ಕಲಬುರಗಿ ಜಿಲ್ಲೆಯಲ್ಲಿ ಅಲ್ಲಮ ಓಡಾಡಿದ ಕುರುಹುಗಳು

0
34

ಕಲಬುರಗಿ ಹಾಗೂ ಬೀದರ್ ಜಿಲ್ಲೆಯನ್ನೊಳಗೊಂಡಂತೆ ಐದಾರು ಹಳ್ಳಿಗಳಲ್ಲಿ ಅಲ್ಲಮಪ್ರಭುಗಳ ಸ್ಮಾರಕಗಳಿರುವುದನ್ನು ಕಾಣಬಹುದು. ಹಿರಿಯ ಶರಣ ರೇವಣಸಿದ್ಧರೊಂದಿಗೆ ಇಲ್ಲಿ ಅಡ್ಡಾಡಿರುವುದರಿಂದ ಅಲ್ಲಮಪ್ರಭುವಿನ ದೇವಾಲಯದ ಜೊತೆಗೆ ರೇವಣಸಿದ್ಧ ಹಾಗೂ ಅವರ ಪತ್ನಿ ಗಂಗಮ್ಮನವರ ಸ್ಮಾರಕಗಳನ್ನು ಸಹ ಈ ಸ್ಥಳಗಳಲ್ಲಿ ಕಾಣಬಹುದು. ಮುಸ್ಲಿಂ ಆಡಳಿತಗಾರರು ಶರಣರ ಸ್ಮಾರಕಗಳನ್ನು ವಶಪಡಿಸಿಕೊಳ್ಳುವ ಮೂಲಕ ಈ ಭಾಗದ ಜನರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರು ಎಂಬ ಸಂಗತಿ ಇಲ್ಲಿನ ಸ್ಮಾರಕಗಳ ವೀಕ್ಷಣೆಯಿಂದ ತಿಳಿದು ಬರುತ್ತದೆ.

ಕಲಬುರಗಿಯಿಂದ 22 ಕಿ.ಮೀ. ದೂರದ ಹುಣಸಿಹಡಗಿಲ್ ಗ್ರಾಮದ ದೊಡ್ಡ ದಿಬ್ಬದ ಮೇಲೆ ಅಲ್ಲಮಪ್ರಭುವಿನ ದೇವಾಲಯವಿದೆ. ಒಳಗಡೆ ಅಲ್ಲಮಪ್ರಭು, ರೇವಣಸಿದ್ಧ ಸೋಮಲಿಂಗ, ಜೀತಲಿಂಗ, ಭೂಕಾಂತವ್ವರ ಸ್ಮಾರಕಗಳಿರುವುದನ್ನು ಕಾಣಬಹುದು.

Contact Your\'s Advertisement; 9902492681

ಇದೇ ಊರಿನಲ್ಲಿಯೇ ಅಲ್ಲಮಪ್ರಭು ಹೆಸರಿನ 3 ಕಟ್ಟೆಗಳು, ಒಂದು ಗುಂಡ ಕೂಡ ಇದೆ. ಆಳಂದನಿಂದ ಆರೇಳು ಕಿ.ಮೀ. ದೂರದ ಹೆಬ್ಳಿಯಲ್ಲಿ ಅಲ್ಲಮಪ್ರಭು ಹೆಸರಿನ ದೇವಾಲಯವಿದೆ. ಅಲ್ಲಮಪ್ರಭು ಶಿವಲಿಂಗದ ಮೇಲೆ ಒಂದು ಬಟ್ಟೆಯನ್ನು ಮುಚ್ಚಿ ಅಲ್ಲೀಗ ಮಜೇರಿ ಮಾಡಿರುವುದನ್ನು ಕಾಣಬಹುದು. ರೇವಣಸಿದ್ಧ, ಮಾಯಿಯ ಕಟ್ಟೆ ಇರುವ ದೇವಾಲಯ ಈಗ ದರ್ಗಾ ಆಗಿ ಪರಿಣಮಿಸಿದೆ.

ಮಾಡ್ಯಾಳನಲ್ಲಿ ಕೂಡ ಅಲ್ಲಮಪ್ರಭುಗಳ ದೇವಸ್ಥಾನವಿದ್ದು, ಇದು ಕೂಡ ಆಗ ಮುಸ್ಲಿಂ ಆಡಳಿತಾಧಿಕಾರಿಗಳ ಸುಪರ್ದಿಗೆ ಒಳಪಟ್ಟಿದ್ದಿರಬೇಕು. ಈ ದೇವಸ್ಥಾನದ ಹೆಸರಿಗೆ ನೂರಾರು ಎಕರೆ ಜಮೀನಿದೆ. ಇದರ ಅಧಿಪತಿಗಳನ್ನು ಒಡೆಯರ್ (ಪೂಜಾರಿಗಳು) ಎಂದು ಕರೆಯಲಾಗುತ್ತದೆ. ಪೂಜೆ ಮಾಡುವರಿಗೆ ಕವಡೆನವರ್ ಎಂದು ಕರೆದುಕೊಂಡು ಬರಲಾಗುತ್ತಿದೆ.

ಜಿರೋಳಿಯ ಕಥೆ ಮಾತ್ರ ಸ್ವಲ್ಪ ಭಿನ್ನವಾಗಿದೆ. ಹಳೆಯ ಪಳಿಯುಳಿಕೆಗಳನ್ನು ಕೆಡವಿ ಆ ಜಾಗದಲ್ಲಿ ದೇವಾಲಯ ನಿರ್ಮಿಸಿದ್ದಾರೆ. ಅಲ್ಲಮಪ್ರಭುವಿನ ಮೂಲ (ಹಳೆಯ) ಶಿವಲಿಂಗವನ್ನು ಮಗ್ಗುಲಲ್ಲಿ ಇಟ್ಟಿದ್ದಾರೆ. ಗಂಗಮ್ಮನ ಗುಡಿಯೂ ಇದೆ. ಅಲ್ಲಮಪ್ರಭುವಿನ ದೇವಾಲಯದ ಮುಖ್ಯ ದ್ವಾರ ದರ್ಗಾ ಹೋಲಿಕೆಯಿದೆ. ಆದರೆ ಒಳಗಡೆ ಅಲ್ಲಮಪ್ರಭುಗಳ ಮಜೇರಿ, ರೇವಣಸಿದ್ಧರ ಮಜೇರಿ, ಚಿನ್ಮಯ ಮಜೇರಿಗಳಿರುವುದನ್ನು ಕಾಣಬಹುದು. ಒಡೆಯರ್ ಹೊಲದಲ್ಲಿ ಅಲ್ಲಮಪ್ರಭುವಿಗೆ ಸಂಬಂಧಿಸಿದ ಸಮಾಧಿ ಇದೆ. ಶಂಕರಲಿಂಗ ದೇವಸ್ಥಾನವಿದೆ. ಮಗ್ಗುಲಲ್ಲಿ ಅಕ್ಕಮಹಾದೇವಿ ಹೆಸರಿನ ದೇವಾಲಯ ಇದೆ.

ಈ ನಾಲ್ಕು ಊರುಗಳಲ್ಲಿ ಅಲ್ಲಮಪ್ರಭು, ಸಿದ್ಧರಾಮ ದೇವಾಲಯಗಳ ಜೊತೆ ಒಬ್ಬ ಮಹಿಳೆಯ ಮೂರ್ತಿ, ದೇವಾಲಯ ಇರುವುದನ್ನು ಕಾಣಬಹುದು. ಇವರು ರೇವಣ್ಣಸಿದ್ಧರ ಪತ್ನಿ ಇರಬಹುದು. ಭೂಕಾಂತವ್ವ, ಗಂಗಮ್ಮ, ಮಾಯಿ, ಗಂಗಮ್ಮಾಯಿ ಹೆಸರಿನಿಂದ ಕರೆಯುತ್ತಾರೆ. ಈ ನಾಲ್ಕು ಕಡೆಗಳಲ್ಲಿ ಮಾಯಿ ಮೂರ್ತಿಯ ಉತ್ಸವ ಬಹಳ ಮಹತ್ವ ಪಡೆಯುತ್ತದೆ.

ಈ ನಾಲ್ಕು ಊರುಗಳ ಜನರು ದರವೇಷಿ ವೇಷ (ಒಡೆಯರ), ದೀವಟಿಗೆ ಹಿಡಿದು (ಹಡಪದ ಸಮಾಜ) ಬೀದರ್ ಜಿಲ್ಲೆಯ ಅಷ್ಟೂರಗೆ ಪಾದಯಾತ್ರೆ ಮೂಲಕ ತೆರಳಿ ಅಷ್ಟೂರನಲ್ಲಿರುವ ಅಹ್ಮದ್ ಷಾ ವಲಿ ದರ್ಗಾ-ಅಲ್ಲಮಪ್ರಭು ದೇವಾಲಯದಲ್ಲಿ ಜಾತ್ರೆ ನಡೆಸುತ್ತಾರೆ. ದಕ್ಷಿಣ ದಿಕ್ಕಿನ ತೆರೆದ ಬಾಗಿಲಿನಿಂದ ಮುಸ್ಲಿಂ ಜನಾಂಗದವರು ಪ್ರಾರ್ಥಿಸಿದರೆ, ಪೂರ್ವಕ್ಕಿರುವ ಮುಚ್ಚಿದ ಬಾಗಿಲಿನ ಹೊಸ್ತಿಲಿನಲ್ಲಿ ಹಿಂದೂಗಳು ಪೂಜಿಸುತ್ತಾರೆ.

ಇಂತಹ ಸಣ್ಣ, ಸಣ್ಣ ಸಂಗತಿ ಹಾಗೂ ಸಾಂಸ್ಕøತಿಕ ಉತ್ಸವಗಳು ಶರಣ ಚರಿತ್ರೆಯ ಮಹತ್ವ ಸಾರುವುದರ ಜೊತೆಗೆ ಚರಿತ್ರೆಯ ಬೆಳವಣಿಗೆಗೂ ಕಾರಣವಾಗುತ್ತವೆ.
ಹೀಗಾಗಿ ಶರಣರ ಬಗೆಗೆ ಅನಾವಶ್ಯಕವಾಗಿ ಸಂಶಯ ತಾಳಿ ಏನಾದರೊಂದು ತೀರ್ಮಾನಕ್ಕೆ ಬರುವ ಬದಲು ಸ್ವಲ್ಪ ತಡೆದು ನೋಡುವ ತಾಳ್ಮೆ ಹೊಂದಬೇಕು. ಶರಣರ ಸತ್ಯ ಚರಿತ್ರೆ ಕಟ್ಟುವ ಕೆಲಸವನ್ನು ಶರಣರ ಹೆಸರಿನ ಮಠಮಾನ್ಯಗಳು ಮಾಡಬೇಕಿದೆ. ಶರಣಾಭಿಮಾನಿಗಳು ಅಂತಹ ಕೆಲಸ ಮಾಡುವವರಿಗೆ ನೆರವಾಗಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here