ಚಿಂಚೋಳಿ/ಸೇಡಂ: ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿರೋಳ್ಳಿ ಗ್ರಾಮ ಹಾಗೂ ತಾಂಡದಲ್ಲಿ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರ ಧವಸ ಧಾನ್ಯ ಹಾಳಾಗಿರುವ ಕಾರಣ ಬಾಲರಾಜ್ ಗುತ್ತೇದಾರ ಬ್ರಿಗೇಡ್ ವತಿಯಿಂದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾನಾಡಿ ಪ್ರತಿವರ್ಷ ಮಳೆಬಂದಾಗ ಗ್ರಾಮದ ಮಳೆಗಳಲ್ಲಿ ನೀರು ನುಗ್ಗಿ ಮನೆಯಲ್ಲಿರುವ ಧವಸ ಧಾನ್ಯ ಹಾಳಾಗಿ ಜನ ಸಂಕಷ್ಟದಲ್ಲಿದ್ದಾರೆ ಸಂಭದ್ದ ಪಟ್ಟ ಅಧಿಕಾರಿಗಳು ಕೂಡಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿ ಗ್ರಾಹಸ್ಥರೊಂದಿಗೆ ಚರ್ಚಿಸಿ ಮನೆಗಳಿಗೆ ನೀರು ನುಗದ್ದ ಹಾಗೆ ಶಾಶ್ವತ ಪರಿಹಾರ ಹುಡುಕಬೇಕು ಒಂದು ವೇಳೆ ನಿರ್ಲಕ್ಷ ಮಾಡಿದರೆ ಗ್ರಾಮಸ್ಥರೊಂದಿಗೆ ಸೇರಿ ಬೃಹತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದಾರೆ.
ನಂತರ ಜೆಡಿಎಸ್ ತಾಲೂಕು ಅಧ್ಯಕ್ಷ ಎಕ್ಬಾಲ್ ಖಾನ ಮಾತನಾಡಿ ಶಿರೋಳ್ಳಿ ಗ್ರಾಮದ ಜನರ ಸಮಸ್ಯೆ ಅರಿತು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಅವರು ಗ್ರಾಮದಲ್ಲಿ 1 ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿರುವ ಕಾರ್ಯ ನಿಜಕ್ಶಾಕೂ ಶಾಘ್ಲನೀಯ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಾಂತಕುಮಾರ್ ಹಿರೇಮಠ್, ತಿಪ್ಪಾರೆಡ್ಡಿ, ನಸೀರ್ ಪಟೇಲ್, ಪರಶುರಾಮ್ ನಾಯಕ, ಶರಣಪ್ಪ, ಬಸವರಾಜ್ ತಳವಾರ್, ಹಸನಪ್ಪ ಮೇತ್ರಿ , ಶರಣು ತಳವಾರ್, ಸಂತೋಷ್ ಕೆರಳ್ಳಿ ವೀರೇಶ್ ಗುತ್ತೇದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಭಾರಿ ಮಳೆಗೆ ಮನೆಗಳಲ್ಲಿ ನೀರು ನುಗ್ಗಿ ಧವಸ ಧಾನ್ಯ ವಸ್ತುಗಳು ಹಾಳಾಗಿದು ಸಂಬದ್ಧ ಪಟ್ಟ ಅಧಿಕಾರಿಗಳು ಕೂಡಲೆ ಗ್ರಾಮಸ್ಥರಿಗೆ ಪರಿಹಾರ ನೀಡಬೇಕು. – ಬಾಲರಾಜ್ ಗುತ್ತೇದಾರ, ಜೆಡಿಎಸ್ ಮುಖಂಡರು ಸೇಡಂ
ಈ ಸಂದರ್ಭದಲ್ಲಿ ಮುಖಂಡರಾದ ಶಾಂತಕುಮಾರ್ ಹಿರೇಮಠ್, ತಿಪ್ಪಾರೆಡ್ಡಿ, ನಸೀರ್ ಪಟೇಲ್, ಪರಶುರಾಮ್ ನಾಯಕ, ಶರಣಪ್ಪ, ಬಸವರಾಜ್ ತಳವಾರ್, ಹಸನಪ್ಪ ಮೇತ್ರಿ , ಶರಣು ತಳವಾರ್, ಸಂತೋಷ್ ಕೆರಳ್ಳಿ ವೀರೇಶ್ ಗುತ್ತೇದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.