ನವ ಕಲಬುರಗಿ ನಿರ್ಮಾಣಕ್ಕೆ ಕೈಗಾರಿಕೆಗೆ ಒತ್ತು: ಸಚಿವ ಜಗದೀಶ್ ಶೆಟ್ಟರ್

0
18

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ ಕನಸಿನ ಕಲಬುರಗಿ ನಿರ್ಮಾಣಕ್ಕೆ ಸಹಕರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಜಗದೀಶ್ ಶೆಟ್ಟರ್ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಜನಪ್ರತಿನಿಧಿಗಳ, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಗಳ ಅಧಿಕಾರಿ ಮತ್ತು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಿದ ನಂತರ ಮಾತನಾಡಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ’ಬಂಡವಾಳ ಹೂಡಿಕೆದಾರರ ಸಮಾವೇಶ’ ಹಮ್ಮಿಕೊಂಡು ಈ ಭಾಗದಲ್ಲಿ ಬೃಹತ್ ಗಾತ್ರದ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಕಲಬುರಗಿ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದಲ್ಲಿನ ೬೦೦ ಎಕರೆಯನ್ನು ಶೀಘ್ರವಾಗಿ ಅಭಿವೃದ್ಧಿಪಡಿಸುವುದಲ್ಲದೇ, ಆಯಾ ತಾಲೂಕುವಾರು ಪಟ್ಟಣಗಳಲ್ಲಿ ಅಲ್ಲಿನ ಶಾಸಕರ ನಿರ್ದೇಶನ ಮೇರೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಪ್ರೋತ್ಸಾಹಿಸುವುದರ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೆ ಪ್ರಾಶ್ಯಸ್ತ್ಯ ನೀಡಿಲಾಗುವುದೆಂದು ಹೇಳಿದರು.

ಯಾದಗಿರಿ ಜಿಲ್ಲೆಯಲ್ಲಿನ ಕಡೆಚೂರ ಪ್ರದೇಶದಲ್ಲಿ ೩ ಸಾವಿರ ಎಕರೆಯಲ್ಲಿ ೬೭ ಫಾರ್ಮಾ ಕಂಪನಿಗಳ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಅಲ್ಲಿ ಒಟ್ಟು ೨೮೧೨ ಕೋಟಿ ರೂಪಾಯಿ ಹೂಡಿಕೆಯಾಗುವುದಲ್ಲದೇ ಸುಮಾರು ೧೦ ಸಾವಿರಕ್ಕೂ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಮಾಹಿತಿ ನೀಡಿದರು.

ಅದೇ ರೀತಿ ರಾಯಚೂರಿನಲ್ಲಿ ಬಲ್ಕ್ ಡ್ರಗ್ ಪಾರ್ಕ್ ನಿರ್ಮಾಣ ಜೊತೆಗೆ ವಿಮಾನ ನಿಲ್ದಾಣ ನಿರ್ಮಿಸುವ ಸಾಧ್ಯತೆ ಜೊತೆಗೆ ಉತ್ಕೃಷ್ಟ ಮಟ್ಟದ ಕೈಗಾರಿಕೆಗಳೂ ಸಹ ಅಲ್ಲಿ ಬರಲಿವೆ ಎಂದರು.

೨೦೨೦ರ ಕೈಗಾರಿಕಾ ನೀತಿಯಿಂದಾಗಿ ಕೈಗಾರಿಕೋದ್ಯಮಿಗಳಿಗೆ ಬಹಳಷ್ಟು ಅನುಕೂಲವಾಗಿದೆ, ಈ ಭಾಗದಲ್ಲಿ ಇನ್ನಷ್ಟು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ತಿಂಗಳಲ್ಲಿ ಒಂದು ಬಾರಿಯಾದರೂ ಸಭೆ ನಡೆಸಿ, ಇಲ್ಲಿನ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್ಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಶಿವಶಂಕರ್ ಮಾತನಾಡಿ, ಜೇವರ್ಗಿ ಹಾಗೂ ಅಫಜಲಪೂರ ತಾಲೂಕಿನಲ್ಲಿರುವ ಭೀಮಾ ನದಿಯ ಪಕ್ಕದಲ್ಲಿ ನೀರಿನ ಅನುಕೂಲ ನೋಡಿಕೊಂಡು ೫೦೦ ಎಕರೆಯಲ್ಲಿ ಒಂದು ಕೈಗಾರಿಕಾ ಪ್ರದೇಶ ನಿರ್ಮಿಸುವುದಕ್ಕೆ ಸೂಕ್ತವಾಗಿದೆ, ಈ ಕುರಿತು ಸಲಹೆ, ಆಕ್ಷೆಪಣೆ ಇದ್ದರೆ ತಿಳಿಸಿ ಎಂದು ಪ್ರತಿಕ್ರಿಯಿಸಿದರು.

ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ಅವರು ಮಾತನಾಡಿದರು. ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಶಾಸಕರಾದ ಎಂ.ವೈ ಪಾಟೀಲ್, ಬಸವರಾಜ ಮತ್ತಿಮಡು, ಎಂಎಲ್ಸಿಗಳಾದ ಶಶೀಲ್ ನಮೋಶಿ, ಸುನೀಲ ವಲ್ಯಾಪುರೆ, ಬಿ.ಜಿ ಪಾಟೀಲ್, ಜಿಲ್ಲಾಧಿಕಾರಿಗಳಾದ ವಿ.ವಿ ಜೋತ್ಸ್ನಾ, ಪೊಲೀಸ ವರಿಷ್ಠಾಧಿಕಾರಿ ಸಿಮಿ ಮರಿಯಂ ಜಾರ್ಜ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಲೀಶ ಶಶಿ, ಪಾಲಿಕೆ ಆಯುಕ್ತ ಸುಧಾಕರ ಸ್ನೇಹಲ್ ಲೋಖಂಡೆ, ಡಿಸಿಪಿ ಅಡೂರು ಎಸ್. ಸೇರಿದಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಕಲಬುರಗಿ ವಿಷನ್-೨೦೫೦ಗೆ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳ ಕೊಡುಗೆ ಅಗತ್ಯವಾಗಿದ್ದು, ಅವುಗಳಿಗೆ ಪೋಷಿಸಿ, ಹಿಂದುಳಿದ ಪ್ರದೇಶದ ಪಟ್ಟವನ್ನು ಕಳಚಿಸಿ ನಿಜವಾದ ಕಲ್ಯಾಣ ಕರ್ನಾಟಕ ಮಾಡುವ ಗುರಿ ಹೊಂದಿದ್ದೇವೆ, ಈ ಭಾಗಕ್ಕೆ ’ಜ್ಯುವೆಲ್ಲರಿ ಪಾರ್ಕ್’ನ ಸ್ಥಾಪನೆಯು ಮೈಲುಗಲ್ಲಾಗಲಿದೆ. – ಮುರುಗೇಶ್ ನಿರಾಣಿ , ಜಿಲ್ಲಾ ಉಸ್ತುವಾರಿಗಳು, ಗಣಿ ಮತ್ತು ಭೂ ವಿಜ್ಞಾನ ಸಚಿವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here