ಕಲ್ಯಾಣ ಕರ್ನಾಟಕದ ಪಕ್ಷದ ನಾಯಕರಿಗೆ ಸಚಿವಸ್ಥಾನ ನೀಡಿ: ಬಿಜೆಪಿ ಮುಖಂಡ ಭೀಮಾಶಂಕರ ಎನ್. ಯಳಮೇಲಿ

0
30

ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಯ ಶೈಕ್ಷಣಿಕವಾಗಿ ಸಾಹಿತಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಈಗಾಗಲೇ ಬೆಳೆದು ಬಂದ ಪ್ರದೇಶವಾಗಿದೆ ಎಂದು ಬಿ.ಜೆ.ಪಿ. ಪಕ್ಷದ ರೈತ ಮೋರ್ಚಾದ ಕಲಬುರಗಿ ನಗರ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಎನ್. ಯಳಮೇಲಿ ಅವರು ಹೇಳಿದರು.

ನಮ್ಮ ಜಿಲ್ಲೆಯ ಇಬ್ಬರು ಮುಖ್ಯಮಂತ್ರಿಗಳನ್ನು ಕಂಡು ಕಲಬುರಗಿಯು ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿರುವಂತದ್ದು, ಅದರಲ್ಲು ನಮ್ಮ ಬಿ.ಜೆ.ಪಿ.ಯ ಕರ್ನಾಟಕ ಸರಕಾರದ ಅದರಲ್ಲಿ ನಮ್ಮ ಬಿ.ಜೆ.ಪಿ.ಯ ಕರ್ನಾಟಕ ರಾಜ್ಯ ಸರಕಾರದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯುರಪ್ಪನವರು ನಮ್ಮ ಕಲಬುರಗಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಬಂದಿರುತ್ತಾರೆ. ಗುಲಬರ್ಗಾ ಹೆಸರನ್ನು ತೆಗೆದು ಕಲ್ಯಾಣ ಕರ್ನಾಟಕದ ಎಂದು ಪರಿವರ್ತಿಸಿರುವುದು ದಾಖಲೆಯಾಗಿದೆ.

Contact Your\'s Advertisement; 9902492681

ನಮ್ಮ ಕಲಬುರಗಿ ಜಿಲ್ಲೆಯು ರಾಜಕೀಯವಾಗಿ ಬಿ.ಜೆ.ಪಿ. ಪಕ್ಷದ ಹೆಚ್ಚು ನಾಯಕರನ್ನು ಹೊಂದಿರುವುದು ಅಷ್ಟೇ ಅಲ್ಲದೇ ಬಿ.ಜೆ.ಪಿ. ಪಕ್ಷದ ರಾಜ್ಯ ಉಪಾಧ್ಯಕ್ಷರು ಸಮರ್ಥ ನಾಯಕರು ಪಕ್ಷದ ನಿಷ್ಠಾವಂತರು ಮಾಲೀಕಯ್ಯ ವಿ. ಗುತ್ತೆದಾರವರನ್ನು ಕೂಡಾ ಹೊಂದಿರುವ ನಮ್ಮ ಜಿಲ್ಲೆಯ ಈಗಾಗಲೇ ನಮ್ಮ ಜಿಲ್ಲೆಯು ಐದು ಶಾಸಕರನ್ನು ಮತ್ತು ಒಬ್ಬ ಸಂಸದರನ್ನು ಹಾಗೂ ಇಬ್ಬರು ವಿಧಾನ ಪರಷತ್ತು ಸದಸ್ಯರನ್ನು ಮತ್ತು ಹಲವಾರು ರಾಜಕೀಯ ನಾಯಕರನ್ನು ಹೊಂದಿರುವಂತಹ ಜಿಲ್ಲೆಯಾಗಿರುತ್ತದೆ.

ಇತ್ತಿತ್ತಲಾಗಿ ನಮ್ಮ ಕರ್ನಾಟಕ ರಾಜ ಸರಕಾರದ ನೂತನ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿರವರು ಹೋಸ ಸರಕಾರದಲ್ಲಿ ಮಂತ್ರಿಗಳನ್ನು ಆಯ್ಕೆ ಮಾಡುವಲ್ಲಿ ನಮ್ಮ ಜಿಲ್ಲೆಗೆ ಎರಡನೇ ಬಾರಿ ಅನ್ಯಾಯ ವೇಸಗಿದ್ದಾರೆ, ಇದು ನಮ್ಮ ಜಿಲ್ಲೆಯ ನಾಯಕರು ಯಾವುದೇ ರೀತಿಯಾಗಿ ಪ್ರತಿಭಟಿಸದೇ ಇರುವುದು ಸೂಜಿಗವಾಗಿದೆ, ಬಿ.ಜೆ.ಪಿಯ ಆಂತರಿಕ ಕಲಹೆಗಳೆ ಕಾರಣವಾದರೂ ಅದನ್ನು ಜಿಲ್ಲೆಯ ಬಿ.ಜೆ.ಪಿ. ಪಕ್ಷದ ಅಧ್ಯಕ್ಷರು ರಾಜಕೀಯ ಮುಖಂಡರನ್ನು ಕರೆದು ಸಮಾಲೋಚಿಸಿ ನಮ್ಮ ಜಿಲ್ಲೆಯನ್ನು ಕಡೆಗಣಿಸಲು ಕಾರಣವೇನು ಎಂದು ತಿಳಿಯಲು ಒಗ್ಗಟಾಗಿ ನಿಲ್ಲಬೇಕಾಗಿದೆ.

ಇಲ್ಲವಾದಲ್ಲಿ ಬೇರೆ ಜಿಲ್ಲೆಯ ನಾಯಕರು ಉಸ್ತುವಾರಿ ಸಚಿವರಾಗಿ ಬರುವ ಅವಶ್ಯಕತೆನೆ ನಮಗಿಲ್ಲವಾಗಿದೆ ಕಾರಣ ಬಿ.ಜೆ.ಪಿ. ಪಕ್ಷ ಸರ್ವ ನಾಯಕರನ್ನು ತಾವುಗಳೆಲ್ಲರು ಸೇರಿ ನಮ್ಮ ಜಿಲ್ಲೆಗೆ ಮಂತ್ರಿಗಳ ಭಾಗ್ಯವನ್ನು ಕಲ್ಪಸಿಕೊಂಡು ನಮ್ಮ ಜಿಲ್ಲೆಯ  ಮುಖಂಡರಿಗೆ ಉಸ್ತುವಾರಿ ಸಚಿವರನ್ನಾಗಿ ನೀಡಿದಲ್ಲಿ ಈ ಭಾಗದ ಜನ ನಾಯಕರು ಬಿ.ಜೆ.ಪಿ. ಪಕ್ಷವನ್ನು ಗಟ್ಟಿಗೊಳಿಸಲು ಸಮರ್ಥೈ ಆಡಳಿತ ಮಾಡಲು ಸಾಧ್ಯವಾಗಬಹುದು.

ಕಾರಣ ಈ ಅವಕಾಶದಿಂದ ವಂಚಿತರಾದಲ್ಲಿ ಮುಂಬರುವ ಚುನಾವಣೆಗೆ ಜನರು ನಮ್ಮ ಬಿ.ಜೆ.ಪಿ. ಪಕ್ಷವನ್ನು ದಿಕ್ಕರಿಸಬಹುದು ಆದ್ದರಿಂದ ನಮ್ಮ ಜಿಲ್ಲೆಯ ಬಿ.ಜೆ.ಪಿ. ಸರ್ವ ನಾಯಕರು ಸೇರಿ ಚರ್ಚಿಸಿ ಒಮ್ಮತದಿಂದ ನಿರ್ಧಾರದಕ್ಕೆ ಬಂದು ನಮ್ಮ ಜಿಲ್ಲೆಗೆ ಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರನ್ನು ಆಯ್ಕೆಮಾಡುವಲ್ಲಿ ಒಗ್ಗಟಾಗಿ ನೂತನ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಒತ್ತಾಯ ಮಾಡಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ಬಿ.ಜೆ.ಪಿ. ಪಕ್ಷದ ರೈತ ಮೋರ್ಚಾದ ಕಲಬುರಗಿ ನಗರ ಜಿಲ್ಲಾ ಉಪಾಧ್ಯಕ್ಷರಾದ ಭೀಮಾಶಂಕರ ಎನ್. ಯಳಮೇಲಿಯವರು ಕೋರಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here