲಿ ಮರಿಚಿಕೆ !!

0
49

ಜೇವರ್ಗಿ: ತಾಲ್ಲೂಕಿನ ಮಿನಿವಿಧಾನಸೌಧದ ಆವರಣವು ಸಾರ್ವಜನಿಕರಿಂದ ಸದಾ ಗಿಜಿಗುಡುತ್ತಿದ್ದು ಇಲ್ಲಿರುವ ಹೊಲಸು ಹಾಗೂ ಧೂಳಿನಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .

ಇಲ್ಲಿನ ತಾಲೂಕು ಕಚೇರಿ ಆಡಳಿತ ವ್ಯವಸ್ಥೆಯನ್ನು ಹತೋಟಿಯಲ್ಲಿಟ್ಟುಕೊಂಡು ತಾಲೂಕಿನ ಸುಭಿಕ್ಷವಾಗಿ ನಡೆಸುವ ಜವಾಬ್ದಾರಿ ಇರುವ ತಸಿಲ್ದಾರ್ ಕಾರ್ಯಲಯ ತಮ್ಮ ಕಛೇರಿಯ ಆವರಣವನ್ನು ಚೊಕ್ಕಟವಾಗಿ ನಿರ್ವಹಿಸದಿದ್ದರೆ ಸಂಪೂರ್ಣ ತಾಲೂಕನ್ನು ನಿರ್ವಹಿಸುವುದು ಹೇಗೆ ? ಜೇವರ್ಗಿ ತಾಲೂಕು ಆಡಳಿತ ಕೇಂದ್ರ ಮಿನಿ ವಿಧಾನಸೌಧದ ಆವರಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ತಿಂದು ಉಗಿಯುವುದು ಹಾಗೂ ಉಳುವುದು ಕಸಕಡ್ಡಿಗಳನ್ನು ಎಸೆಯುವುದು ಸಾಮಾನ್ಯವಾಗಿದ್ದು ಇದನ್ನು ತಡೆಯುವ ಕಟ್ಟುನಿಟ್ಟಿನ ಕ್ರಮ ಹಾಗೂ ಸ್ವಚ್ಛಗೊಳಿಸುವಲ್ಲಿ ಇಲ್ಲಿನ ಸಿಬ್ಬಂದಿಗಳು ಆಲಸ್ಯತನ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇಲ್ಲಿನ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯ ಸಂಪೂರ್ಣವಾಗಿ ಹದಗೆಟ್ಟಿದ್ದು ಗಬ್ಬು ಹಾಗೂ ಕೊಳಕು ವಾಸನೆಯಿಂದ ತಾಲೂಕು ಕಚೇರಿಗೆ ಕೆಲಸದ ನಿಮಿತ್ತ ಆಗಮಿಸುವ ಸಾರ್ವಜನಿಕರು ಮಹಿಳೆಯರು, ವಯೋವೃದ್ಧರು, ನರಕ ಯಾತನೆ ಅನುಭವಿಸಿ ಮೂಗುಮುಚ್ಚಿಕೊಂಡು ತಿರುಗು ಪರಿಸ್ಥಿತಿ ನಿರ್ಮಾಣವಾಗಿದೆ.

Contact Your\'s Advertisement; 9902492681

ಪ್ರತಿನಿತ್ಯ ಒಂದಾದರೂಂದು ಕೆಲಸದ ನಿಮಿತ್ತ ತಾಲೂಕು ಆಡಳಿತ ಕಚೇರಿ ಆಗಮಿಸುವ ರೈತರು ಹಾಗೂ ಮಹಿಳೆಯರು ಸೇರಿದಂತೆ ವಿದ್ಯಾರ್ಥಿ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ , ಅಲ್ಲದೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ವಿಧಾನಸೌಧ ಆವರಣದಲ್ಲಿ ಮುದ್ರಣಾಲಯವನ್ನು ನೋಡಿದರೆ ನರಕ ಎಂದರೆ ಇದೇನಾ ಎನ್ನುವುದು ಕಂಡುಬರುತ್ತದೆ. ಇದರಿಂದಾಗಿ ರೋಗರುಜಿನಗಳು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿದೆ ಎನ್ನುವುದು ಸಾರ್ವಜನಿಕರ ಅಭಿಮತವಾಗಿದೆ.

ಜೇವರ್ಗಿ ತಾಲೂಕ ಸಂಕಿರಣ ಮಿನಿ ವಿಧಾನಸೌಧವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ವಿಧಾನಸೌಧ ಒಳಗಡೆ ಮುಕ್ತವಾಗಿ ಉಸಿರಾಡುತ್ತಾ ಆಗಮಿಸುವಂತೆ ಕ್ರಮಕೈಗೊಳ್ಳುವಲ್ಲಿ ಕ್ಷೇತ್ರದ ಯುವ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಕ್ರಮ ಕೈಗೊಳ್ಳಬೇಕಿದೆ, ಇವರು ಕೇವಲ ಕಾಟಾಚಾರಕ್ಕಾಗಿ ಮಾತ್ರ ಅಧಿಕಾರಿಗಳ ಸಭೆ ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಂಡು ರಾಜ್ಯಧಾನಿ ಯತ್ತ ಮುಖ ಮಾಡುತ್ತಾರೆ. ಇಲ್ಲಿನ ಆಡಳಿತ ಕಛೇರಿಗಳ ಸ್ವಚ್ಛತೆ ಬಗ್ಗೆ ಗಮನ ಕೊಡುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.

ಈ ಹಿಂದೆ ಹಲವು ಬಾರಿ ಈ ಕುರಿತಂತೆ ತಶಿಲ್ದಾರ ಗಮನಕ್ಕೆ ಈ ವಿಷಯವನ್ನು ತಂದರೂ ಸಹ ಅವರು ಕ್ಯಾರೆ ಎನ್ನುತ್ತಿಲ್ಲ ! ಇನ್ನಾದರೂ ತಾಲೂಕು ಕಚೇರಿ ಸಂಖ್ಯೆಯನ್ನು ಸ್ವಚ್ಛ ಹಾಗೂ ಸುಂದರ ಗಳಿಸುವಲ್ಲಿ ಕ್ರಮಕೈಗೊಳ್ಳುವರೆ? ಕಾದುನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here