ಸುರಪುರ: ಮುಂಬರುವ ದಿನಗಳಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ ಹಾಗು ಯುವ ಘಟಕದಿಂದ ತಾಲೂಕಿನಾದ್ಯಂತ ಸಂಘಟನಾ ಚಟುವಟಿಕೆ ಮತ್ತು ಯುವ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷ ಶಿವರಾಜ ಕಲಕೇರಿ ಮಾತನಾಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಯುವ ಘಟಕದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ತಾಲೂಕಿನ ಪ್ರತಿ ಗ್ರಾಮದಲ್ಲಿ ಯುವ ಘಟಕದ ಸದಸ್ಯತ್ವ ಅಭಿಯಾನ ನಡೆಸುವ ಮೂಲಕ ವೀರಶೈವ ಲಿಂಗಾಯತ ಸಮುದಾಯದ ಒಗ್ಗಟ್ಟು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಎಲ್ಲಾ ಸಮುದಾಯದ ಯುವಕರನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಅಡಿಯಲ್ಲಿ ತಂದು ಸಂಘಟನೆಯನ್ನು ಬಲ ಪಡಿಸುವ ಮೂಲಕ ವೀರಶೈವ ಲಿಂಗಾಯತ ಸಮಾಜದ ಅಭೀವೃಧ್ಧಿಗೆ ಎಲ್ಲರು ಒಂದಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಆ ನಿಟ್ಟಿನಲ್ಲಿ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವ ಘಟಕದ ನಗರ ಉಪಾಧ್ಯಕ್ಷ ಸೂಗುರೇಶ ಸಜ್ಜನ್,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸುಬೇದಾರ ಮಾತನಾಡಿದರು.ಸಭೆಯಲ್ಲಿ ನಗರ ಯುವ ಘಟಕದ ಮಂಜುನಾಥ ಮಠಪತಿ,ಮಲ್ಲು ಹೂಗಾರ್,ಲಿಂಗರಾಜ್ ಶಾಬಾದಿ,ಮಲ್ಲು ಪಾಟೀಲ್,ಭಾಗೇಶ ಕಾಳಗಿ,ಆನಂದ ಕುಂಬಾರ,ಅಜಯ್ ಕುಮಾರ್,ಶಿವಕಾಂತ ಹೂಗಾರ್ ಸೇರಿದಂತೆ ಅನೇಕರಿದ್ದರು.