ಕಲಬುರಗಿ: ಹಿಂದೂ ಸಂಪ್ರದಾಯದಲ್ಲಿ ಗುರುವಿಗೆ ಗೌರವಿಸುವ ಪದ್ದತಿ ಎಂದಿಗೂ ಇದೆ. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ತಪ್ಪುಗಳನ್ನು ತಿದ್ದಿ ಮುನ್ನಡೆಸಿ, ಸೋತಾಗ ಧೈರ್ಯ ತುಂಬಿ, ಗೆದ್ದಾಗ ಬೆನ್ನು ತಟ್ಟಿ ಹುರಿದುಂಬಿಸುವವರೇ ಗುರುಗಳು. ಆದೇ ರೀತಿ ಗುರುವಿಗೆ ಗೌರವ ನೀಡುವ ಈ ವಿಶೇಷ ದಿನ ಗುರು ಪೂರ್ಣಿಮೆಯ ದಿನದಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ವಿಧ್ಯಾಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜೀ ಹಾಗೂ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪಾ ಅಪ್ಪಾಜೀ ಅವರಿಗೆ ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಸಂಸ್ಥಾನದ ಮಹಾಮನೆಯಲ್ಲಿ ಗುರುವಂದನೆ ಸಲ್ಲಿಸಿ ಗುರು ಪೂರ್ಣಿಮೆ ಆಚರಣೆ ಮಾಡಲಾಯಿತು.
ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ದಾಸೋಹ ಮಹಾಮನೆಯಲ್ಲಿ ಸರಳವಾಗಿ ನಡೆದ ಈ ಆಚರಣೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ವತಿಯಿಂದ ಕುಲಪತಿ ಡಾ. ನಿರಂಜನ್.ವಿ.ನಿಷ್ಠಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಗುರುಗಳ ಸ್ಥಾನದಲ್ಲಿರುವ ಡಾ.ಅಪ್ಪಾಜೀ ಹಾಗೂ ಡಾ.ಅವ್ವಾಜೀ ಅವರಿಗೆ ಸನ್ಮಾನಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ. ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಮತ್ತು ಡಾ.ಬಸವರಾಜ ಮಠಪತಿ, ಸಮೂಹ ಸಂವಹನ ವಿಭಾಗದ ಟಿ.ವಿ.ಶಿವಾನಂದನ್, ಇಂಗ್ಲೀಷ ವಿಭಾಗದ ಎಸ್.ಜಿ.ಡೊಳ್ಳೆಗೌಡರ, ಕಂಪ್ಯೂಟರ ಸೈನ್ಸ್ ವಿಭಾಗದ ಕಿರಣ ಮಾಕಾ ಸೇರಿದಂತೆ ಇತರರು ಭಾಗವಹಿಸಿದ್ದರು.