ಶಹಾಬಾದ: ಸರ್ಕಾರಿ ಸೇವಾವಧಿಯ ನಂತರದ ನಿವೃತ್ತಿ ಜೀವನ ನಿಮ್ಮ ನೆಮ್ಮದಿಯ ಸುಖ, ಸಂತೋ?ದ ಕ್ಷಣಗಳನ್ನು ತರುವಂತಾಗಲಿ ಎಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೆದಾರ ಹೇಳಿದರು.
ಅವರು ಸಮೀಪದ ಧರ್ಮಾಪೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿ ಅನ್ನಪೂಣ್.ಜಿ.ತವಡೆ ಅವರ ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಆಯೋಜಿಸಲಾದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ. ಅಧಿಕಾರವಿದ್ದಾಗ ಸರ್ವರೊಂದಿಗೆ ಹೊಂದಾಣಿ ಮಾಡಿಕೊಂಡು ನ್ಯಾಯಯುತವಾಗಿ ಕೆಲಸ ಮಾಡಿದಲ್ಲಿ ನಿವೃತ್ತಿ ನಂತರ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.
ನಂದೂರ ಗ್ರಾಮದ ಮುಖಂಡರಾದ ನಾಗರಾಜ ಕಲ್ಲಾ ಮಾತನಾಡಿ, ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರಿಗೆ ಮಾತ್ರ ಒಲಿಯುತ್ತದೆ.ಇದೊಂದು ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರು ಎಲ್ಲರನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಸುವಂತ ಗಾರುಡಿಗರು. ಇದೊಂದು ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ. ಈ ಸೇವೆ ಸಿಗುವುದು ತುಂಬಾ ಅದೃ?ವಂತರಿಗೆ ಮಾತ್ರ. ಶಿಕ್ಷಕರಾದವರು ಸೇವಾವಧಿಯಲ್ಲಿ ವೇತನಕ್ಕಾಗಿ ದುಡಿಯದೇ ಸಮಾಜದ ಏಳ್ಗೆಗಾಗಿ ದುಡಿಯಬೇಕು. ಸಮಾಜದ ಋಣ ತೀರಿಸಬೇಕು. ಪ್ರತಿ ಕೆಲಸ ದೇವರ ಕೆಲಸವೆಂದು ನಂಬಿ ಸಾಗಬೇಕು.ಇಂದು ಶಿಕ್ಷಕಿ ಅನ್ನಪೂರ್ಣ ಅವರು ಸುಮಾರು ೩೯ ವರ್ಷಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.ಅವರ ಸೇವೆ ಸ್ಮರಣೀಯವಾದುದು ಎಂದರು.
ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಬು ಮೌರ್ಯ, ಶಿಕ್ಷಣ ಸಂಯೋಜಕ ಶಿವಮೂರ್ತಪ್ಪ ತಾವಡೆ, ನಾಗನಾಥ ಭೋಸ್ಲೆ, ನವನಾಥ ಸಿಂಧೆ, ಈಶ್ವರಗೌಡ, ರವೀಂದ್ರ ಮುದ್ದನ್, ದೇವೆಂದ್ರಪ್ಪ ಗಣಮುಖಿ, ದೇವೆಂದ್ರಪ್ಪ ಕುಂಬಾರ ಇದ್ದರು. ನಂದೂರ (ಕೆ) ಗ್ರಾಪಂ ಅಧ್ಯಕ್ಷೆ ಸೀತಾಬಾಯಿ ಗೋಪಾಲ ರಾಠೋಡ, ಗ್ರಾಪಂ ಸದಸ್ಯರಾದ ಭಾರತಿಬಾಯಿ ಮಾಪಣ್ಣ ಕಟ್ಟಿಮನಿ, ಚಂದ್ರಕಲಾ ದಿನೇಶ ರಾಠೋಡ, ಶರಣಬಸಪ್ಪ.ಆರ್.ಬಿಲಗುಂದಿ ಇದ್ದರು.
ಇದೇ ಸಂದರ್ಭದಲ್ಲಿ ನಂದೂರ(ಕೆ) ಗ್ರಾಪಂ ವತಿಯಿಂದ ಅನ್ನಪೂರ್ಣ ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. ಚನ್ನಪ್ಪ ಹರಸೂರ ನಿರೂಪಿಸಿದರು,ದಾರುಕಾರಾಧ್ಯ ಚಿಕ್ಕಮಠ ಸ್ವಾಗತಿಸಿ, ವಂದಿಸಿದರು.