ಸರ್ಕಾರಿ ಪ್ರೌಢಶಾಲೆ ಕೋಳಕೂರ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ

0
52

ಜೇವರ್ಗಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಕೊಳಕೂರ್ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.

ಏಳು ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಫಲಿತಾಂಶ ಪಡೆದಿದ್ದು 26 ಜನ ಮೊದಲನೇ ಸರಣಿಯಲ್ಲಿ ಹಾಗೂ ನಾಲ್ಕು ಜನ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ .

Contact Your\'s Advertisement; 9902492681

ಅಮಿತ್ ಕುಮಾರ್ ಅಪ್ಪಾಸಾಹೇಬ್ 590 ಅಂಕಗಳನ್ನು ಪಡೆದು 94.4 ಫಲಿತಾಂಶವನ್ನು ಪಡೆದಿದ್ದಾನೆ. ಸೃಷ್ಟಿ ನಾನಾಸಭ ವಿದ್ಯಾರ್ಥಿನಿ 587 ಅಂಕಗಳೊಂದಿಗೆ 93.2 ಪ್ರತಿಶತ ಹಾಗೂ ಅಕ್ಷತಾ ಮಾಪಣ್ಣ 573 ಅಂಕಗಳನ್ನು ಪಡೆದು 91.61 ಹಾಗೂ ಅಕ್ಷತಾ ಅಂಬಾರಾಯ ,572 ಅಂಕಗಳೊಂದಿಗೆ 91.52%, ಅರುಣ ಮಲ್ಲಯ್ಯ ನಂದೂರ್ ಮಠ 563 ಅಂಕಗಳೊಂದಿಗೆ 90% ಫಲಿತಾಂಶ ಪಡೆದಿದ್ದಾಳೆ , ಶಾಲೆಯ ಒಟ್ಟು ಫಲಿತಾಂಶ 100% ಬಂದಿದ್ದು , ಶಿವಕುಮಾರ ಪ್ರಭುಲಿಂಗ 552 ಅಂಕಗಳೊಂದಿಗೆ 88.32 ಹಾಗೂ ಲಕ್ಷ್ಮಿ ಸಿದ್ದಣ್ಣ 533. ಅಂಕಗಳೊಂದಿಗೆ 85 .25 ಪ್ರತಿಶತ ಫಲಿತಾಂಶ ಪಡೆದಿದ್ದಾರೆ.

ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಇಲ್ಲಿನ ಸರಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಎ,ಸ್ಟಿ ಬಿರಾದಾರ್ , ಎಸ್ಡಿಎಂಸಿ ಅಧ್ಯಕ್ಷರಾದ ಕಲ್ಯಾಣ್ ಆಡಿನ ಗ್ರಾಮಸ್ಥರಾದ ಅಪ್ಪಸಾಹೇಬ್ ಮಡಿವಾಳ , ಮಲ್ಲಸ್ವಾಮಿ ನಂದೂರಮಠ ಹಾಗೂ ದೈಹಿಕ ಶಿಕ್ಷಕರಾದ ಮಹಾಂತೇಶ್ ಮುದ್ದಡಗಿ ಸೇರಿದಂತೆ ಶಿಕ್ಷಕ ವೃಂದ , ಪಾಲಕ-ಪೋಷಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here