ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜು ಭಾಷಾ ಅಧ್ಯಾಪಕರ ಸಂಘದಿಂದ ಪ್ರತಿಭಟನೆ

0
196

ಕಲಬುರಗಿ: ವಿಶ್ವ ವಿದ್ಯಾಲಯವು ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಪತ್ರಿಕೆಯಾಗಿಸಿ ಕನ್ನಡ, ಹಿಂದಿ ಉರ್ದು ಮರಾಠಿ ಭಾಷೆಗಳನ್ನು ಐಚ್ಛಿಕ ಭಾಷೆಯಾಗಿ ಕಲಿಯಬಹುದು ಎಂದು ಆದೇಶಿಸಿದ ಇದರಿಂದ ಇಂಗ್ಲಿಷ್ ಕಡ್ಡಾಯ ಆದೇಶ ಉಳಿದ ಭಾಷೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿರೋಧಿಸಿ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜು ಭಾಷಾ ಅಧ್ಯಾಪಕರ ಸಂಘದಿಂದ ಪ್ರತಿಭಟನೆ ನಡಯಿತು.

ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜು ಕನ್ನಡ, ಹಿಂದಿ, ಉರ್ದು, ಮರಾಠಿ ಭಾಷಿಕ ಅಧ್ಯಾಪಕರು ವಿಶ್ವ ವಿದ್ಯಾಲಯವು ಕಳೆದ ವರ್ಷದಿಂದ ಸಿ. ಬಿ. ಸಿ. ಎಸ್. ಸಿಲೇಬಸ್ ಪಠ್ಯಕ್ರಮ ಜಾರಿಗೆ ತಂದಿದ್ದು. ಇದರಲ್ಲಿ ಇಂಗ್ಲಿಷ್ ಕಡ್ಡಾಯಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಅವಕಾಶ ಇಲ್ಲವಾಗಿದೆ.

Contact Your\'s Advertisement; 9902492681

ಕಲಿಕೆಯ ಮೇಲೆ ಭಾರ ಬೀಳುತ್ತಿರುವುದು ಮತು ಭಾಷಾ ಪಠ್ಯ ದೀರ್ಘವಾಗಿದ್ದು ಬೋಧನೆ ಅವಧಿ ಕಡೆಗಣಿಸಿದ್ದನ್ನು ಗುಲಬರ್ಗಾ ವಿಶ್ವ ವಿದ್ಯಾಲಯದ ಭಾಷಾ ಅಧ್ಯಾಪಕರ ಒಕ್ಕೂಟ ಈ ಸಂದರ್ಭದಲ್ಲಿ ಖಂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿಕನ್ನಡ ಭಾಷಾ ಅಧ್ಯಾಪಕರ ಸಂಘ ಮತ್ತು ಭಾಷಾ ಒಕ್ಕೂಟ ದಅಧ್ಯಕ್ಷರು ಡಾ.ಶ್ರೀಶೈಲ ನಾಗರಾಳ ಡಾ ಅಮ್ರತ ಬಾಳೂವಾಲೆ ಪ್ರೊ ಎಸ್ ಡಿ ಬರ್ದಿ ಪ್ರೊ ಮಾನು ಗುರಿಕಾರ್, ಅನೇಕರು ಉಪಸ್ಥಿತರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here