ಶಿಕ್ಷಣದ ಅಭಿವೃದ್ಧಿಗೆ ಸಮೂದಾಯ ಸಹಭಾಗಿತ್ವದ ಅಗತ್ಯ: ಸೋಮರೆಡ್ಡಿ ಮಂಗಿಹಾಳ

0
40

ಸುರಪುರ: ಶಿಕ್ಷಣದ ಅಭಿವೃದ್ಧಿಗೆ ಸಮೂದಾಯ ಸಹಭಾಗಿತ್ವದ ಅಗತ್ಯ ಇದೆ. ಎಸ್‌ಡಿಎಂಸಿ ಶಿಕ್ಷಣ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಹಕರಿಸಬೇಕು ಎಂದು ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ ಹೇಳಿದರು.

ತಾಲ್ಲೂಕಿನ ದೇವಪುರ ಹರಿಜನವಾಡಾದ ಎಸ್‌ಡಿಎಂಸಿ ಆಯ್ಕೆ ಸಭೆಯಲ್ಲಿ ಗುರುವಾರ ಅವರು ಮಾತನಾಡಿದ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಎಸ್‌ಡಿಎಂಸಿಯವರು ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಬಗ್ಗೆ ಜಾಗ್ರತೆ ಮೂಡಿಸಬೇಕು. ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೆಕು ಎಂದು ತಿಳಿಸಿದರು.

Contact Your\'s Advertisement; 9902492681

ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ವೆಂಕಟೇಶ ದೇವಪುರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಿಆರ್‌ಪಿ ಕಾಂತೇಶ ಹಲಗಿಮನಿ, ಮುಖ್ಯ ಶಿಕ್ಷಕ ಕಾಸೀಮಸಾಬ ಬಾಗವಾನ್, ಚನ್ನಬಸಪ್ಪ ತಳವಾರ, ಹಸನಸಾಬ ತಳವಾರ, ಅಯ್ಯಪ್ಪ ಗಂಜಾಳ, ಸಣ್ಣತಿಪ್ಪಣ್ಣ ಎತ್ತಿನಮನಿ, ರೇಣುಕಾ ದೇವಪುರ, ಶಿವಲಿಂಗಪ್ಪ ಹಸನಾಪುರ, ವೀರಭದ್ರಪ್ಪ ತಳವಾರಗೇರಾ, ಶೇಖರ ಮಂಗಳೂರ, ಆಕಾಶ ಕಟ್ಟಿಮನಿ, ಗೌತಮ ಬಡಿಗೇರ, ರಮೇಶ ಬಾಚಿಮಟ್ಟಿ, ಖಾಜಾ ಅಜ್ಮೀರ್, ಎಂ. ಪಟೇಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here