ಸುರಪುರ: ಈಬಾರಿಯ ಮೋಹರಂ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸೋಣ,ಯಾಕೆಂದರೆ ಈಗಾಗಲೇ ರಾಜ್ಯದಲ್ಲಿ ಕೊರೊನಾ ಅಲೆಯಿಂದಾಗಿ ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ,ಅದರಂತೆ ಮೋಹರಂ ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಸರಕಾರದ ನಿಯಮಗಳು ಬರಲಿದ್ದು ಅವುಗಳನ್ನು ಎಲ್ಲರು ಪಾಲಿಸಬೇಕೆಂದು ಪೊಲೀಸ್ ಇನ್ಸ್ಪೇಕ್ಟರ್ ಸುನಿಲಕುಮಾರ ಮೂಲಿಮನಿ ತಿಳಿಸಿದರು.
ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಮೋಹರಂ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಈ ಹಿಂದೆ ಮೋಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು,ಆದರೆ ಈಗ ಕೊರೊನಾ ನಿಯಮಗಳು ಜಾರಿಯಲ್ಲಿವೆ ಜೊತೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೋಹರಂ ಆಚರಣೆಯಲ್ಲಿ ಹೆಚ್ಚು ಜನರು ಸೇರುವುದರಿಂದ ಸಮಸ್ಯೆಯಾಗಲಿದೆ.ಆದ್ದರಿಂದ ಸಂಪ್ರದಾಯದಂತೆ ಹಬ್ಬ ಆಚರಿಸಿದರು,ಅತ್ಯಂತ ಸರಳವಾಗಿ ಹೆಚ್ಚು ಜನ ಸೇರದೆ ಸರಳವಾಗಿ ಆಚರಣೆ ಮಾಡಿ ಕೋವಿಡ್ ನಿಯಮಗಳ ಪಾಲನೆಯಾಗಲಿದೆ.ಯಾರೇ ಆಗಲಿ ನಿಯಮಗಳನ್ನು ಪಾಲಿಸದಿದ್ದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರಲ್ಲದೆ,ಇನ್ನೇನು ಜಿಲ್ಲಾಧಿಕಾರಿಗಳ ಆದೇಶ ಬರಲಿದ್ದು ಅದರಂತೆ ಎಲ್ಲರು ಪಾಲಿಸಬೇಕೆಂದು ತಿಳಿಸಿದರು.
ನಂತರ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಾದ ನಾಗಣ್ಣ ಕಲ್ಲದೇವನಳ್ಳಿ ಉಸ್ತಾದ ವಜಾಹತ್ ಹುಸೇನ್ ಮುಬೀನ್ ದಖನಿ ಯಂಕೋಬ ದೊರೆ ಮುಫ್ತಿ ಇಕ್ಬಾಲ್ ಒಂಟಿ ಶಿವಲಿಂಗ ಹಸನಾಪುರ ವೆಂಕಟೇಶ ಬೇಟೆಗಾರ ಶರಣು ನಾಯಕ ಡೊಣ್ಣಿಗೇರಾ ಸೇರಿದಂತೆ ಅನೇಕರು ಮಾತನಾಡಿದರು.
ಸಭೆಯ ವೇದಿಕೆ ಮೇಲೆ ಪಿಎಸ್‌ಐಗಳಾದ ಶರಣಪ್ಪ ಹವಲ್ದಾರ್,ಚಂದ್ರಶೇಖರ ನಾರಾಯಣಪುರ ಇದ್ದರು.ಭೀಮರಾಯ ಸಿಂಧಗೇರಿ,ರಮೇಶ ದೊರೆ ಆಲ್ದಾಳ,ಅಬೀದ್ ಹುಸೇನ್ ಪಗಡಿ,ಸಿದ್ರಾಮ ಎಲಿಗಾರ,ಮಲ್ಲು ಬಿಲ್ಲವ್,ಧರ್ಮರಾಜ ಬಡಿಗೇರ,ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ,ಶಿವಶಂಕರ ಬೊಮ್ಮನಹಳ್ಳಿ,ಅಬ್ದುಲ್ ಮಜೀದ್,ನಾಗರಾಜ ಓಕಳಿ, ಸೇರಿದಂತೆ ಅನೇಕರಿದ್ದರು.