ಹೊನ್ನಕಿರಣಗಿ ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ

0
60

ಕಲಬುರಗಿ: ಫರಹತಾಬಾದ – ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದ ಲಿಂಗೈಕ್ಯ ಶ್ರೀ ಕರಿಬಸವೇಶ್ವರ ಗದ್ದಿಗೆ ಆವರಣದಲ್ಲಿ ಮಠದ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ಚಂದ್ರಗುಂಡ ಶಿವಾಚಾರ್ಯರಿಗೆ ಗುರು ಪೌರ್ಣಿಮೆ ನಿಮಿತ್ಯ ಗುರುವಂದನೆ ಕಾರ್ಯಕ್ರಮವನ್ನು ಶ್ರೀಮಠದ ಭಕ್ತರೆಲ್ಲರೂ ಭಕ್ತಿಯಿಂದ ಹಾಗೂ ಶ್ರೀಮಠದ ವೈಧಿಕ ಬಳಗ ವೇದಘೋಷ ಮಂತ್ರಘೋಷದಿಂದ ಶಾಸ್ತ್ರೋಕ್ತವಾಗಿ ಗುರುವಿಗೆ ವಂದನೆ ಸಲ್ಲಿಸಿದರು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು ಮಹರ್ಷಿ ವೇದ ವ್ಯಾಸರು ವೇದಗಳ ಜ್ಞಾನವನ್ನು ಮಾನವಕುಲಕ್ಕೆ ನೀಡಿದ ಮೊದಲ ಗುರುವಾಗಿದ್ದಾರೆ. ಅವರ ಜನ್ಮದಿನವನ್ನು ಗುರುಪೂರ್ಣಿಮಾವಾಗಿ ಆಚರಿಸಲಾಗುತ್ತಿದೆ.  ಗುರು ಎಂದರೆ ವ್ಯಕ್ತಿಯಲ್ಲ ಅದು ಒಂದು ಶಿಷ್ಯನ ಶಕ್ತಿ ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಶಕ್ತಿ ಗುರುವಿಗಿದೆ. ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೋಬ್ಬರು ಗುರುಗಳೇ, ಗುರುವಿನ ಗೌರವಕ್ಕಾಗಿ ಆಷಾಡ ಮಾಸದ ಶುಕ್ಲಪಕ್ಷದಂದು ಬರುವ ಹುಣ್ಣಿಮೆಯಂದು ಗುರುಪೌರ್ಣಿಮಾ ಉತ್ಸವ ಆಚರಿಸಲಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಈ ಗುರುವಂದನ ಕಾರ್ಯಕ್ರಮವು  ಕೋರವಾರ ಅಣ್ಣವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಅಂಬರೀಶ ಮಹಾಸ್ವಾಮಿಗಳು, ವೇ.ಮೂ ಕರಣಯ್ಯ ಸ್ವಾಮಿ ಸ್ಥಾವರಮಠ, ವೀರೇಶಶಾಸ್ತ್ರಿ ದೇಸಾಯಿಮಠ ಇವರ ವೈಧಿಕ ಬಳಗವು ನಡೆಸಿಕೊಟ್ಟರು. ಭಕ್ತರಾದ ಅಮ್ಮಯ್ಯ ಸ್ವಾಮಿ , ಪ್ರಶಾಂತ ಶಾಸ್ತ್ರಿ, ರಾಜು ಮಠ, ನಾಗರಾಜ ಮುಸಾವಳಗಿಯವರು ಶ್ರೀಗಳ ಗುರುಪಾದ ಪೂಜೆಯನ್ನು  ಮಾಡಿದರು. ಬಸವರಾಜ ಹೀರೇಮಠ ಹಾಗೂ ಗೌರಿಶಂಕರ ಹಿರೇಮಠ ಗುರುವಿಗೆ ಮಹಾ ಮಂಗಳಾರತಿ ಮಾಡಿದರು.

ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶಿವಪುತ್ರ ಹಲಚೇರಿ, ಸಂಗಣಗೌಡ ಇಂಗಳಗಿ, ಪ್ರಕಾಶ ಮುಡ್ಡಿ, ಬಸವರಾಜ ತುಪ್ಪದ, ವಿಕಾಸ ಸಾಲಿಮಠ, ರಾಚಯ್ಯ ನಂದಿಕೋಲ, ನಾಗಯ್ಯ ಮದ್ರಿ, ಮಾಂತಯ್ಯ ಫರಹತಾಬಾದ, ಗುರುಸಿದ್ಧಯ್ಯ ಪುರವಂತ, ವಿಶ್ವನಾಥ ನಾಯ್ಕಲ, ಕೇಶವರಾವ ಪಾಟೀಲ್, ಅಖಂಡಪ್ಪ ಶಿರವಾಳ, ಶಿವು ತುಪ್ಪದ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here