ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಸಾಮೂಹಿಕ ಸಂಘಟನೆಗಳಿಂದ ತಹಸೀಲ್ದಾರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ವಿವಿಧ ಸಂಘಟನೆಗಳಾದ ಸಿಐಟಿಯು,ಕರ್ನಾಟಕ ಪ್ರಾಂತ ರೈತ ಸಂಘ,ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಇತರ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಿ ಸರಕಾರಗಳ ವಿರುದ್ಧ ಘೋ?ಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಆಗಸ್ಟ್ ೯ ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿನ ದಿನವಾಗಿದೆ.ಅದರ ಅಂಗವಾಗಿ ಇಂದು ದೇಶಾದ್ಯಂತ ಕೃಷಿ ಕೂಲಿ ಕಾರ್ಮಿಕರು ಒಂದಾಗಿ ಹೋರಾಟ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ ಎಂದರು.ಅಲ್ಲದೆ ನಮ್ಮ ವಿವಿಧ ಬೇಡಿಕೆಗಳಾದ ಕೇಂದ್ರ ಸರಕಾರ ಕೃಷಿ ಮತ್ತು ವಿದ್ಯುತ್ ಜನವಿರೋಧಿ ಕಾನೂನುಗಳನ್ನು ಕೈಬಿಡಬೇಕು,ರೈತರ ಎಲ್ಲಾ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇ ೫೦ ರ ಪ್ರಕಾರ ಕನಿ? ಬೆಂಬಲ ಬೆಲೆ ಖಾತರಿಯಾಗಿ ದೊರೆಯುವಂತೆ ಕಾಯ್ದೆ ಮಾಡುವ ಜೊತೆಗೆ ಋಣಮುಕ್ತ ಕಾಯ್ದೆ ಅಂಗೀಕರಿಸಬೇಕು.
ಭೂಸುಧಾರಣ ಕಾಯ್ದೆಯನ್ನು ಕೈಬಿಡಬೇಕು ಮತ್ತು ಭೂ ಸಾಗುವಳಿ ಮಾಡುವವರಿಗೆ ಸರಕಾರ ಭೂ ಸಾಗುವಳಿ ಚೀಟಿ ನೀಡಬೇಕು. ರಾಜ್ಯದಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡಲು ಸಮಗ್ರ ಯೋಜನೆ ಜಾರಿಗೊಳಿಸಬೇಕು.ರಾಜ್ಯದ ಭೂ ಸುಧಾರಣಾ ಕಾಯ್ದೆ,ಎಪಿಎಮ್‌ಸಿ ಕಾಯ್ದೆ ಹಾಗು ಜಾನುವಾರು ಹತ್ಯಾ ಕಾಯಿದೆಗಳ ಜನವಿರೋಧಿ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು.ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಖಾದ್ಯ ತೈಲದ ಬೆಲೆ ಏರಿಕೆಯನ್ನು ನಿವಾರಿಸಬೇಕು ಎನ್ನುವುದು ಸೇರಿದಂತೆ ೧೩ ಬೇಡಿಕೆಗಳ ಮನವಿ ಪತ್ರವನ್ನು ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಸಲ್ಲಿಸಿದರು.
ಸಿಐಟಿಯು ತಾಲೂಕಾಧ್ಯಕ್ಷೆ ಶೇಖಮ್ಮ ಕುರಿ, ಕೆಪಿಆರ್‌ಎಸ್ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಸಂಪತ್ತಕುಮಾರಿ, ಕಟ್ಟಡ ಕಾರ್ಮಿಕ ಸಂಘದ ತಾಲೂಕಾ ಉಪಾಧ್ಯಕ್ಷ ರಾಮು ಜಾಧವ,ಭಾಗಮ್ಮ ಊರಹುಂಚಿ, ಮಲ್ಲೇಶಿ ಭಜಂತ್ರಿ,ವೀರಯ್ಯಸ್ವಾಮಿ ತರನಳ್ಳಿ ಸೇರಿದಂತೆ ಅನೇಕ ಜನರು ಇದ್ದರು.