ಗರುಡಾದ್ರಿಯಲ್ಲಿ ೨೨ನೇ ಕಾರ್ಗಿಲ್ ವಿಜಯೋತ್ಸವ ಯೋಧರ ಸನ್ಮಾನ ಸಮಾರಂಭ

0
11

ಸುರಪುರ: ನಮ್ಮ ದೇಶದ ಹೆಮ್ಮೆಯ ವೀರ ಸೈನಿಕರ ಅಭಿಮಾನಿ ಬಳಗ ಸುರಪುರ ಸಂಘದ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ೨೨ನೇ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವೀರ ಯೋಧರ ಸನ್ಮಾನ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ್ದ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಮಾತನಾಡಿ,ಒಬ್ಬ ವ್ಯಕ್ತಿ ಸತ್ತ ನಂತರವು ಇಲ್ಲಿ ಶಾಸ್ವತವಾಗಿ ನೆನಪಲ್ಲಿರಬೇಕೆಂದರೆ ದೇಹವನ್ನು ದೇಶಕ್ಕಾಗಿ ಅರ್ಪಿಸಿದವರು ಉಳಿಯುತ್ತಾರೆ.ಈ ದೇಶದಲ್ಲಿ ಒಬ್ಬ ರಾಜಕಾರಣಿ ಇಲ್ಲವೆಂದರು,ಒಬ್ಬ ನಟ ಇಲ್ಲವೆಂದರು,ಒಬ್ಬ ಆಟಗಾರ ಇಲ್ಲವೆಂದರು ನಡೆಯುತ್ತದೆ ಆದರೆ ಒಬ್ಬ ಸೈನಿಕ ಇಲ್ಲವೆಂದರೆ ಯಾರು ಮನೆಯಿಂದ ಹೊರಗೆ ಕಾಲಿಡಲು ಯೋಚಿಸಬೇಕಾಗುತ್ತದೆ ಎಂದರು.

Contact Your\'s Advertisement; 9902492681

ಅಲ್ಲದೆ ನಿಜವಾದ ಹಿರೋಗಳೆಂದರೆ ೩ ತಾಸಿನ ಸಿನೆಮಾದಲ್ಲಿ ನಟಿಸುವವರಲ್ಲ,ದೇಶ ಸೇವೆಗಾಗಿ ತಮ್ಮ ದೇಹವನ್ನು ಅರ್ಪಿಸಲು ಸಿದ್ಧರಿರುವ ಯೋಧರು ನಿಜವಾದ ಹೊರೋಗಳೆಂದರು.ಭಾರತ ಮಾತೆಯಿಂದ ಅನ್ನ ನೀರು ಗಾಳಿ ಎಲ್ಲವನ್ನು ಪಡೆಯುವ ಮನುಷ್ಯ ದೇಶಕ್ಕಾಗಿ ನಾನು ಏನು ಕೊಟ್ಟಿದ್ದೇನೆ ಎಂದು ಯೋಚಿಸಬೇಕೆಂದರು.ಅಲ್ಲದೆ ಒಬ್ಬ ಸೈನಿಕ ಹೃದಯ ಸದಾಕಾಲ ಭಾರತ ಮಾತಾಕೀ ಜೈ ಅನ್ನುತ್ತದೆ ಅಂತಹ ಯೋಧರನ್ನು ಇಂದು ಸನ್ಮಾನಿಸುತ್ತಿರುವ ಆಯೋಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು ಹಾಗು ಸಿಂದಗಿಯ ಜೈ ಭಾರತ ಜೈ ಹಿಂದ್ ಮಾಜಿ ಸೈನಿಕರ ಶಾಂತಿ ಕ್ರಾಂತಿ ಸಂಘದ ಗೌರವಾಧ್ಯಕ್ಷರಾದ ಶ್ರೀಶೈಲ್ ಎಳಮೇಲಿ ಮಾತನಾಡಿ, ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಮೂಲಕ ಪಾಪಿ ಪಾಕಿಸ್ಥಾನಕ್ಕೆ ಪಾಠ ಕಲಿಸುವ ಮೂಲಕ ಜಗತ್ತಿಗೆ ಭಾರತ ಸೇನೆಯ ಶಕ್ತಿಯನ್ನು ತೋರಿಸಿಕೊಟ್ಟಿದ್ದು ಭಾರತ ಸೇನೆ,ಈ ಯುದ್ಧದಲ್ಲಿ ನಮ್ಮ ದೇಶದ ೫೩೭ ಜನ ಸೈನಿಕರು ಹುತಾತ್ಮರಾಗಿ ಕಾರ್ಗಿಲ್‌ನ್ನು ಗೆದ್ದು ತೋರಿಸಿದೆವು.ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಗಟ್ಟಿ ನಿಲುವಿನಿಂದ ಪಾಪಿ ಪಾಕಿಗಳಿಗೆ ಪಾಠ ಕಲಿಸಿದೆವು ಎಂದರು.

ಯಾವುದೇ ಯೋಧ ಆಸೆ ಆಮಿಷಗಳಿಗೆ ಒಳಗಾಗದೆ ತಮ್ಮನ್ನು ತಾವು ದೇಶಕ್ಕಾಗಿ ಬಲಿದಾನ ಮಾಡಿಕೊಳ್ಳುವ ಯೋಧರು ನಮ್ಮ ಯುವಕರಿಗೆ ಮಾದರಿಯಾಗಬೇಕು,ಇಂತಹ ಕಾರ್ಯಕ್ರಮದ ಮೂಲಕ ಯುವಕರು ದೇಶಪ್ರೇಮೆ ಬೆಳೆಸಿಕೊಳ್ಳುವ ಜೊತೆಗೆ ಸೇನೆಗೆ ಸೇರಲು ಪ್ರೇರಣೆಯಾಗಬೇಕೆಂದು ತಿಳಿಸಿದರು.ಅಲ್ಲದೆ ನಮ್ಮ ದೇಶವೆಂದರೆ ಜಗತ್ತಿಗೆ ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಂವಿಧಾನವನ್ನು ಮೊದಲು ತಿಳಿಸಿದವರು.ಅಂತಹ ದೇಶ ನಮ್ಮದು.ನಮ್ಮ ಯುವಕರು ಸದಾಕಾಲ ಕಳಬೇಡ ಕೊಲ ಬೇಡ ಹುಸಿಯ ನಿಡಿಯಲು ಬೇಡ ಎನ್ನುವ ಶರಣರ ವಚನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹಾರೈಸಿದರು.ಅಲ್ಲದೆ ಎಲ್ಲರಿಗು ಬಸವಾದಿ ಶರಣರು ಮಾದರಿಯಾಗಲೆಂದರು.

ನಂತರ ಯೋಧರಾದ ಶಬ್ಬೀರ,ರವೀಂದ್ರ ಬಿರಾದಾರ,ಹಣಮಂತ್ರಾಯ ಬಿರಾದಾರ,ಸಿದ್ದರಾಮ ವರಕೇರಿ,ಅಲ್ಲಾಭಕ್ಷ ಮಿರಾಜ್,ರಾಜೇಂದ್ರ ಸಿಂದೂರ,ಹಣಮಂತ್ರಾಯ ಬುಡಳ್ಳಿ,ಭೀಮಣ್ಣ ನಾಯಕ,ರಮೇಶ ನಾಯಕ,ಗುತ್ತನಗೌಡ ಬಿರಾದಾರ,ಗಂಗಾಧರ ಕರಡಕಲ್,ಭೀಮಣ್ಣ ಲಕ್ಷ್ಮೀಪುರ,ಸಲೀಂ ಗುಡಗುಂಟಿ,ಬಸವರಾಜ ಸುರಪುರ,ಜಲಿ ಆಂಜನೇಯ ನೀರಮಾನ್ವಿ,ಮಲ್ಲಯ್ಯ ಸಿರವಾರ,ಬಾಲಪ್ಪ ಸಿರವಾರ,ವಿಜೇಂದ್ರ ಸಿರವಾರ,ಭೀಮಣ್ಣ ಹೇರುಂಡಿ,ಮಹಾದೇವ ಜೇವರ್ಗಿ,ಜೆ.ಮಂಜುನಾಥ,ಈಶಪ್ಪ ಮೂಡಗಿ,ಬಸವರಾಜ ಸುರಪುರ ಸೇರಿ ಮಾಜಿ ಸೈನಿಕರು ಹಾಗು ಹಾಲಿ ಸೈನಿಕರು ಸೇರಿ ಒಟ್ಟು ೩೨ ಜನ ಸೈನಿಕರನ್ನು ಸನ್ಮಾನಿಸಿ ಗೌರವಿಸಿದರು.

ಇದಕ್ಕು ಮುನ್ನ ಎಲ್ಲಾ ಸೈನಿಕರನ್ನು ಹುತಾತ್ಮ ಯೋಧ ಶರಣಬಸವ ಕೆಂಗುರಿ ಪುತ್ಥಳಿಯಿಂದ ನಗರದ ಪ್ರಮುಖ ಬೀದಿಯ ಮೂಲಕ ಗರುಡಾದ್ರಿ ವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.ಕಾರ್ಯಕ್ರಮದಲ್ಲಿ ಮುಖಂಡರಾದ ರಾಜಾ ಪಿಡ್ಡ ನಾಯಕ,ಆರ್.ಸಿ.ನಾಯಕ,ಸಚಿನ ಕುಮಾರ ನಾಯಕ,ಸಂತೋಷಗೌಡ್ರು,ಮಂಜುನಾಥ,ಗುರುನಾಥರಡ್ಡಿ,ಅನಿಲ್ ಬಿಲ್ಲಾಳ,ಗೋಪಾಲ ಬುಡಬೋವಿ,ದೇವರಾಜ ಕರಾಟೆ,ಕಾಶಿನಾಥ ಸೇರಿದಂತೆ ಅನೇಕರಿದ್ದರು.ರಜಾಕ ಬಾಗವಾನ ನಿರೂಪಿಸಿದರು,ಶ್ರೀಹರಿರಾವ್ ಆದವಾನಿ ಪ್ರಾರ್ಥಿಸಿದರು,ಆರ್.ಸಿ.ನಾಯಕ ವಂದಿಸಿದರು.ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರಿಗಾಗಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here