ಜಯಗೋಷಗಳ ಮಧ್ಯ ಸಕಲ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ

0
10

ಆಳಂದ: ಬಾಂಗ್ಲಾ ಗಡಿಯಲ್ಲಿ ವೈರಿಗಳ ಗುಂಡಿಗೆ ಬಲಿಯಾದ ವೀರಯೋಧ ರಾಜಕುಮಾರ ಮಾಪಣ್ಣಾ ಮಾವೀನಕರ್ ಅವರ ಪಾರ್ಥಿವ ಶರೀರವನ್ನು ಚಿಂಚನಸೂರ ಗ್ರಾಮಕ್ಕೆ ಗುರುವಾರ ಬೆಳಗಿನ ಜಾವ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಜಯಘೋಷಗಳೊಂದಿಗೆ ಸ್ವಾಗತಿಸಿಕೊಂಡು ಕಣ್ಣೀರು ಧಾರೆಯನ್ನು ಹರಿಸಿದರು. ಬಳಿಕ ಸಕಲ ಸರ್ಕಾರಿ ಗೌರವಾಧರಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ರಾಜಕಾರಣಿಗಳು, ರೈತ ಮುಖಂಡರು ಹಾಗೂ ಸಂಘಟಕರು ಸೇರಿದಂತೆ ನೆರೆಹೊರಯ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಳ್ಗೊಂಡಿದ್ದ ಸಾರ್ವಜನಿಕರು ಮತ್ತು ಯೋಧನ ಬಂಧು ಬಾಂಧವರು ಅಂತಿಮ ನಮನ ಸಲ್ಲಿಸಿದರು.

Contact Your\'s Advertisement; 9902492681

ಯೋಧನ ಅಗಲಿಕೆಯಿಂದ ಕುಟುಂಬ ಸಮೇತ ಬಂಧು ಬಾಂಧವರ ಅಕ್ರಂದನ ಮುಗಿಲು ಮುಟ್ಟಿತು. ದೇಶಾಭಿಮಾನಿಗಳ ಭಾರತ ಮಾತೆಯ ಜಯಗೋಷ ಹಾಕಿದರು. ವೀರಯೋಧ ರಾಜಕುಮಾರ ಅಮರ ರಹೆ ಎಂಬ ಘೋಷಣೆ ಮೊಳಗಿಸಿ ಕಣ್ಣೀರು ಹರಿಸುವ ಮೂಲಕ ವಿಧಾಯ ಹೇಳಿದರು.

ಬಿಎಸ್‌ಎಫ್ ಯೋದರು ಮುಂದಾಳತ್ವದಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೊಡ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಾಜಿ ಶಾಸಕ ಬಿ.ಆರ್. ಪಾಟೀಲ, ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಜಿಲ್ಲಾ ಅಧ್ಯಕ್ಷ ಜಗದೇವಿ ನೂಲಕರ್, ರೈತ ಸಂಘದ ಮುಖಂಡ ವಿರೂಪಾಕ್ಷಪ್ಪ ತಡಕಲ್, ಸುಧಾಮ ಧನ್ನಿ ಮತ್ತಿತರು ಪಾಲ್ಗೊಂಡಿದ್ದರು.

ಜಿಲ್ಲಾಡಡಳಿತ ಪರ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಐಜಿಪಿ ಮನೀಷ ಕರ್ಬೀಕರ್, ಆಯುಕ್ತ ಡಾ| ರವಿಕುಮಾರ, ಡಿಸಿಪಿ ಅಟ್ಟೂರ ಶ್ರೀನಿವಾಸ್, ಎಸ್‌ಪಿ ಡಾ. ಸಿಮಿ ಮರೆಯಮ ಜಾರ್ಜ್, ತಾಲೂಕು ಆಡಳಿತಪರ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ಸೇರಿದಂತೆ ಮತ್ತಿತರ ಅಧಿಕಾರಿಗಳ ಪಾಲ್ಗೊಂಡಿದ್ದರು.
ಸುಲಮಠದ ಮಠದ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಭಂತೇಜಿ ಅವರು ಸೇರಿದಂತೆ ಅಪಾರ ಜನಸ್ತೋಮವು ಅಂತ್ಯಕ್ರಿಯದಲ್ಲಿ ಭಾವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here