ಕಲಬುರಗಿ: ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಜರುಗಿತ್ತು.
ಈ ಸಂದರ್ಭದಲ್ಲಿ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಹಾಗೂ ಸಂಶೋಧನಾ ಪೀಠದ ನಿರ್ದೇಶಕರಾದ ಎಸ್.ಎನ್ ಮುಲಗಿಯವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಸಾಧನೆ ಮತ್ತು ಅವರು ರಚಿಸಿದ ಕೃತಿಗಳ ಬಗ್ಗೆ ಕಿರುಪರಿಚಯ ನೀಡಿದರು.
ಹೇಮರೆಡ್ಡಿ ಮಲ್ಲಮ್ಮನವರು ಮೂಲತಃ ಕವಿ ಅಥವಾ ಬರಹಗಾರರು ಆಗಿರಲಿಲ್ಲ ಆದರೆ ಇವರು ಬದುಕಿದ ಜೀವನವೇ ಮಾನವ ಕುಲಕ್ಕೆ ಸಂದೇಶವಾಗಿದೆ. ಹೇಮರೆಡ್ಡಿ ಮಲ್ಲಮ್ಮ ಅವರು ಸಂಘಜೀವಿ, ಹೇಮರೆಡ್ಡಿ ಮಲ್ಲಮ್ಮನವರ ಜೀವನದಲ್ಲಿ ಕಲ್ಯಾಣ ಶರಣರ ಕಾಯಕ, ದಾಸೋಹ ಸಂಸ್ಕøತಿ ನಿಶ್ಚಯವನ್ನು ಕಾಣುತ್ತೆವೆ ಇವರು ಸಮಾಜ ಹಿತಾಸಕ್ತಿಯ ಬಗ್ಗೆ ಚಿಂತಿಸಿದವರು ಮತ್ತು ಅವಿಭಕ್ತ ಕುಟುಂಬಕ್ಕೆ ಒತ್ತು ನೀಡಿದರು ಎಂದು ಹೇಳುತ್ತಾ, ಇಂತಹ ಮಹಾನ್ ವ್ಯಕ್ತಿಗಳ ವಿಚಾರ ಧಾರೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಸಿಸುವುದು, ಬೆಳೆಸುವುದು ಹಾಗೂ ಸಮಾಜಕ್ಕೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ಅವರು ರಚಿಸಿದ ಸಾಧ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಡಾ. ವಿಶಾಲಾಕ್ಷಿ ವಿ. ಕರಡ್ಡಿ ಅವರು ಸಂಪಾದಿಸಿದ ಗಿರಿಯಸಿರಿ ಎರಡು ಪುಸ್ತಕಗಳು ಲೋಕಾರ್ಪಣೆ ಮಾಡಲಾಯಿತು.
ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ಅವರು ಜಯಂತ್ಯುತ್ಸವ ಉದ್ಘಾಟಿಸಿ ಆನ್‍ಲೈನ್ ಮೂಲಕ ಮಾತನಾಡತ್ತಾ, ಭಾರತ ದೇಶ ಪುಣ್ಯ ಭೂಮಿ ಅನೇಕ ಮಹಾನ್ ವ್ಯಕಿಗಳ ಶರಣರ ನಾಡು ಎಂದು ಹೇಳುತ್ತಾ ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವ ಆಚರಿಸುವ ಮೂಲಕ ಅವರುಗಳ ತೋರಿಸಿದ ಮಾರ್ಗ, ಸಂದೇಶಗಳು, ಅವರ ಬದುಕಿನ ಹಾದಿ ಮತ್ತು ಮಾನವಿಯ ಮೌಲ್ಯಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಒಂದು ಅವಕಾಶ ಎಂದು ಹೇಳಿದರು. ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಅವರು ತೋರಿಸಿದ ಮೌಲ್ಯಗಳು ನಡೆಯುವುದಾಗಿದೆ. ದೇವಸ್ಥಾನಗಳಲ್ಲಿ ದೀಪಗಳು ದೇವರಿಗೆ ಅಲ್ಲ ಅದು ನಾವುಗಳು ಜೀವನದಲ್ಲಿ ಕತ್ತಲ್ಲಿನಿಂದ ಬೆಳಕಿನಡೆಗೆ ಹೋಗಲು ಆಗಿದೆ ಎಂದರು. ಮಹಾತ್ಮರ ಸಂದೇಶ ಅಳವಡಿಸಿಕೊಳ್ಳುವ ಮೂಲಕ ನಮ್ಮ ಜೀವನ ಬಂಗಾರವಾಗಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಒಂದು ಉತ್ತಮ ಪುಸ್ತಕ ದಣಿವರೆಯದ ಕಾಯಕ, ಶಿಕ್ಷಣ ಸಾರ್ಥಕ ಬದುಕಿಗೆ ದೀಕ್ಷೆಯಾಗಬೇಕು, ಓದುವ ಹವ್ಯಾಸ ಬೆಳಸಬೇಕು. ಇಂದಿನ ಯಾಂತ್ರಿಕ ಬದುಕು ಮತ್ತು ತಾಂತ್ರಿಕ ಜೀವನ ಶೈಲಿಯಿಂದ ಓದು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಹೇಮರೆಡ್ಡಿ ಮಲ್ಲಮನವರ ವಿಚಾರಗಳನ್ನು ಸಾಮಾನ್ಯ ಜನರಿಗೆ ಪುಸ್ತಕದ ಮೂಲಕ ಎಲ್ಲರಿಗೂ ಮುಟ್ಟಿಸಬೇಕು ಎಂದು ಹೇಳುತ್ತಾ, ವಿಶ್ವವಿದ್ಯಾಲಯವು ಭೋಧನೆ ಮತ್ತು ಪರೀಕ್ಷೆಗಳಿಗೆ ಸಿಮೀತವಾಗಬಾರದು, ವಿಶ್ವವಿದ್ಯಾಲಯವು ಸೇವೆಗೆ ಸಮಾಜಮುಖಿ ಕೆಲಸಗಳ ಕೇಂದ್ರವಾಗಬೇಕು ಎಂದು ಹೇಳಿದರು.
ಮುಂದುವರೆದು ಯುವಕರ ಮೂಲಕ ದೇಶವನ್ನು ಇನ್ನೂ ಗಟ್ಟಿ ಮಾಡಬಹುದು ಸಮೃದ್ಧ, ಬಲಿಷ್ಟ ದೇಶ ಕಟ್ಟುವ ಕೆಲಸ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.
ಫ್ರೊ. ಮಲ್ಲೇಪುರಂ ವೇಂಕಟೇಶ ಅವರು ಆನ್ ಲೈನ್ ಮೂಲಕ ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ಅವರು ರಚಿಸಿದ ಮಲ್ಲಮ್ಮನವರ ಕುರಿತು ಪುಸ್ತಕ ಪರಿಚಯ ಮಾಡಿಸುತ್ತಾ ಈ ಪುಸ್ತಕದಲ್ಲಿ ಅವಿಭಾಜ್ಯ ಕುಟುಂಬದ ಮಹತ್ವ ಮತ್ತು ಮಲ್ಲಮ್ಮನವರ ಕೂಡು ಕುಟುಂಬದ ಬಗ್ಗೆ ಒತ್ತು ಕೊಟ್ಟಿರುವ ಬಗ್ಗೆ ತಿಳಿಸಿದರು.
ಪುಸ್ತಕದಲ್ಲಿ ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ಅವರು ತಾಯಿ ಅಂತಃಕರಣವನ್ನು ಕಾಣಬಹುದಾಗಿದೆ. ಹೇಮರೆಡ್ಡಿ ಮಲ್ಲಮ್ಮನವರು ಸಂಯಮದ ಮತ್ತು ಆದರ್ಶದ ಪ್ರತೀಕವಾಗಿದ್ದರು. ಈ ಪುಸ್ತಕದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಜೀವನದ ಘನ ವಿಶೇಷವನ್ನು ಒಳಗೊಂಡಿದೆ ಎಂದು ಹೇಳುತ್ತಾ, ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ಅವರು ಮೌಲ್ಯಯುತ ಕೃತಿ ರಚಿಸಿ ಸಮಾಜಕ್ಕೆ ಆದರ್ಶಮಯವಾಗಿದೆ ಹಾಗೂ ಅವರ ಬರಹಗಳಲ್ಲಿ ತಾಯಿಯನ್ನು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಪ್ರೊ. ಡಿ.ಬಿ. ನಾಯಕ ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಮಾತನಾಡುತ್ತ್ತಾ ಶರಣರ ಕ್ರಾಂತಿ ಹೇಮರೆಡ್ಡಿ ಮಲ್ಲಮ್ಮನವರ ಮೇಲೆ ಪ್ರಭಾವ ಬೀರಿದ್ದು ಕಾಣಬಹುದಾಗಿದೆ. ಸಮಾಜಕ್ಕೆ ಶರಣ ಶರಣೆಯರ ಕೊಡುಗೆಯನ್ನು ಶ್ಲಾಘಿಸಿದರು. ಡಾ. ವಿಶಾಲಾಕ್ಷಿ ವಿ. ಕರಡ್ಡಿಯವರು ಸಂಪಾದಿಸಿದ ಗಿರಿಯಸಿರಿ ಪುಸ್ತಕವನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ದಯಾನಂದ ಅಗಸರ್ ಅವರು ಮಾತನಾಡುತ್ತಾ ಗುಲಬರ್ಗಾ ವಿಶ್ವವಿದ್ಯಾಲಯವು ಸರ್ಕಾರದ ಆದೇಶದಂತೆ ಮಹಾತ್ಮರ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದೆ ಮತ್ತು ವಿಶ್ವವಿದ್ಯಾಲಯದ ಕರ್ತವ್ಯ ಕೂಡ ಆಗಿದೆ ಎಂದು ಹೇಳಿದರು. ನಿವೃತ ನ್ಯಾಯಮೂರ್ತಿಗಳಾದ ಡಾ ಶಿವರಾಜ ವಿ. ಪಾಟಿಲ್ ರಚಿಸಿದ ಮತ್ತು ಡಾ. ವಿಶಾಲಾಕ್ಷಿ ವಿ. ಕರಡ್ಡಿಯವರು ಸಂಪಾದಿಸಿದ ಎರಡು ಪುಸ್ತಕಗಳು ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಿದ್ದು ಹೇಮ್ಮೆಯ ವಿಷಯ ಮತ್ತು ಲೇಖಕರಿಗೂ ಧನ್ಯವಾದ ತಿಳಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯವು ಭೋಧನೆ ಮತ್ತು ಸಂಶೋಧನೆ ಜೊತೆಗೆ ಸಾಮಾಜಿಕ ಸೇವಾ ಕೇಂದ್ರವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು.