ಔರಾದಕರ್ ವರದಿಯ ವೇತನದ ದೋಷಗಳನ್ನ ಸರಿಪಡಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ

0
36

ಕಲಬುರಗಿ: ಪೊಲೀಸರ ಕರ್ತವ್ಯಕ್ಕೆ ಹಾಗೂ ಅವರ ದುಡಿತಕ್ಕೆ ತಕ್ಕುವ ಹಾಗೆ ವೇತನವನ್ನು ನಿಗದಿಪಡಿಸಲು ರಾಘವೇಂದ್ರ ಔರಾದ್ಕರ್ ಸಮಿತಿ ಸರಕಾರ ರಚನೆ ಮಾಡಲಾಗಿದ್ದು, ಆದರೆ ಈ ವೇತನವನ್ನು ಇತ್ತೀಚಿಗೆ ನೇಮಕಗೊಂಡ ಪೊಲೀಸರಿಗೆ ಸರಿಹೊಂದುವಂತಿದೆ. ಆದರೆ ಇಲಾಖೆಯಲ್ಲಿ ೧೦-೧೫ ವ? ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರಿಗೆ ಹಿರಿಯತನ ಆಧಾರದ ಮೇಲೆ ವೇತನ ಸರಿಯಾಗಿ ನಿಗದಿ ಪಡಿಸಿರುವುದಿಲ್ಲ. ಆದರೆ ಪೊಲೀಸರು ದಿನದ ೨೪ ಗಂಟೆ ಕರ್ತವ್ಯವನ್ನು ಮಾಡಿರುತ್ತಾರೆ. ಚಳಿ,ಮಳೆ, ಬಿಸಿಲು ,ಗಾಳಿ, ಬೆಂಕಿ ಅನ್ನದೆ ಜೀವವನ್ನು ತೇತ್ತು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿರುತ್ತಾರೆ ಇಂತಹ ಪೊಲೀಸ್ ಕರ್ತವ್ಯವನ್ನು ನಿರ್ವಹಿಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಆದ್ದರಿಂದ ಔರಾದಕರ್ ವರದಿಯ ವೇತನದ ದೋಷಗಳನ್ನು ಸರಿಪಡಿಸಬೇಕೆಂದು ಕರ್ನಾಟಕ ಪೊಲೀಸ್ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ದೇಗಾಂವ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸುಮಾರು ೯೫-೯೮ ಸಾವಿರ ನೊಂದ ಪೊಲೀಸರ ಪರಿಸ್ಥಿತಿ ಹೀಗಾಗಿದೆ. ವೇತನ ಅಂತರ ಎರಡು ವ? ಸೇವೆ ಸಲ್ಲಿಸಿದವರ ಮತ್ತು ೧೦ ವ? ಸೇವೆ ಸಲ್ಲಿಸಿದವರ ಸಮಾನ ಇರುತ್ತದೆ ಇದು ಯಾವ ನ್ಯಾಯ? ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯ ಶ್ರೀ ದಾಸೋಹಿ ಶರಣಬಸವೇಶ್ವರ ನಾಡಾದ ಕಲ್ಬುರ್ಗಿಯಲ್ಲಿ ನಾವು ಬಸವಣ್ಣನವರ ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ನ್ಯಾಯ ತಳಹದಿಯ ಮೇಲೆ ನಮಗೂ ಸಹ ನ್ಯಾಯ ಸಿಗುತ್ತದೆ ಅಂತ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮೇಲೆ ಬಲವಾದ ನಂಬಿಕೆಯನ್ನು ಹೊಂದಿದ್ದೇವೆ ರಾಜ್ಯದ ಪೊಲೀಸ್ ಸಮುದಾಯಕ್ಕೆ ಸಮಸ್ಯೆಗಳ ಇಡೆರಿಕೆಗಾಗಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮತ್ತು ಅತ್ಯವಶ್ಯಕವಾಗಿ “ಪೋಲಿಸ್ ಅಭಿವೃದ್ಧಿ ಮಂಡಳಿ ಅಥವಾ ಪೋಲಿಸ್ ಕಲ್ಯಾಣ ಮಂಡಳಿ” ಸ್ಥಾಪನೆಯಾಗಬೇಕಿದೆ. ಈ ದಿಸೆಯಲ್ಲಿ ಸರಕಾರ ತ್ವರಿತ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಜಿಲ್ಲಾ ಉಪಾಧ್ಯಕ್ಷರು ಕಲಬುರಗಿ ದಯಾನಂದ ಯಂಕಂಚಿ, ಜಿಲ್ಲಾ ಕಾರ್ಯಾಧ್ಯಕ್ಷರು ಕಲಬುರಗಿ ಸಂದೀಪ್ ಬರಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಬುರಗಿ ಋಷಿ ಬೇನಕನ್ನಳ್ಳಿ , ನಗರ ಅಧ್ಯಕ್ಷರು ಶ್ರೀಕಾಂತ್ ರೆಡ್ಡಿ, ಮಹೇಶ್ ಫರತಾಬಾದ, ಮಾಹಂತೇಶ ಹರವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here