ಬಿಜೆಪಿ ಜನರ ರಕ್ತ ಹೀರುವ ಕೆಲಸದಲ್ಲಿ ನಿರತವಾಗಿದೆ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

0
69

ಶಹಾಬಾದ: ಅಚ್ಚೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನವಿರೋಧಿಯಾಗಿದ್ದು, ಜನರ ರಕ್ತ ಹೀರುವ ಕೆಲಸದಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಆಯೋಜಿಸಲಾದ ಸೈಕಲ್ ರ್ಯಾಲಿ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರ ಹೆಚ್ಚಳ ಮಾಡುತ್ತಿರುವುದು ಖಂಡನೀಯ.ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನ ವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ದೇಶವನ್ನು ಅದೋಗತಿಯತ್ತ ಸಾಗಲು ಮೋದಿಯೇ ಕಾರಣಿಭೂತರಾಗಿದ್ದಾರೆ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಐದು ಪೈಸೆ ಹೆಚ್ಚಳವಾದರೆ ವರ್ಷಗಟ್ಟಲೇ ಬೆಲೆ ಏರಿಕೆಯಾಗಿದೆ ಎಂದು ಬೊಬ್ಬೆ ಹೊಡೆಯುವವರು ಈಗ 100ರ ಗಡಿ ದಾಟಿದರೂ ಸುಮ್ಮನಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಅನಗತ್ಯವಾಗಿ ಜನರ ಮೇಲೆ ತೆರಿಗೆ ಬಾರವನ್ನು ಹೊರಿಸಿದೆ.ರೈತ ವಿರೋಧಿ ಕಾಯ್ದೆಗಳನ್ನು ತಂದು ಅಂಬಾನಿ, ಅದಾನಿ ಅವರಿಗೆ ದೇಶವನ್ನು ಮಾರಾಟ ಮಾಡಲು ಹೊರಟಂತಾಗಿದೆ.ಕೇಂದ್ರ ಹಾಗೂ ರಾಜ್ಯದ ಜನವಿರೋಧಿ ನೀತಿಗಳನ್ನು ಮನೆಮನೆಗೆ ತೆರಳಿ ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಈ ದೇಶವನ್ನು ಉಳಿಸುವ ಕೆಲಸವಾಗಬೇಕಿದೆ ಎಂದರು.

ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಯುಪಿಎ ಅಧಿಕಾರಿದ ಸಮಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಖಂಡಿಸಿ ಬಿಜೆಪಿ ದೇಶದಾಧ್ಯಂತ ಪ್ರತಿಭಟನೆ ಮಾಡಿ, ಬೊಬ್ಬೆ ಹೊಡೆಯುತ್ತಿದ್ದರು.ಈಗ ತಮ್ಮದೇ ಅಧಿಕಾರ ಕೇಂದ್ರದಲ್ಲಿದೆ. ಆದರೆ ಇಂದು ಕಂಡು ಕಾಣದಂತೆ ವರ್ತನೆ ಮಾಡುತ್ತಿರುವುದು ನೋಡಿದರೇ ಇದಕ್ಕಿಂತ ನಿರ್ಲಜ್ಯ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದು ಹರಿಹಾಯ್ದರು. ಅಲ್ಲದೇ ಸರ್ಕಾರರಿ ಸಂಸ್ಥೆಗಳನ್ನು ಮಾರಾಟ ಮಾಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒತ್ತೆ ಇಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ಸುಳ್ಳು ಹೇಳುವುದನ್ನು ಬಿಟ್ಟರೇ ಮೋದಿ ಮತ್ತೇನು ಮಾಡಿಲ್ಲ.ಅಧಿಕಾರ ಬಂದಗಿನಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಯಾಗಿಯಾಗಿದೆ.ಮೋದಿ ಅವರ ಅಚ್ಚೆ ದಿನ್ ಎಂದರೆ ಇದೇನಾ ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೆದಾರ, ಮುಖಂಡರಾದ ವಿಜಯಕುಮಾರ ಮುಟ್ಟತ್ತಿ, ಮೃತ್ಯುಂಜಯ್ ಹಿರೇಮಠ, ದೇವೆಂದ್ರಪ್ಪ ಮರತೂರ,ಶರಣಗೌಡ ಪಾಟೀಲ,ಡಾ.ಜಹೀರ್, ಅಜಿತ್‍ಕುಮಾರ ಪಾಟೀಲ,ವಿಶ್ವರಾಧ್ಯ ಬೀರಾಳ, ಗಿರೀಶ ಕಂಬಾನೂರ, ಸುರೇಶ ನಾಯಕ, ಮಲ್ಲಿಕಾರ್ಜುನ ಪೂಜಾರಿ, ತಿಪ್ಪಣ್ಣ ನಾಟೇಕಾರ,ಸೂರ್ಯಕಾಂತ ಕೋಬಾಳ, ಹಾಷಮ ಖಾನ, ಡಾ,ಅಹ್ಮದ್ ಪಟೇಲ್, ಕುಮಾರ ಚವ್ಹಾಣ, ಮರಲಿಂಗ ಕಮರಡಗಿ,ರಾಜೇಶ ಯನಗುಂಟಿಕರ್, ಶರಣು ಪಗಲಾಪೂರ,ಅನ್ವರ ಪಾಶಾ, ಕಿರಣ ಚವ್ಹಾಣ,ನಾಗಣ್ಣ ರಾಂಪೂರೆ,ಮುನ್ನಾ ಪಟೇಲ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here