15 ರಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಕಛೇರಿ ಎದುರು ಪ್ರತಿಭಟನೆ: ಶಿವಾನಂದ ಕೌಲಗಾ

0
10

ಕಲಬುರಗಿ: ೨೦೨೦ ರ ಸದಸ್ಯತ್ವ ಇನ್ನೂ ಕೊಡದೇ ಇರುವ ನೌಕರರು ಸೋಮವಾರ ದಿ.೧೨-೦೭-೨೦೨೧ ರ ವರೆಗೆ ಜಿಲ್ಲಾ ಸಮಿತಿ ಮೂಲಕ ರಾಜ್ಯ ಸಮಿತಿ ಗೆ ಕಳಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಯಿತು. ಇದೆ ಜುಲೈ ೧೫ ರಂದು ಈ ಕೆಳಗಿನ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಕಛೇರಿ ಎದುರು ಪ್ರತಿಭಟನೆ ಮಾಡಲು ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಸಹ ಕಾರ್ಯದರ್ಶಿ ಗ್ರಾ.ಪಂ.ನೌ.ಸಂಘ (ಸಿಐಟಿಯು) ಶಿವಾನಂದ ಕವಲಗಾ ಬಿ. ತಿಳಿದ್ದಾರೆ.

ಬೆಂಗಳೂರಿನಲ್ಲಿ ಸಂಘದ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ ಸಿಐಟಿಯು ಸಂಯೋಜಿತ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು, ಬಡ್ತಿ ಗೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟರೂ ಕೂಡ ಆರ್‌ಡಿಪಿಆರ್ ಇಲಾಖೆಯವರ ದುರುದ್ದೇಶದಿಂದ ಬಿಲ್ ಕಲೆಕ್ಟರ್/ಗುಮಾಸ್ತ ರಿಂದ ಕಾರ್ಯದರ್ಶಿ ಗ್ರೇಡ್-೨ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ಆದೇಶ ಹಿಂಪಡೆದಿದ್ದು ಅದನ್ನು ಮತ್ತೆ ಮೊದಲಿನಂತೆ ಜಾರಿಗೊಳಿಸಬೇಕು. ೧೫ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿಗಳ ವೇತನ ಪಾವತಿಸುವಂತೆ ಒತ್ತಾಯ. ಸ್ವೀಪರ್ಸ/ಸ್ವಚ್ಚತಾ ಗಾರರ ಅನುಮೋದನೆ ಮತ್ತು ಇತರ ಸಿಬ್ಬಂದಿಗಳ ಅನುಮೋದನೆ ಮಾಡಬೇಕು.

Contact Your\'s Advertisement; 9902492681

ಕರೋನಾದಿಂದ ಮೃತರಾದವರ ಕುಟುಂಬಕ್ಕೆ ರೂ.೩೦ ಲಕ್ಷ ಪರಿಹಾರ ಒದಗಿಸುವ ಬಗ್ಗೆ & ಅನುಕಂಪ ಆದಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು. ಈಎಫ್‌ಎಮ್‌ಎಸ್ ನಲ್ಲಿ ಇನ್ನೂ ಸೇರಿಸದೇ ಉಳಿದಿರುವ ಸಿಬ್ಬಂದಿಗಳ ಮಾಹಿತಿ ಅಳವಡಿಸಬೇಕು. ಅಕ್ರಮ ನೇಮಕಾತಿಗಳು ತಡೆಯಬೇಕು ಎಂಬ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಲ್ಲಾ ಜಿಲ್ಲಾ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾ ಪಂಚಾಯತ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಿಗೆ,ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು ಎಂದು ಕೌಲಗಾ ತಿಳಿಸಿದರು.

ಅದರಂತೆ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ಮಾಡಲು ಎಲ್ಲಾ ಜಿಲ್ಲಾ ಸಮಿತಿಗಳು ಕ್ರಿಯಾಶೀಲರಾಗಿ ಹೋರಾಟಕ್ಕೆ ಸಜ್ಜಾಗಲು ರಾಜ್ಯ ಸಮಿತಿ ವತಿಯಿಂದ ಆದೇಶಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ವಿ.ಪಿ.ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here