ಕಾರಜೋಳ ಅವರನ್ನು ಡಿಸಿಎಂ ಹುದ್ದೆಯಲ್ಲಿ ಮುಂದುವರೆಸಲು ಆಗ್ರಹ

0
96

ಶಹಾಬಾದ: ಬಿಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಅವರು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಆಗಿ ಮುಂದುವರಿಸಬೇಕೆಂದು ಮಾದಿಗ ಸಮಾಜದ ತಾಲೂಕಾಧ್ಯಕ್ಷ ಡಿ.ಡಿ.ಓಣಿ ಆಗ್ರಹಿಸಿದ್ದಾರೆ.

ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರ್ವಹಿಸಿದ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯು ಕೋವಿಡ್ ೧೯, ಪ್ರವಾಹ, ಅತಿವೃಷ್ಠಿಯ ವಿ?ಮ ಪರಿಸ್ಥಿತಿಯ ಸಂಕ?ದ ಸಂದರ್ಭದಲ್ಲೂ ಇಲಾಖೆಗೂ ಹಾಗೂ ತಮಗೂ ಶ್ರೇಯಸ್ಸು ದೊರಕುವಂತೆ ಅಲ್ಲದೇ, ಜನತೆಯ ಪ್ರಶಂಸೆಗೂ ಪಾತ್ರವಾಗುವಂತೆ ಯೋಜನೆಗಳನ್ನು ಸಮರ್ಪಕವಾಗಿ ಅನು?ನ ಗೊಳಿಸಿದ ಕೀರ್ತಿ ಕಾರಜೋಳ ಅವರಿಗೆ ಸಲ್ಲುತ್ತದೆ.ಅಲ್ಲದೇ ಒಳ್ಳೆ ಆಡಳಿತಗಾರ ಎಂದು ಕರ್ನಾಟಕದ ಜನತೆಗೆ ತೋರಿಸಿಕೊಟ್ಟಿದ್ದಾರೆ.

Contact Your\'s Advertisement; 9902492681

ರಾಜ್ಯದ ಬಲವರ್ಧನೆಗೆ ಪೂರಕವಾಗಿ ಸದೃಢ ರಸ್ತೆಗಳು, ಸೇತುವೆಗಳು, ಕಟ್ಟಡಗಳನ್ನು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿರುವ ದಲಿತ ಸಮುದಾಯದ ನೇತಾರ ಕಾರಜೋಳ ಅವರನ್ನು ಹಿಂದಿನ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here