ಕಳಪೆ ರಸ್ತೆ ಕಾಮಗಾರಿಗೆ: ಅಧಿಕಾರಿ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆರ್.ವಿ.ನಾಯಕ ಒತ್ತಾಯ

0
24

ಸುರಪುರ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯನಗೋಳ ದಿಂದ ಜಲದುರ್ಗ ದೇವಸ್ಥಾನವರೆಗಿನ ರಸ್ತೆ,ಕೊಡೇಕಲ್ ಮುಖ್ಯ ರಸ್ತೆಯಿಂದ ಗುಳಬಾಳ ಎನ್‌ಎಲ್‌ಬಿಸಿ ರಸ್ತೆ ಮತ್ತು ಸೇತುವೆ ಕಾಮಗಾರಿ ಹಾಗೂ ಅಮ್ಮಾಪುರ ಎಸ್‌ಕೆ ಗ್ರಾಮದಿಂದ ಆಮಲಿಂಗಯ್ಯ ದೇವಸ್ಥಾನವರೆಗಿನ ರಸ್ತೆ ಸುಧಾರಣೆ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು ಕೂಡಲೇ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.

೨೦೧೯-೨೦ ನೇ ಸಾಲಿನಲ್ಲಿ ಕೈಗೊಳ್ಳುತ್ತಿರುವ ೫ಕೋಟಿ ರೂ ವೆಚ್ಚದ ರಾಯನಗೋಳ ದಿಂದ ಜಲದುರ್ಗ ದೇವಸ್ಥಾನವರೆಗಿನ ರಸ್ತೆ ಹಾಗೂ ಸೇತುವೆ ಕಾಮಗಾರಿ, ೪ಕೋಟಿ ರೂ ವೆಚ್ಚದ ಕೊಡೇಕಲ್ ಮುಖ್ಯ ರಸ್ತೆಯಿಂದ ಗುಳಬಾಳ ಎನ್‌ಎಲ್‌ಬಿಸಿ ರಸ್ತೆ ಮತ್ತು ಸೇತುವೆ ಕಾಮಗಾರಿ ಹಾಗೂ ಅಮ್ಮಾಪುರ ಎಸ್‌ಕೆ ಗ್ರಾಮದಿಂದ ಆಮಲಿಂಗಯ್ಯ ದೇವಸ್ಥಾನವರೆಗಿನ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಅಂದಾಜು ಪತ್ರಿಕೆಯಂತೆ ಹಳೆಯ ರಸ್ತೆಯನ್ನು ತೆಗೆದುಹಾಕಿ ತಳಪಾಯದಲ್ಲಿ ಗುಣಮಟ್ಟದ ಮರಮ್ ಹಾಗೂ ಕಲ್ಲುಗಳನ್ನು ಬಳಸಿ ಡಾಂಬರೀಕರಣಗೊಳಿಸಬೇಕಾಗಿದ್ದು ಆದರೆ ಅಂದಾಜು ಪತ್ರಿಕೆಯಲ್ಲಿರುವ ಯಾವುದೆ ಷರತ್ತುಗಳನ್ನು ಪಾಲಿಸದೆ ಹಳೆಯ ರಸ್ತೆಯ ಮೇಲೆಯೆ ಕಳಪೆ ಮಟ್ಟದ ಮರಮ್ ಹಾಕಿ ಹಾಗೂ ರಸ್ತೆಯ ಅಗಲವು ಕಡಿಮೆ ಪ್ರಮಾಣದಲ್ಲಿ ನಿರ್ಮಿಸಿ ಡಾಂಬರೀಕರಣಗೊಳಿಸಲು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ.

Contact Your\'s Advertisement; 9902492681

ಅಲ್ಲದೆ ಅಂದಾಜು ಪತ್ರಿಕೆಯಲ್ಲಿರುವ ಸಿಡಿಗಳ ಕಾಮಗಾರಿಯನ್ನು ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಮತ್ತು ಸಿಡಿಗಳಿಗೆ ಬಳಸುವ ಪೈಪ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಕಿ ಸಿಡಿಗಳ ಕಾಮಗಾರಿಗಳನ್ನು ಮುಗಿಸಿರುತ್ತಾರೆ ರಸ್ತೆ ಸುಧಾರಣೆ ಕಾಮಗಾರಿಗಳಲ್ಲಿ ಸಂಪೂರ್ಣ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿ ಸರಕಾರದ ಕೋಟ್ಯಾಂತರ ರೂಪಾಯಿ ಅನುದಾನ ದುರುಪಯೋಗ ಪಡೆಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದು ಅಲ್ಲದೆ ಈ ಕಾಮಗಾರಿಗಳನ್ನು ಕಾರ್ಯನಿರ್ವಾಹಕ ಅಭಿಯಂತರರು ಗುಣ ನಿಯಂತ್ರಣ ಕೆ.ಬಿ.ಜೆ.ಎನ್.ಎಲ್ ವಿಭಾಗ ಆಲಮಟ್ಟಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗುಣ ನಿಯಂತ್ರಣ ಕೆ.ಬಿ.ಜೆ.ಎನ್.ಎಲ್ ಉಪ ವಿಭಾಗ ನಾರಾಯಣಪೂರ ಇವರುಗಳು ಖುದ್ದಾಗಿ ಪರಿಶೀಲಿಸದೆ ಬಿಲ್ ಪಾವತಿಗೆ ಅನುಮೊದನೆ ನೀಡಿರುತ್ತಾರೆ.

ಕೂಡಲೇ ಈ ಎಲ್ಲಾ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಪಾವತಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ತಾವುಗಳು ಕಾಮಗಾರಿಗಳನ್ನು ಖುದ್ದಾಗಿ ಪರೀಶಿಲನೆ ಕೈಗೊಂಡು ಅಂದಾಜು ಪತ್ರಿಕೆಯಂತೆ ಕಾಮಗಾರಿಗಳನ್ನು ನಿರ್ವಹಸಿಲು ಕ್ರಮಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here