ಜೇವರ್ಗಿಯಲ್ಲಿ ಗ್ರಾಮದೇವತೆ ಮರಿಯಮ್ಮ( ಮಹಾಲಕ್ಷ್ಮಿ) ದೇವಿ ಮಹಾಪರ್ವ

0
1

ಜೇವರ್ಗಿ;  ಜೇವರ್ಗಿ ತಾಲೂಕಿನ ಜೇವರ್ಗಿ ಪಟ್ಟಣದಲ್ಲಿ ಹೊರವಲಯದ ಕಲಬುರಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಲಗಡೆ ಊರಹೊರಗೆ (ಮರಿಯಮ್ಮ) ಮಹಲಕ್ಷ್ಮಿ ದೇವಸ್ಥಾನದ( ತಳ) ಸ್ಥಳ ಎಂದು ಕರೆಯಲ್ಪಡುವ ಹೊಲದಲ್ಲಿ ಇಂದು ಮಹಾಲಕ್ಷ್ಮಿ ಪರ್ವ ನಡೆಯಿತು.

ಕಳೆದ ವರ್ಷ ಲಾಕ್ಡೌನ್ ಹಾಗೂ ಕರೋನಾ ಪರಿಣಾಮದಿಂದ ಜನರು ಸೇರಲು ತೊಂದರೆಯಾಗಿ, ಈ ಬಾರಿ ಸಾವಿರಾರು ಜನರು ಇಲ್ಲಿಗೆ ಆಗಮಿಸಿ ಪರ್ವದಲ್ಲಿ ಭಾಗವಹಿಸಿ, ತಮ್ಮ ತಮ್ಮ ಮನೆಗಳಿಂದ ರೊಟ್ಟಿ ಬುತ್ತಿಗಳನ್ನು ಕಟ್ಟಿಕೊಂಡು ಬಂದು ಹೋಳಿಗೆ ಹಾಗೂ ಸಿಹಿ ಊಟವನ್ನು ಸವಿದು ವನಭೋಜನದ ಅನುಭವವನ್ನು ಪಡೆದರು.

Contact Your\'s Advertisement; 9902492681

ಭಕ್ತಿಯ ಭಾವಪರವಶರಾದ ಜನರು ಕರೋನಾ ಮಹಾಮಾರಿಯ ಅಲೆಯನ್ನು ಮರೆತು ಇಲ್ಲಿ ಸೇರಿದ್ದು ಕಂಡುಬಂದಿತು .
ಈ ಮಧ್ಯದಲ್ಲಿ ಜೀವರ್ಗಿ ಪೊಲೀಸ್ ಠಾಣೆ ಪೊಲೀಸರು ಸೂಕ್ತ ಭದ್ರತೆಯನ್ನು ಸಹ ಕೈಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here