ವರುಣನ ಆರ್ಭಟ- ಪ್ರವಾಹ ಭೀತಿ: ಜೇವರ್ಗಿ ಭೀಮಾ ತೀರದ ಹಳ್ಳಿಗಳ ನೆರವಿಗೆ ಬನ್ನಿ: ಶಾಸಕ ಡಾ. ಅಜಯಸಿಂಗ್

0
16

ಕಲಬುರಗಿ: ವರುಣನ ಆರ್ಭಟದಿಂದ ಕಂಗೆಟ್ಟಿರುವ ಹಾಗೂ ನೆರೆ ಭೀತಿಯಿಂದ ನಲುಗಿರುವ ಜೇವರ್ಗಿ ತಾಲೂಕಿನ ಭೀಮಾ ತೀರದ 23 ಗ್ರಾಮಗಳ ಸ್ಥಳಾಂತರ ಹಾಗೂ ಅಲ್ಲಿನ ಜನರಿಗೆ ಕಾಯಂ ಪುನಾವಸತಿ ಹಾಗೂ ನೆರವಿನ ಹಸ್ತ ಚಾಚುವ ಒಟ್ಟು 208 ಕೋಟಿ ರುಪಾಯಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡುವಂತು ರಾಜ್ಯದ ಕಂದಾಯ ಸಚಿವರಾದ ಆರ್. ಅಶೋಕ ಅವರಿಗೆ ಜೇವರ್ಗಿ ಶಾಸಕರು ಹಾಗೂ ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್  ಪತ್ರ ಬರೆದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆÉದೊಂದು ವಾರದಿಂದ ಸತತ ಮಳೆÉ ಸುರಿಯುತ್ತಿದೆ. ಜೊತೆಗೇ ಜೀವನದಿ ಭೀಮಾ ಉಕ್ಕೇರುವ ಲಕ್ಷಣಗಳಿವೆ. 2020 ರ ಭೀಮಾ ಪ್ರವಾಹದಲ್ಲಿ ಜೇವರ್ಗಿ ತಾಲೂಕಿನ 25 ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡಿದ್ದಲ್ಲದೆ ಸಾವಿರಾರು ಜನ ನಿರಾಶ್ರಿತರಾಗಿದ್ದರು.

Contact Your\'s Advertisement; 9902492681

ಈ ಬಾರಿಯೂ ಪ್ರವಾಹ ಭೀತಿ ಕಾಡುತ್ತಿದೆ. ಜೇವರ್ಗಿ ಭೀಮಾ ತೀರದ ಗ್ರಾಮಗಳು ಸಂಪರ್ಕ ಕಡಿತಗೊಂಡು ಮುಳುಗುವ ಭೀತಿಯಲ್ಲಿವೆ. ಈ ರೀತಿ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳ ಪೂರ್ಣ/ ಭಾಗಶಃ ಸ್ಥಳಾಂತರ ಕಲ್ಪಿಸುವುvದು ಅಗತ್ಯವಾಗಿದ್ದು ಈಗಾಗಲೇ ತಾಲೂಕು ಆಡಳಿತ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆದು ಗಮನ ಸೆಳೆದಿದೆ ಎಂದು ಪತ್ರದಲ್ಲಿ ಡಾ. ಅಜಯ್ ಸಿಂಗ್ ನೆನಪಿಸಿದ್ದಾರೆ.

ತಾವು ಕೂಡಾ 20202 ನೆರೆ ಹಾವಳಿಯಲ್ಲಿ ಹಳ್ಳಿ ಸುತ್ತಿದ್ದಾಗಿ ಹೇಳಿರುವ ಅವರು ಇಂದಿಗೂ ಜೇವರ್ಗಿ ತಾಲೂಕಿನ ಮಾಹೂರ, ರz್ದÉೀವಾಡಗಿ, ಮಂದ್ರವಾಡ, ಕೋಬಾಳ, ಕೂಡಿ, ಕೋನ ಹಿಪ್ಪರಗಾ, ಕಟ್ಟಿ ಸಂಗಾವಿ, ಮದರಿ, ಯನಗುಂಟಿ, ನರಿಬೋಳ, ಮಲ್ಲಾ ಕೆ, ಮಲ್ಲಾ ಬಿ, ರಾಜವಾಳ, ರಾಮಪುರ, ಹೊತ್ತಿನಮಡು, ಹೊನ್ನಾಳ, ರಾಸಣಗಿ, ಹದನೂರ್, ಹರವಾಳ, ಇಟಗಾ, ಅಂಕಲಗಾ, ಬಳೂಂಡಗಿ, ಕೂಡಲಗಿ ಗ್ರಾಮಗಳಿಗೆ ಮಳೆ, ಪ್ರವಾಹ ಭೀತಿ ಕಾಡುತ್ತಲೇ ಇದೆ ಎಂದಿದ್ದಾರೆ.

ಇವೆಲ್ಲ ಗ್ರಾಮಗಳನ್ನು ಭಾಗಶಃ/ ಪೂರ್ಣ ಸ್ಥಳಾಂತರಿಸುವ ಅಗತ್ಯವಿದೆ. ಒಟ್ಟು 1, 810 ಮನೆಗಳು ಸ್ಥಳಾಂತರಗೊಳ್ಳಬೇಕಿದ್ದು ಅದಕ್ಕಾಗಿ 91. 20 ಎಕರೆ ಜಮೀನು ಸಹ ಅಗತ್ಯವಿದೆ. ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ನಜೆಸಿರುವ ಸಮೀಕ್ಷೆ ಹಾಗೂ ಲೆಕ್ಕಾಚಾರದಂತೆ ಒಂದು ಎಕರೆಯಲ್ಲಿ ಮನೆ ನಿರ್ಮಿಸಲು 217 ಲಕ್ಷ ರು ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಉಪ ನೋಂದಣಾಧಿಕಾರಿ ಜೇವರ್ಗಿ ಸಲ್ಲಿಸಿರುವ ವರದಿಯಲ್ಲಿ ಗ್ರಾಮಗಳ ಸ್ಥಳಾಂತರಕ್ಕಾಗಿ ಜಮೀನು ಖರೀದಿಸುವ ಅಂದಾಜು ವೆಚ್ಚವು ಪ್ರತಿ ಎಕರೆಗೆ 2. 46 ಲಕ್ಷ ರು (ಬೆಲೆಯ ನಾಲ್ಕು ಪಟ್ಟು 1 ಎಕರೆಗೆ 9. 84 ಲಕ್ಷ ರು) ಆಗಲಿದೆ. ಹೀಗಾಗಿ ಮೇಲ್ಕಂಡ ಜೇವರ್ಗಿ ತಾಲೂಕಿನ 23 ಗ್ರಾಮಗಳನ್ನು ಪೂರ್ಣ/ ಭಾಗಶಃ ಸ್ಥಳಾಂತರಿಸಿ ಸಂತ್ರಸ್ಥ ಕುಟುಂಬಬಗಳಿಗೆ ಕಾಯಂ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಸವಲತ್ತು ಕಲ್ಪಿಸುವ 91. 20 ಎಕರೆ ಜಮೀನು ಅಗತ್ಯವಿರುವ, 9 ಕೋಟಿ ರು ವೆಚ್ಚದ 1, 810 ಮನೆಗಳ ನಿರ್ಮಾಣದ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವ 199 ಕೋಟಿ ರು ಹಾಗೂ ಖಾಸಗಿ ಜಮೀನು ಖರೀದಿ, ಪುನಾವಸತಿ, ಮೂಲ ಸವಲತ್ತು ನಿರ್ಮಾಣ ಸೇರಿದಂತೆ ಅಂದಾಜು 208 ಕೋಟಿ ರು ಮೊತ್ತದ ಪÀ್ರಸ್ತಾವನೆಗೆ ಮಂಜೂರಾತಿ ನೀಡಬೇಕು.

ಆ ಮೂಲಕ ನೆರೆ ಸಂತ್ರಸ್ಥರಾಗಿ ಪ್ರತಿವರ್ಷ ಅಲೆದಾಡುವ ಕುಟುಂಬಗಳಿಗೆ ಕಾಯಂ ಆಗಿ ನೆಮ್ಮದಿಯ ಬದುಕು ಕಟ್ಟಿಕೊಡಲು ಸರಕಾರ ಮುಂದಾಗಬೇಕು ಎಂದು ಕಂದಾಯ ಸಚಿವ ಅಶೋಕ ಅವರಿಗೆ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here