ಕಲಬುರಗಿ: ಜಿಲ್ಲೆಯ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದು, ಇಂದು ಒಂದೆ ದಿನ 85 ಹೊಸ ಪ್ರಕರಣಗಳು ಪಾಜಿಟಿವ್ ಆಗಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಮತ್ತು ಪೀಡಿತರ ಸಂಖ್ಯೆ ದಿನೆ ದಿನೆ ಭಾರಿ ಏರಿಕೆಯಾಗುತಿದ್ದು, ಸಾರ್ವಜನಿಕರ ನಿರ್ಲಕ್ಷ್ಯವೆ ಕಾರಣವಾಗಿದೆ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.
ಇಂದು ಕೊರೊನಾ ರೋಗದಿಂದ ಬಳಲುತ್ತಿರು 41 ಪೀಡಿತರು ಚಿಕಿತ್ಸೆಯಿಂದ ಬಿಡುಗಡೆಯಾಗಿದ್ದಾರೆ.