ಈದ್ಗಾ ಭಣಭಣ: ಮಸೀದಿಯಲ್ಲೇ ಈದ್ ನಮಾಜ್

0
18

ವಾಡಿ: ಸ್ಥಳೀಯ ಮುಸ್ಲಿಂ ಬಂಧುಗಳು ಮಹಾಮಾರಿ ಕೊರೊನಾ ನಿಯಮಗಳಡಿ ತ್ಯಾಗ ಬಲಿದಾನದ ಹಬ್ಬ ಬಕ್ರೀದ್ ಸರಳವಾಗಿ ಆಚರಿಸುವ ಮೂಲಕ ಅಲ್ಹಾನ ಸ್ಮರಣೆ ಮಾಡಿದರು.

ಸರಕಾರದ ಆದೇಶ ಹಾಗೂ ಪೊಲೀಸರ ಸೂಚನೆಯಂತೆ ಈದ್ಗಾ ಮೈದಾನಕ್ಕೆ ತೆರಳದೆ ವಿವಿಧ ಮಸೀದಿಗಳಲ್ಲಿ ಕೇವಲ ಐವತ್ತು ಜನರ ಸಹಭಾಗಿತ್ವದಲ್ಲಿ ಸರತಿಯಂತೆ ಸಾಮೂಹಿಕ ನಮಾಜ್ ಕೈಗೊಂಡರು.

Contact Your\'s Advertisement; 9902492681

ಬಕ್ರೀದ್ ಹಬ್ಬದಂದು ಜನರಿಂದ ಜಿನುಗುಡುತ್ತಿದ್ದ ಈದ್ಗಾ ಮೈದಾನ ಈ ಬಾರಿ ನಮಾಜ್ ಮಾಡುವವರಿಲ್ಲದೆ ಭಣಗುಡುತ್ತಿತ್ತು. ನಗರದ ಜಾಮಿಯಾ ಮಸೀದಿ, ಸಾದಿಖಿನ್ ಮಸೀದಿ, ಮೆಕ್ಕಾ ಮಸೀದಿ, ಕಮಲಿವಾಲೆ ಬಾಬಾ ಮಸೀದಿ ಸೇರಿದಂತೆ ಒಟ್ಟು ಐದಾರು ಮಸೀದಿಗಳಲ್ಲಿ ಸಾಮಾಜಿಕ ಅಂತರದಡಿ ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದೂಟ ವಿಶೇಷವಾಗಿ ಮಾಂಸ ಖ್ಯಾದ್ಯಗಳು, ಬಿರಿಯಾನಿ ಮತ್ತು ಸುರುಕುಂಬಾ ಪಾಯಿಸಾ ತಯಾರಿಸಿ ಸವಿದರು. ಬಡಾವಣೆಯ ಅನ್ಯ ಕೋಮಿನ ಕುಟುಂಬಗಳಿಗೆ ಸುರಕುಂಬಾ ಪಾನಿಯ ಕೊಟ್ಟು ಸೌಹಾರ್ಧತೆ ಮೆರೆದರು.

ಸಾಂಕ್ರಾಮಿಕ ರೋಗದ ಭೀತಿಯಿಂದ ಮುಸ್ಲಿಂ ಮುಖಂಡರು ಸಾರ್ವಜನಿಕ ಔತಣಕೂಟಗಳು ಏರ್ಪಡಿಸದೆ ಎಚ್ಚರಿಕೆ ವಹಿಸಿದರು. ಹಬ್ಬದ ನಿಮಿತ್ತ ಪಿಎಸ್‌ಐ ವಿಜಯಕುಮಾರ ಭಾವಗಿ ಅವರು ವಿವಿಧ ಮಸೀದಿಗಳಿಗೆ ಪೊಲೀಸ್ ರಕ್ಷಣೆ ಒದಗಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here