ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದಿಂದ ಕೊರಾನಾ ಸೇನಾನಿಗಳಿಗೆ ಸನ್ಮಾನ

0
60

ಕಲಬುರಗಿ: ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಕೊರಾನಾ ಸೇನಾನಿಗಳಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ೨೧ ರಂದು ಬೆಳಗ್ಗೆ ೧೦.೪೫ಕ್ಕೆ ನಗರದ ಲಾಲ್‌ಗೇರಿ ಕ್ರಾಸ್‌ನಲ್ಲಿರುವ ನಂದಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ತಿಳಿಸಿದ್ದಾರೆ.

ಪಂಡಿತ ದೀನದಯಾಳ ರಾಷ್ಟ್ರಪ್ರಶಸ್ತಿ ಪಡೆದ ಐ.ಸಿ.ಎ.ಆರ್. ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಶ್ರೀ ರಾಜು ತೆಗ್ಗೆಳ್ಳಿ ಹಾಗೂ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಜಗಜೀವನರಾಮ ಅಭಿನವ ಕೃಷಿ ಪುರಸ್ಕಾರ ಪ್ರಶಸ್ತಿ ಪಡೆದ ಶ್ರೀ ಶರಣಬಸಪ್ಪ ಪಿ. ಪಾಟೀಲ ಅವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ.

Contact Your\'s Advertisement; 9902492681

ಕೊರೊನಾ ಸೇನಾನಿಗಳಾದ ಮುಖ್ಯಮಂತ್ರಿ ಪದಕ ಪಡೆದ ಕಲಬುರಗಿ ಅಗ್ನಿ ಶಾಮಕ ದಳದ ಸಿಬ್ಬಂದಿಯಾದ ಶ್ರೀ ಯಲ್ಲಪ್ಪಾ ಪೂಜಾರಿ, ಹಿರಿಯ ವೈದ್ಯರಾದ ಡಾ. ಜಗದೀಶ ಬೇನೂರ, ಪತ್ರಿಕಾ ವರದಿಗಾರರಾದ ಶ್ರೀ ಚಂದ್ರು ಹಿರೇಮಠ, ಪೊಲೀಸ ಇಲಾಖೆಯ ಸಿಬ್ಬಂದಿಯಾದ ಶ್ರೀ ರಜನಿಕಾಂತ ಬರೂಡೆ, ಯುವಮುಖಂಡರಾದ ಶ್ರೀ ವೀರೇಶ ಬಿರಾದಾರ ಉಪಳಾಂವರವರಿಗೆ ಸನ್ಮಾನ ಮಾಡಲಾಗುತ್ತಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ವಹಿಸುತ್ತಿದ್ದಾರೆ. ಕೆ.ಎಸ್.ಆರ್.ಪಿ. ಕಮಾಂಡೆಟ್‌ರಾದ ಶ್ರೀ ಬಸವರಾಜ ಜಿಳ್ಳೆ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ವಿಜಯವಾಣಿ ಸ್ಥಾನಿಕ ಸಂಪಾದಕರಾದ ವಾದಿರಾಜ ವ್ಯಾಸಮುದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಲಬುರಗಿ ತಹಸೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಪ್ರಕಾಶ ಕುದರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ ಠಾಕೂರ್, ಜನಪರ ಹೋರಾಟಗಾರರಾದ ಪ್ರಭುದೇವ ಯಳಸಂಗಿ, ಕೆ.ಹೆಚ್.ಬಿ. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜುಕುಮಾರ ಶೆಟ್ಟಿ ಆಗಮಿಸುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here