ಶಹಾಬಾದ: ರಾಜ್ಯ ಸರ್ಕಾರಿ ನೌಕರರಿಗೆ ಶೇ ೧೧% ತುಟ್ಟಿಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಹಾಬಾದ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ ಹರ್ಷ ವ್ಯಕ್ತಪಡಿಸಿದ್ದಾರೆ.\
ಈಗಾಗಲೇ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ೦೧-೦೭-೨೦೨೧ರಿಂದ ಅನ್ವಯವಾಗುವಂತೆ ಶೇ೧೧% ತುಟ್ಟಿಭತ್ಯೆ ಮಂಜೂರು ಮಾಡಿರುವ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಸಹ ಶೇ. ಶೇ೧೧% ತುಟ್ಟಿಭತ್ಯೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಸತತ ಪ್ರಯತ್ನ ಪಟ್ಟು ಸಿಎಂ ಯಡಿಯೂರಪ್ಪನವರಿಗೆ ಮನವರಿಗೆ ಮಾಡಿ ಮನವಿ ಸಲ್ಲಿಸಿದರು.
ಇದರ ಪರಿಣಾಮವಾಗಿ ಸಿಎಂ ಅವರು ರಾಜ್ಯ ಸರ್ಕಾರಿ ನೌಕರರಿಗೆ ಶೇ ೧೧% ತುಟ್ಟಿಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದರಿಂದ ರಾಜ್ಯದ ೬ ಲಕ್ಷ ಸರ್ಕಾರಿ ನೌಕರರಿಗೆ, ೪.೫ಲಕ್ಷ ಕುಟುಂಬ ಪಿಂಚಣಿದಾರರಿಗೆ ಹಾಗೂ ೩ ಲಕ್ಷ ನಿಗಮ ಮಂಡಳಿ ನೌಕರರು ಈ ಸೌಲಭ್ಯವನ್ನು ಪಡೆಯಲಿದ್ದಾರೆ.
ಆದೇಶ ಹೊರಡಿಸಿ ನೌಕರರಿಗೆ ಸೌಲಭ್ಯ ಒದಗಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮತ್ತು ನೌಕರರ ಪರವಾಗಿ ಸತತವಾಗಿ ಪ್ರಯತ್ನ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಈರಣ್ಣ ಕೆಂಭಾವಿ ಅಭಿನಂದಿಸಿದ್ದಾರೆ.