ಭಾರತ ಸದೃಢವಾಗಬೇಕಾದರೆ ಜನಸಂಖ್ಯೆ ನಿಯಂತ್ರಣ ಅವಶ್ಯ: ಪ್ಯಾಟಿ

0
33

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತದ ಕನಸು ನನಸಾಗಬೇಕಾದರೆ ದೇಶದಲ್ಲಿನ ಜನಸಂಖ್ಯೆ ನಿಯಂತ್ರಣ ಕಾನೂನು ಇನ್ನೂ ಘಟ್ಟಿಗೊಳಿಸಬೇಕು. ಇಲ್ಲವಾದರೆ ದೇಶ ಆರ್ಥಿಕ ಸಂಕಷ್ಟಕ್ಕೀಡಾಗಬಹುದು ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂದಾದರೆ ಭಾರತದಲ್ಲಿ ವಾಸಿಸುವವರೆಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸು ಮಾಡಲು ಕಾಂಗ್ರೆಸ್ ಪಕ್ಷ ಬಿಡಲಿಲ್ಲ. ಈಗ ಸಮಯ ಬಂದಿದೆ. ದೇಶವಾಸಿಗಳು ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕಾದರೆ ಜನಸಂಖ್ಯೆ ನಿಯಂತ್ರಣ ಬಹಳ ಮುಖ್ಯ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

Contact Your\'s Advertisement; 9902492681

ಜನಸಂಖ್ಯೆ ನಿಯಂತ್ರಣ ದೇಶದ ಸಮಸ್ಯೆ. ಇದನ್ನು ಪ್ರಧಾನಮಂತ್ರಿಗಳು ಖುದ್ದಾಗಿ ಅರಿತಿದ್ದಾರೆ. ಅದರ ಬಗ್ಗೆ ಚಿಂತನೆ ಇದೆ. ಇದನ್ನು ಕಾರ್ಯರೂಪಕ್ಕೆ ತರುತ್ತಾರೆಂದು ಪ್ರಗತಿಪರ ಚಿಂತಕರು, ಯುವಕರು, ಮಹಿಳೆಯರು, ಸೈನಿಕರು ನಂಬಿದ್ದಾರೆ. ಯಾವ ರೀತಿ ಸಂವಿಧಾನ ರಚಿಸಿದವರೇ ಸಂಸತ್ತಿನಲ್ಲಿ ಆರ್ಟಿಕಲ್ 371ಯನ್ನು ಓದಲಿಲ್ಲ. ಅದನ್ನೇ ಪ್ರಧಾನಮಂತ್ರಿಯವರು 371 ಆರ್ಟಿಕಲ್ ಮುಕ್ತಗೊಳಿಸಿ ಅಖಂಡ ಭಾರತ ದೇಶ ಎಂದು ಸಾಬೀತುಪಡಿಸಿದ್ದಾರೆ. ಅದರಂತೆ ಜನಸಂಖ್ಯೆ ನಿಯಂತ್ರಣ ಅತ್ಯಂತ ಅವಶ್ಯಕತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here