ಕಲಬುರಗಿ: ಇಲ್ಲಿನ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ ಮತ್ತು ಇನುಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ, ತಾಂತ್ರಿಕ ಮಹಾವಿದ್ಯಾಲಯಗಳ ಶಿಕ್ಷಕ ವೃಂದಕ್ಕಾಗಿ, ಒಂದು ವಾರದ ಆಗಸ್ಟ ೨ ರಿಂದ ೦೬ ರವರೆಗೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ, ಅಟಲ್ ಅಕ್ಯಾಡೆಮಿಯಿಂದ ಪ್ರಾಯೋಜಿಸಲಾದ ಆನ್ ಇನ್‌ಸೈಟ್ ಟು ಬಯೋಮೆಡಿಕಲ್ ಇನುಸ್ಟ್ರುಮೆಂಟೇಷನ್ ಬಯೋಮೆಡಿಕಲ್ ಸಿಗ್ನಲ್ ಅಂಡ್ ಬಯೋಮೆಡಿಕಲ್ ಇಮೇಜ್ ಪ್ರೊಸೆಸಿಂಗ್ ವಿಥ್ ಹ್ಯಾಂಡ್ಸ್ ಆನ್ ಎಕ್ಸಪೀರಿಯನ್ಸ ಅಂಡ್ ಲ್ಯಾಬ್ ವಿಮ್ ಪ್ರೋಗ್ರಾಮಿಂಗ್ ಎಂಬ ಶೀರ್ಷಿಕೆಯ ಆನ್‌ಲೈನ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರೊ. ಅಭಯ್ ಕರಂಡೆಕರ್, ಐಐಟಿ ಕಾನಪುರದ ನಿರ್ದೇಶಕರು ಮುಖ್ಯ ಅತಿಥಿಗಳಾಗಿದ್ದರು. ಪ್ರೊ. ಎಂ.ಪಿ. ಪೊನಿಯಾ, ವೈಸ್ ಚೇರಮನ್, ಎಐಸಿಟಿಇ, ನ್ಯೂದಿಲ್ಲಿ ರವರು ವಿಶೇಷ ಅತಿಥಿಗಳಾಗಿದ್ದರು.
ಈ ಅಭಿವೃದ್ಧಿ ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು ೧೫೬ ಅಧ್ಯಾಪಕರು ನೋಂದಾಯಿಸಿದ್ದಾರೆ. ಟಿಎಂಐ ಸಿಸ್ಟಂ, ಬೆಂಗಳೂರು, ವಿಐ ಸೊಲೂಷನ್ಸ, ಬೆಂಗಳೂರು ಹಾಗೂ ದೇಶದ ಪ್ರಖ್ಯಾತ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ ಎಲೆಕ್ಟ್ರಾನಿಕ್ಸ ಮತ್ತು ಇನುಸ್ಟ್ರಮೆಂಟೇಷನ್ ಇಂಜಿನಿಯಿರಿಂಗ್ ವಿಭಾಗದ ಡಾ. ಚೆನ್ನಪ್ಪ ಭೈರಿ ಹಾಗೂ ಡಾ. ಕಲ್ಪನಾ ವಾಂಜೇರಖೇಡ್‌ರವರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ ಹಾಗೂ ಡಾ.ಎಸ್.ಎಸ್ ಹೆಬ್ಬಾಳ, ಪ್ರಾಚಾರ್ಯರು ಕನ್ವೀನರ್ ಆಗಿದ್ದಾರೆ.