ಕಲಬುರಗಿ: ದೇಶದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶ ಹೈದ್ರಾಬಾದ ಕರ್ನಾಟಕದ ಕಲಬುರಗಿ ಜಿಲ್ಲೆ, ಇಲ್ಲಿಯ ಜನರ ಆರ್ಥಿಕ ಸ್ಥಿತಿಗತಿಯೂ ದುಸ್ತರವಾಗಿದೆ, ಕಾಲಕಾಲಕ್ಕೆ ಮಳೆ ಬರದೇ ಇರುವುದರಿಂದ ಇಲ್ಲಿಯರೈತರ ಸ್ಥಿತಿ ಅತ್ಯಂತ ಹೀನಾಯವಾಗಿದೆ, ಇಲ್ಲಿಯ ವೀರಶೈವ ಲಿಂಗಾಯತರು ಹೆಚ್ಚು ಜನ ಕೃಷಿ ಅವಲಂಬಿತರಾಗಿದ್ದಾರೆ, ಕಷ್ಟಪಟ್ಟು ದುಡಿದು ಬಂದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಎಸ್.ಪಾಟೀಲ್ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಪ್ರೀಯಾಂಕ್ ಖರ್ಗೆ ಅವರಿಗೆ ಮನವಿಯನ್ನು ಸಲ್ಲಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಲಬುರಗಿಗೆ ಕಳುಹಿಸಿ ಓದಿಸುವುದು ಕಷ್ಟಸಾಧ್ಯ ಅದರಲ್ಲಿಯೂ ಮಹಿಳೆಯರಿಗೆ ನಗರಕ್ಕೆ ಕಳುಹಿಸಿ ವಿದ್ಯಾಭ್ಯಾಸ ಮಾಡಿಸುವುದು ಇನ್ನು ದುಸ್ತರ ಏಕೆಂದರೆ ಕಲಬುರಗಿಯಲ್ಲಿ ವಿದ್ಯಾರ್ಥಿನಿಯರಿಗೆ ಊಟ ಮತ್ತು ವಸತಿ ಸೌಕರ್ಯ ಇರುವುದಿಲ್ಲ. ಸರಕಾರದಿಂದ ನಮ್ಮ ಸಮಾಜದ ವಿದ್ಯಾರ್ಥಿನಿಯರಿಗೆ ಯಾವುದೆ ಹಾಸ್ಟಲ್ ಸೌಲಭ್ಯಗಳು ಇಲ್ಲದಿರುವುದರಿಂದ ವೀರಶೈವ ಲಿಂಗಾಯತ ಮಹಾಸಭಾ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಅನುಕುಲವಾಗುವಂತೆ ಸುಮಾರು 150 ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಮಾಡಲು ಈಗಾಗಲೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 26 ಲಕ್ಷ ಭರಿಸಿ ಗುಲಬರ್ಗಾ ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಎ ಸೈಟ್ ಪಡೆದಿದ್ದು ಕಟ್ಟಡ ಪರಿವಾನಿಗೆಯೂ ಪಡೆಯಲಾಗಿದೆ. ಈ ಕಟ್ಟಡ ಕಾಮಗಾರಿಗೆ ೪.೦ ಕೋಟಿ ರೂ. ಅಂದಾಜು ವೆಚ್ಚ ಆಗಲಿದ್ದು, ಸರಕಾರದಿಂದ ಸುಮಾರು ೩ ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾಉಸ್ತುವಾರಿ ಸಚಿವರಾದ ತಾವು ಮುತುವರ್ಜಿ ವಹಿಸಿ ಮುಖ್ಯಮಂತ್ರಿಗಳ ಅನುದಾನದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸಲು ಕೋರುತ್ತೇವೆ. ತಮ್ಮಿಂದ ಮಾತ್ರ ಈ ಕೆಲಸ ಮಾಡಿಕೊಡಲು ಸಾಧ್ಯವಿರುತ್ತದೆ ಎಂದು ಮನಗಂಡು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ವೀರಶೈವ ಲಿಂಗಾಯತದಲ್ಲಿ ಸುಮಾರು 99 ಉಪ ಜಾತಿಗಳಿವೆ ಅವೆಲ್ಲವೂ ಕಾಯಕದಿಂದ ಬಂದ ಜಾತಿಗಳಾಗಿವೆ, ಎಲ್ಲರು ಹಿಂದುಳುದವರಾಗಿದ್ದು ಅವರೆಲ್ಲರಿಗೂ ಅನಿಕೂಲವಾಗುವಂತೆ ಈ ಹಾಸ್ಟಲ್ ನಿರ್ಮಿಸುತ್ತಿದ್ದೇವೆ. ತಾವು ಈ ಕೆಲಸವನ್ನು ತಾವು ಮಾಡಿಸುತ್ತೀರಿ ಎಂದು ನಂಬಿ ತಮಗೆ ಈ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ಅರುಣಕುಮಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣಪ್ಪ ಪಾಟೀಲ ಮಳಖೇಡ, ಎಸ್.ವ್ಹಿ. ಮಠಪತಿ, ಸಾತಪ್ಪ ಪಟ್ಟಣಕರ್, ಡಾ. ಶ್ರೀಶೈಲ ಘೂಳಿ, ಸುರೇಶ ಪಾಟೀಲ ಜೋಗುರ, ಈರಣ್ಣಾ ಗೂಳೇದ, ವಿವೇಕ ಬಿರಾದಾರ ಇನ್ನಿತರರು ಉಪಸ್ಥಿತರಿದ್ದರು.