ಕಲಬುರಗಿ: ಅಗಸ್ಟ್ ೧ ರಂದು ಸಾಹಿತ್ಯ ಸಾಮ್ರಾಟ್ ಲೋಕಶಾಹಿರ ಅಣ್ಣಾಭಾವು ಸಾಠೆ ಅವರ ೧೦೧ನೇ ಜಯಂತಿಯನ್ನು ಸರಳವಾಗಿ ಕೋವಿಡ್-೧೯ ರ ನಿಯಮಗಳನ್ನು ಪಾಲಿಸುವುದರೊಂದಿಗೆ ಅಂದು ಬೆಳಿಗ್ಗೆ ೧೦-೩೦ಕ್ಕೆ ನಗರದ ಕನ್ನಡ ಭವನದಲ್ಲಿ ಅಣ್ಣಾಬಾವು ಸಾಠೆ ಮಾದಿಗ ಮಹಾಸಭಾದ ವತಿಯಿಂದ ಮಾದಿಗ ಹಿರಿಯ ಮುಖಂಡರಾದ ದಶರಥ ಕಲಗುರ್ತಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಿಗ ಸಮಾಹ ಸಮನ್ವಯ ಸಮಿತಿಯ ಅಧ್ಯಕ್ಷ ಪರಮೇಶ್ವರ ಖಾನಾಪೂರ ಅವರು ವಹಿಸಲಿದ್ದಾರೆ. ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಭೀಮಣ್ಣ ಬಿಲ್ಲವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಫಾಯಿ ಕರ್ಮಚಾರಿ ರಾಜ್ಯ ಸದಸ್ಯರಾದ ಗೀತಾ ವಾಡೇಕರ್ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಶಾಮ ನಾಟೀಕರ್, ಡಿಎಂಎಸ್‌ಎಸ್‌ನ ರಾಜ್ಯಾಧ್ಯಕ್ಷ ಲಿಂಗರಾಜ ತಾರಪೈಲ್, ರಾಜು ವಾಡೇಕರ್, ಗೋಪಿಕೃಷ್ಣ ಗುಡೇನವರ್, ಮಾದಿಗ ದಂಡೋರ ರಾಜ್ಯ ಯುವ ಘಟಕದ ಅಧ್ಯಕ್ಷ ಗುರು ಭಂಡಾರಿ, ಮಹೇಶ ವಾಡೇಕರ್, ಬಾಬು ಸುಂಠಾಣ, ರಾಜು ಕಟ್ಟಿಮನಿ, ರಮೇಶ ವಾಡೇಕರ್, ಸಮಾಜದ ಮುಖಂಡರಾದ ದಶರಥ ದುಮ್ಮನಸೂರ, ಪ್ರದೀಪ ಭಾವೆ ಮತ್ತು ಸಮಾಜದ ಹಿರಿಯ ಮುಖಂಡರು, ಯುವನಾಯಕರು, ಸಮಾಜದ ಹಿತಚಿಂತಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ರಾಜ್ಯಾಧ್ಯಕ್ಷ ನಾಗರಾಜು ಗುಂಡಗುರ್ತಿ ಅವರು ಪತ್ರಿಕಾ ಪ್ರಕಟಣೆಯನ್ನು ಮನವಿ ಮಾಡಿದ್ದಾರೆ.