ಜೀವನದಲ್ಲಿ ಗುರುಗಳ ಪಾತ್ರ ತುಂಬಾ ದೊಡ್ಡದು

0
64

ಹೌದು ವಿದ್ಯಾರ್ಥಿ ಕಷ್ಟದಲ್ಲಿದ್ದಾಗ, ಅವರಿಗೆ ಹೆಗಲಾಗಿ ನಿಲ್ಲುವವರೇ ನಿಜವಾದ ಗುರುಗಳು.ನನ್ನ ಕಷ್ಟಕ್ಕೆ ಹೆಗಲಾದ ನನ್ನ ಗುರುವಿಗೆ ಗುರುಪೂರ್ಣಿಮೆಯ ಶುಭಾಶಯ. ವಿದ್ಯಾರ್ಥಿಗಳಿಗೆ ಅವರು ಯಾವ ಹಂತಕ್ಕೆ ಹೋಗಿರುತ್ತಾರೋ ಅದಕ್ಕೆ ಮುಖ್ಯ ಕಾರಣಿಭುತ್ತಾರೆ ಗುರುಗಳು ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಅವರ ಜೀವನದಲ್ಲಿ ಅವರ ಪಾತ್ರ ತುಂಬಾ ದೊಡ್ಡದು

ನನ್ನ ತಾಯಿ ವಿದ್ಯಾವಂತಳಾಗಿ ಇರಲಿ ಆಗದೇ ಇರಲಿ ಅವಳೇ ನನ್ನ ಮೊದಲ ಗುರು ಪ್ರೀತಿಯಿಂದ ಮಾತು ಕಲಿಸಿ,ಸಾಕಿ ಸಲಹಿ ಬದುಕು ಕಲಿಸಿ ಸರಿ-ತಪ್ಪು ತಿಳಿಸಿದ ನನ್ನ ತಾಯಿಗೆ ಕೋಟಿ ಕೋಟಿ ನಮನ ಗಳನ್ನು ಸಲ್ಲಿಸುತ್ತೇನೆ. ಅಜ್ಞಾನದಲ್ಲಿ ಜ್ಞಾನವನ್ನು ಪಡೆದು ಕೊಳ್ಳುವಂತೆ ಮಾಡಿದ ನನ್ನ ಎಲ್ಲಾ ಗುರುಗಳಿಗೂ ಗುರು ಪೂರ್ಣಿಮೆಯ ಶುಭಾಶಯಗಳನ್ನು ಹೇಳುತ್ತಾ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.

Contact Your\'s Advertisement; 9902492681

ನಾವುಗಳು ನಮ್ಮ ಜೀವನದಲ್ಲಿ ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಅದರಲ್ಲಿ ಗುರುವಿನ ಪಾತ್ರ ತುಂಬಾ ದೊಡ್ಡದಾಗಿರುತ್ತದೆ. ಗುರು ಎಂದರೆ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನದ ಕಡೆ ಕೊಂಡೊಯ್ಯುವುದೇ ಎಂದರ್ಥ. ಹಿಂದಿನ ಕಾಲದಿಂದಲೂ ಒಂದು ಮಾತು ಹೇಳುತ್ತಾರೆ ಅದೇನೆಂದರೆ ಜ್ಞಾನವಿಲ್ಲದೆ ಮುಕ್ತಿಯಿಲ್ಲ ಎಂಬ ಮಾತು.

ಎಲ್ಲಿಯವರೆಗೆ ಕರ್ಮಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಈ ಬ್ರಹ್ಮ ನೋಡಲಿ ಒಂದಾಗಲು ಸಾಧ್ಯವಿಲ್ಲ. ಜ್ಞಾನವನ್ನು ಕೊಡುವವರೇ ಗುರುಗಳು ಮೊದಲ ಬಾರಿಗೆ ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದರು ಎನ್ನಲಾಗುತ್ತದೆ. ಇದೇ ಕಾರಣದಿಂದ ಅವರನ್ನು ಮೊದಲ ಗುರು ಎಂದೂ ಕೂಡ ಕರೆಯಲಾಗುತ್ತದೆ. ಈ ವರ್ಷ ಗುರು ಪೂರ್ಣಿಮಾ ಜುಲೈ 24 ರಂದು ಆಚರಿಸಲಾಗುತ್ತಿದೆ.

ವಿದ್ಯಾರ್ಥಿಗಳಾದವರ ಮೊದಲ ಕರ್ತವ್ಯವೆಂದರೆ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳುವುದು. ಪಠ್ಯವಸ್ತುವಿನಲ್ಲಿರುವ ವಿವಿಧ ವಿಷಯಗಳನ್ನು ಬೋಧಿಸಲು ತರಗತಿಗೆ ಬರುವ ಎಲ್ಲ ಶಿಕ್ಷಕರನ್ನು ಸಮಾನವಾಗಿ ಗೌರವಿಸಿ. ಯಾವುದೇ ಭೇದಭಾವ ಬೇಡ. ಯಾವ ಶಿಕ್ಷಕರ ಬಗ್ಗೆಯೂ ಪೂರ್ವಗ್ರಹ ಇಟ್ಟುಕೊಳ್ಳಬೇಡಿ. ಎಲ್ಲ ಶಿಕ್ಷಕರ ಬಳಿ ನಡವಳಿಕೆ ಒಂದೇ ರೀತಿ ಇರಬೇಕು.

ಅನುಭವದಿಂದ ಕೂಡಿರುವ ಅವರ ಬೋಧನೆಯಿಂದ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಗುರು-ಶಿಷ್ಯರ ಸಂಬಂಧ ಪರಸ್ಪರ ಏಳೇಳು ಜನುಮಕ್ಕೂ ಮಿಗಿಲಾದ ಸಂಬಂಧ. ನಾವು ನಮ್ಮ ಶಿಕ್ಷಕರ ಬಗ್ಗೆ ಎಷ್ಟು ವಿಶ್ವಾಸ ತೋರಿಸುತ್ತೀರೋ ಅಷ್ಟೇ ವಿಶ್ವಾಸವನ್ನು ನಮ್ಮ ಶಿಕ್ಷಕರು ನಮ್ಮ ಬಗ್ಗೆ ತೋರುತ್ತಾರೆ.

ನಮ್ಮ ಮತ್ತು ನಮ್ಮ ಶಿಕ್ಷಕರ ನಡುವೆ ಬೆಳೆದುಬಂದಿರುವ ವಿಶ್ವಾಸವ, ನಂಬಿಕೆ ಎಲ್ಲಾವನ್ನು ಶಿಕ್ಷಕರು ತಮ್ಮ ಜೀವನವಿಡೀ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ನಾವು ಶಾಲೆ ಬಿಟ್ಟ ನಂತರವೂ ನಮ್ಮ ಶಿಕ್ಷಕರ ಬಗ್ಗೆ ಅದೇ ವಿಶ್ವಾಸ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕು ನಾನು ಆ ನಂಬಿಕೆಗೆ ಬದ್ದವಾಗಿರುತ್ತೇನೆ ಎಂದು ಹೇಳಬಯಸುತ್ತೇನೆ.

ವಿದ್ಯೆಯ ಒಂದು ಕಲೆ ಅದನ್ನು ಕಲಿಯಲೇಬೇಕು ತಲೆ ಕಲಿತ ಮೇಲೆ ಸಿಗುವುದು ಅದರ ಬೆಲೆ ಆ ಬೆಲೆಯನ್ನು ನಾನು ಪಡೆದಿರುವುದು ನನ್ನ ಈ ಗುರುಗಳಿಂದ. ಈ ದಿನ ಮಹರ್ಷಿ ವೇದವ್ಯಾಸ್ ಜಿ ಜನಿಸಿದ್ದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಗುರು ಪೂರ್ಣಿಮವನ್ನು ವ್ಯಾಸ್ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.

ಗುರು ಪೂರ್ಣಿಮಾದಂದು ಗುರುವನ್ನು ಆರಾಧಿಸಲಿಚ್ಛಿಸುವ ಶಿಷ್ಯರು ಪೂಜೆಯನ್ನು ಸಲ್ಲಿಸುತ್ತಾರೆ. ಗುರು ಪೂರ್ಣಿಮಾವನ್ನು ವ್ಯಾಸ ಪೂರ್ಣಿಮಾವೆಂದೂ ಕೂಡ ಕರೆಯಲಾಗುತ್ತದೆ. ಮತ್ತು ಈ ದಿನವನ್ನು ವೇದವ್ಯಾಸರ ಜನ್ಮದಿನವೆಂದೂ ಕೂಡ ಆಚರಿಸಲಾಗುತ್ತದೆ. ವೇದವ್ಯಾಸರ ಜನ್ಮದಿನದ ಸ್ಮರಣಾರ್ಥವಾಗಿ ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತದೆ. ವೇದ ವ್ಯಾಸರು ಉತ್ತಮ ಲೇಖಕ, ಜ್ಞಾನಿ, ಗುರು ಹಾಗೂ ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಇವರ ಪಾತ್ರ ಮುಖ್ಯವಾದುದಾಗಿತ್ತದೆ.

ಗುರುಬ್ರಹ್ಮ ಗುರುರ್ವಿಷ್ಣುಃ, ಗುರುದೇವೋ ಮಹೇಶ್ವರಃ, ಗುರುಸಾಕ್ಷಾತ್ ಪ್ರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ಗುರುವೆಂದರೆ ಕೇವಲ ಶಿಕ್ಷಕರಲ್ಲ, ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ, ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮೆಯ ಶುಭಾಶಯಗಳು ಮುಂದೆ ಗುರಿ ಇರಬೇಕು ಹಿಂದೆ ಗುರುವಿದ್ದರೆ ಜಯ ಎನ್ನುವುದು ನಮ್ಮದೇ.. ಈ ವಿಜಯಕ್ಕೆ ಕಾರಣೀಭೂತರಾದ ನನ್ನೆಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯ ಗುರು ಎಂದರೆ ವ್ಯಕ್ತಿಯಲ್ಲ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ, ನನ್ನೆಲ್ಲಾ ಪ್ರೀತಿಯ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯ.

ಬಂಡೆ ಮೇಲೆ ನಿಲ್ಲಬಾರದು ನಿಂತಿದ್ದರೆ ಜರಬಾರದು ಜಾರಿದರೆ ಗುರುಗಳು ಎಂಬ ನಾಲ್ಕು ಅಕ್ಷರ ಮರೆಯಬಾರದು ನಾನು ಎಂದು ನನ್ನ ಎಲ್ಲಾ ಗುರುಗಳನ್ನು ಸದಾ ನನ್ನ ಮನದಲ್ಲಿ ನೆನೆಯುತ್ತಾ ಇರುತ್ತೇನೆ. ಗುರುಗಳೇ ನಮಗೆ ದಾರಿದೀಪ ನೀಡುವವರು ನಮ್ಮ ಜ್ಞಾನಕ್ಕೆ ಸ್ಪಷ್ಟರೂಪ ಇವರೆ ನಮ್ಮ ಪ್ರೀತಿಯ ಹೆಮ್ಮೆಯ ಗುರುಗಳು. ಕೊನೆಯದಾಗಿ ನನ್ನ ಸಾಧನೆಗೆ ಸ್ಪೂರ್ತಿ ಬದುಕಿಗೆ ದಾರಿ ತೋರಿದ ಗುರುವಿನ ಆಶೀರ್ವಾದ ಯಾವಾಗಲೂ ಸದಾ ನನ್ನ ಮೇಲೆ ಇರಲಿ ಎಂದು ಆಶಿಸುತ್ತೇನೆ.

-ಕಾಶಿಬಾಯಿ. ಸಿ. ಗುತ್ತೇದಾರ

ಪತ್ರಿಕೋದ್ಯಮ ವಿದ್ಯಾರ್ಥಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here