ಹೊನ್ನಕಿರಣಗಿ: ಕರಣಯ್ಯ ಸ್ವಾಮಿಗೆ ಸನ್ಮಾನ

0
156

ಕಲಬುರಗಿ: ಶ್ರಿ ಕರಣಯ್ಯಸ್ವಾಮಿ ಅವರು “ನಾಗಾವಿ ನಾಡಿನ ಕಲ್ಪ ರತ್ನ ” ಪ್ರಶಸ್ತಿ ಪಡೆದಿದ್ದಕ್ಕೆ ಹೊನ್ನಕಿರಣಗಿಯ ಮಲ್ಕಣ ದೇವರ ಗುಡಿಯಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕೂಡ್ಲೂರು ಬಸವಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಡಾ. ಶಿವರಾಜಪ್ಪ ಅಪ್ಪ ಅವರು ಸ್ಥಾವರಮ ಮಠ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಸತತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯವಾಗುತ್ತದೆ . ಕರಣಯ್ಯ ಅವರು ವೈಧಿಕ ವೃತ್ತಿಯಲ್ಲಿ ಚಿಕ್ಕ ವಯಸ್ಸಿನಿಂದ ಬಹಳ ಶ್ರದ್ಧೆ ನಿಷ್ಠಯಿಂದ ಕಠಿಣ ಪರಿಶ್ರಮ ಪಡುತ್ತಿದ್ದಾರೆ.

Contact Your\'s Advertisement; 9902492681

ಅವರ ಈ ಶ್ರಮದ ಫಲವಾಗಿ “ನಾಗಾವಿ ನಾಡಿನ ಕಲ್ಪ ರತ್ನ ” ಪ್ರಶಸ್ತಿ ದೊರೆತಿದೆ.ಇದು ನಮ್ಮ ಊರಿಗೆ ಹೆಮ್ಮೆ ತರುವ ವಿಷಯ ಇವರ ಈ ಸಾಧನೆ ಎಲ್ಲ ಯುವಕರಿಗೆ ಮಾದರಿಯಾಗಿದ. ವೈಧಿಕ ವೃತ್ತಿಯಲ್ಲಿ ಇನ್ನು ಹೆಚ್ಚಿನೆ ಸಾಧನೆ ಮಾಡಲಿ, ಇವರ ಈ ಸಾಧನೆ ಎಲ್ಲ ಅವರ ಶಿಷ್ಯವೃಂದ ಹಾಗೂ ಗ್ರಾಮದ ಜನರು ಹರ್ಷವ್ಯಕ್ತವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಗಣ್ಣ ಕಾಬ, ಗುರುಶಾಂತ ಹಿರಾಣ್ಣಿ, ಕಲ್ಯಾಣಕುಮಾರ ನಂದಿಕೋಲ, ರೇವಣ ಸ್ಥಾವರಮಠ, ನಾಗು ಕೋಣಿನ, ಪ್ರಕಾಶ ಮುಡ್ಡಿ, ವೀರಣ್ಣ ಸಿನ್ನೂರ, ಸಂಜಯಕುಮಾರ ಸಿಂಪಿ, ಅಯ್ಯಣ್ಣ ಸಜ್ಜನ, ರಮೇಶ ನಾಗಶೆಟ್ಟಿ, ಭಗವಂತ ಯನಗುಂಟಿ, ದೇವಿಂದ್ರಪ್ಪ ಪಿ.ಸಜ್ಜನ, ವಿರೂಪಾಕ್ಷಿ ಹೀರೇಮಠ, ಚಂದ್ರಶೇಖರ ಆನೆಗುಂದಿ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here