ಕಲಬುರಗಿ: ನಗರದ ಅಮಂತ್ರಣ ಹೋಟಲ್‌ನಲ್ಲಿ ಕೇಂದ್ರದ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ಯ ಯುವ ಕಾಂಗ್ರೇಸ್ ಅಧ್ಯಕ್ಷ ಶಿವಾನಂದ ಹೋನಗುಂಟಿ ಅವರ ನೇತೃತ್ವದಲ್ಲಿ ಕೊರೊನಾ ಸಮಯದಲ್ಲಿ ಹಗಲಿರುಳು ದುಡಿದಂತಹ ಪೌರ ಕಾರ್ಮಿಕರಿಗೆ ಸೀರೆಗಳು, ಹಾಗೂ ಬಟ್ಟೆಗಳು ಶಾಸಕಿ ಖನಿಜ್ ಫಾತಿಮಾ ಅವರು ನೀಡಿ ಸನ್ಮಾನಿಸಲಾಯಿತು.
ಮುಖಂಡರಾದ ಫರಾಜ್ ಉಲ್ ಇಸ್ಲಾಂ, ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ್ ಹರವಾಳ, ಮಜರ್ ಆಲಂ ಖಾನ್, ಅರುಣಕುಮಾರ ಪಾಟೀಲ್, ಫಾರೂಖ್ ಸೆಠ್, ಶರಣಗೌಡ ಪಾಟೀಲ್, ಅಶ್ವಿನ ಸಂಕಾ, ಪರಶುರಾಮ ನಾಟೇಕರ್, ಪ್ರಕಾಶ ಕಪನೂರ, ಶರಣು ಡೋಣಗಾವ, ಡಾ.ಅರವಿಂದ ಕಟ್ಟಿ, ಚಿದಾನಂದ ಹೋನಗುಂಟಿ, ಲಕ್ಕಪ್ಪ ಜವಳಿ, ಕಾಂತು ಒಚಿಟಿ, ಜಗನ್ನಾಥ ಪಟ್ಟಣಶೇಟ್ಟಿ ಇದ್ದರು.