ವಿವಿಧೆಡೆ ಭಿಕ್ಷುಕರ ಸಮೀಕ್ಷೆ: ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲು

0
7

ಕಲಬುರಗಿ: ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮಂಗಳವಾರ ಎರಡು ತಂಡಗಳಿಂದ ಕ್ಷಿಪ್ರ ಸಮೀಕ್ಷೆ ನಡೆಸಿ ಒಟ್ಟು ನಾಲ್ವರು ಭಿಕ್ಷುಕರನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಲೋಖಂಡೆ ಅವರು ತಿಳಿಸಿದ್ದಾರೆ.

ಮೊದಲನೆ ತಂಡದಿಂದ ನಗರದ ರೈಲು ನಿಲ್ದಾಣ, ರಾಮ ಮಂದಿರ, ಕೇಂದ್ರಿಯ ಬಸ್ ನಿಲ್ದಾಣ, ಸಿದ್ದಿ ಬಾμÁ ದರ್ಗಾ ಹಾಗೂ ವಿವಿಧ ಕಡೆಗಳಲ್ಲಿ ಸಮೀಕ್ಷೆ ನಡೆಸಿ ಭಿಕ್ಷುಕರ ಮಾಹಿತಿಯನ್ನು ಪಡೆದು, ಈ ಸ್ಥಳಗಳಲ್ಲಿ ನಾಲ್ವರು ಭಿಕ್ಷುಕರನ್ನು ಗುರುತಿಸಿದ್ದು, ಇದರಲ್ಲಿ ಎರಡು ಜನ ಭಿಕ್ಷುಕರನ್ನು ಮಾತ್ರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಗಿದೆ.

Contact Your\'s Advertisement; 9902492681

ಎರಡನೇ ತಂಡದಿಂದ ನಗರದ ಶರಣ ಬಸವೇಶ್ವರ ದೇವಸ್ಥಾನ, ಸಿಟಿ ಬಸ್ ನಿಲ್ದಾಣ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಹಾಗೂ ಖ್ವಾಜಾ ಬಂದೇ ನವಾಜ್ ದರ್ಗಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಒಟ್ಟು 11 ಭಿಕ್ಷುಕರನ್ನು ಗುರುತಿಸಿದ್ದು, ಇದರಲ್ಲಿ ಎರಡು ಜನ ಭಿಕ್ಷುಕರನ್ನು ಮಾತ್ರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here