ಎಲ್ಲಾ ರಸ್ತೆಗಳ ರಿಪೇರಿ ಮಾಡಿಸುವಂತೆ ಅಲಿಂ ಇನಾಂದಾರ ಸಿಎಂಗೆ ಮನವಿ

0
39

ಕಲಬುರಗಿ: ನಗರದ ಹುಮನಾಬಾದ ರಿಂಗ್ ರಸ್ತೆಯಿಂದ ರಾಮ ಮಂದಿರಕ್ಕೆ ಹೋಗುವ ಮುಖ್ಯರಿಂಗ್ ರಸ್ತೆ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಓಡಾಟ ಮಾಡಲು ತುಂಬಾ ತೊಂದರೆ ಉಂಟಾಗುತ್ತಿರುವುದರಿಂದ ಹದಗೆಟ್ಟಿರುವ ರಸ್ತೆನ್ನು ತುರ್ತಾಗಿ ಸರಿಪಡಿಸುವಂತೆ ಒತ್ತಾಯಿಸಿ ಜನತಾ ದಳ ಸೇಕ್ಯೂಲರ್‌ನ ಗುಲಬರ್ಗಾ ಜಿಲ್ಲಾ ಯುಥ ಅಧ್ಯಕ್ಷ ಮಹ್ಮದ್ ಅಲೀಂ ಇನಾಂದಾರ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೊರ ವರ್ತುಲ ರಿಂಗ್ ರಸ್ತೆ ಶೀಘ್ರವಾಗಿ ಪ್ರಾರಂಭ ಮಾಡಿ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಿ ಹೊರ ರಿಂಗ್ ರಸ್ತೆಯನ್ನು ತಿರುಗಾಡಲು ಜನರಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಹೊರ ವರ್ತುಲ ರಸ್ತೆಯು ಮಂಜೂರಾತಿಯಾಗಿದ್ದು, ಅದನ್ನು ತುರ್ತು ಗತಿಯನ್ನು ಕೆಲಸ ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದರು. ಒಳ ರಸ್ತೆಗಳನ್ನು ಕೆಟ್ಟಿರುವುದರಿಂದ ಜನರಿಗೆ ತಿರುಗಾಡಲು ಹಾಗೂ ವಾಹನಗಳಿಗೆ ತಿರುಗಾಡಲು ಬಹಳ ತೊಂದರೆಯಾಗಿದ್ದು, ಆದಕಾರಣ ಅತಿಶೀಘ್ರದಲ್ಲಿ ರೀಪೆರಿ ಮಾಡಿ ಅನುಕೂಲ ಮಾಡಿಕೊಡಬೇಕೆಂದರು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಆನ್‌ಲೈನ್ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಸಂಸ್ಥೆಯವರು ವಿದ್ಯಾರ್ಥಿಗಳು ಶಾಲೆಗೆ ಹೋಗದಿದ್ದರೂ ಕೂಡಾ ಶುಲ್ಕವನ್ನು ಕಟ್ಟಬೇಕೆಂದರು ತೊಂದರೆ ಕೊಡುತ್ತಿದ್ದಾರೆ ಇದನ್ನು ತಮ್ಮ ಗಮನಕ್ಕೆ ತರಲಾಗುತ್ತಿದ್ದು, ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಲು ಶಿಕ್ಷಣ ಸಚಿವರಿಗೂ ಹಾಗೂ ಶಿಕ್ಷಣ ಅಧಿಕಾರಿಗಳಿಗೂ ತಿಸಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಒಂದು ವರ್ಷದ ವಿದ್ಯುತ್ ಬಿಲ್ಲನ್ನು ಕೋವಿಡ್-೧೯ ನಿಮಿತ್ಯವಾಗಿ ಸಂಪೂರ್ಣವಾಗಿ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು. ಹಾಗೂ ಪ್ರತಿ ಯೂನಿಟ್ ಅನ್ನು ಹೆಚ್ಚು ಮಾಡಿರುವುದನ್ನು ಕಡಿಮೆಗೊಳಿಸಬೇಕು. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರವು ಮನೆಗಳ ಆಸ್ತಿ ತೆರಿಗೆಯು ಹೆಚ್ಚಿಸುವುದರಿಂದ ಜನರಿಗೆ ತೊಂದರೆಯಾಗಿದ್ದು. ಶೇ. ೧೫ ರಷ್ಟು ಹೆಚ್ಚು ಮಾಡಲಾಗಿದ್ದು, ಅದನ್ನು ಕಡಿಮೆ ಮಾಡಬೇಕು. ಹಾಗೂ ಸಂಪೂರ್ಣ ರಿಂಗ್ ರಸ್ತೆಗಳು ಹಾಗೂ ಒಳ ರಸ್ತೆಗಳು ಹದಗೆಟ್ಟಿರುವುದರಿಂದ ದಿನಾಲೂ ಅಪಘಾತಗಳು ಕೂಡಾ ಹೆಚ್ಚಾಗಿ ಆಗುತ್ತಿವೆ. ಆದ್ದರಿಂದ ಸಂಪೂರ್ಣ ರಸ್ತೆಗಳನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮರಾವ್ ಸೂರನ್, ಕಲಿಂ ವಕೀಲರು ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here