ಕಲಬುರಗಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ನಗರದ ತಿಮ್ಮಪೂರಿ ಚೌಕಿನಿಂದ ಡಿಸಿ ಆಫೀಸ್ ವರೆಗೆ ಮಾರ್ಚ್ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ ಪ್ರತಿಭಟನೆಯ ನೇತೃತ್ವಹಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ಮಾತನಾಡಿ ಕರ್ನಾಟದ ಸೌಹಾರ್ದತೆಯ ಮಣ್ಣಿನಲ್ಲಿ ವಿಭಜನಾಕಾರಿಯಾದ ಎನ್.ಇ.ಪಿ ನೀತಿಯನ್ನು ಜಾರಿಗೊಳಿಸಲು ಕ್ಯಾಂಪಸ್ ಫ್ರಂಟ್ ಬಿಡುವುದಿಲ್ಲ, ಹೊಸ ರಾಷ್ಟೀಯ ಶಿಕ್ಷಣ ನೀತಿಯು ಕೇವಲ ಬಂಡವಾಳಶಾಹಿಗಳ ಹಿತವನ್ನು ಕಾಪಾಡುವ ಹಾಗೂ ಹಿಂದುತ್ವ ಸಿಧ್ದಾಂತವನ್ನು ಶಿಕ್ಷಣದ ಮುಖಾಂತರ ಹೇರಿಕೆಗೊಳಿಸುವ ಒಂದು ಕರಡು ಪ್ರತಿಯಾಗಿದ್ದು ಇದರಲ್ಲಿ ಸರ್ಕಾರ ಹೇಳುವಂತೆ ಯಾವುದೇ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸುವ ವಿಷಯಗಳನ್ನು ಒಳಗೊಂಡಿಲ್ಲ ಎಂಬ ವಿಷಯವನ್ನು ಎಲ್ಲರೂ ಅರ್ಥೈಸಬೇಕಾಗಿದೆ ಎಂದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಸರ್ಫರಾಝ್ ಗಂಗಾವತಿ ಮಾತನಾಡಿ ಎನ್.ಇ.ಪಿ ಯನ್ನು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಇದರಿಂದ ಶಿಕ್ಷಕರಿಗೆ ಒಳಗೊಂಡಂತೆ ಎಲ್ಲರೂ ತೊಂದರೆಗೆ ಒಳಪಡುತ್ತಾರೆ, ಎಲ್ಲಾ ವಿದ್ಯಾರ್ಥಿಗಳು , ಶಿಕ್ಷಕರು ಇದನ್ನು ತೀವ್ರವಾಗಿ ವಿರೋಧಿಸಬೇಕೆಂದು ಕರೆ ನೀಡಿದರು.
ಕ್ಯಾಂಪಸ್ ಫ್ರಂಟ್ ಗುಲ್ಬರ್ಗ ಜಿಲ್ಲಾ ಸಮಿತಿ ಸದಸ್ಯರಾದ ಶಮಾಮ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಗುಲ್ಬರ್ಗ ಜಿಲ್ಲಾಧ್ಯಕ್ಷರಾದ ಇರ್ಫಾನ್ ಖಾನ್,ಜಿಲ್ಲಾ ಕಾರ್ಯದರ್ಶಿ ಸುಹೈಬ್ ಇಳಿಯಾ ಹಾಗೂ ಸಮಿತಿ ಸದಸ್ಯರು, ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.