ಮೂಲನಿವಾಸಿ ಅಂಬೇಡ್ಕರ್ ಸೇನೆ ತಾಲೂಕು ಸಮಿತಿ ರಚನೆ

0
34

ಸುರಪುರ: ಗೋಲ್ಡನ್ ಕೇವ್ ಬುದ್ಧವಿಹಾರದಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಸುರಪೂರ ತಾಲೂಕ ಸಮಿತಿಯ ರಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಸಭೆಯಲ್ಲಿ ಭಾಗವಹಸಿದ್ದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ ಮಾತನಾಡಿ,ಜಾತ್ಯಾತಿವಾಗಿ ಸಂಘಟನೆಯನ್ನು ಕಟ್ಟುವದು ಮತ್ತು ಬಾಬಾಸಾಹೇರ ಹೊರಾಟದ ರಥವನ್ನು ಮೂಲನಿವಾಸಿಗರೆಲ್ಲರು ಸೇರಿ ಎಳೇವುದು ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯು ಜಿಲ್ಲೆಯಾದ್ಯಂತ ಹೋರಾಟಕ್ಕೆ ಅಣಿಯಾಗಲು ತಾಲೂಕ ಸಮಿತಿಗಳನ್ನು ಪುನರ್ ರಚಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಅಲ್ಲದೆ ಶೀಘ್ರವೆ ತಾಲೂಕಿನಲ್ಲಿ ಮಹಿಳೆ,ಮತ್ತು ಮಕ್ಕಳಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಭ್ರಷ್ಟಾಚಾರದ ವಿರುದ್ದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲು ಮತ್ತು ಹೆಚ್ಚು ಗ್ರಾಮಶಾಖೆಗಳನ್ನು ರಚನೆಮಾಡಲು ಮುಂದಾಗೋಣ ಎಂದರು.

ಇದೆ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಸುಮಾರು 35 ಕ್ಕೂ ಹೆಚ್ಚು ಕಾರ್ಯಾಕರ್ತರು ಸೇನೆಗೆ ನೂತನವಾಗಿ ಸೆರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹಣಮಂತ ಚಲವಾದಿ, ಯಮನಪ್ಪ ಚನ್ನುರು, ಶಿವಣ್ಣ ಸಾಸಗೇರಿ ಮತ್ತು ತಾಲೂಕಿನ ಎಲ್ಲ ಗ್ರಾಮಶಾಖೆಗಳ ಪದಾಧಿಕಾರಿಗಳು ಬಾಗವಹಿಸಿದ್ದರು.

ತಾಲೂಕು ಸಮಿತಿ: ರಾಜು ಬಡಿಗೇರ್ ತಾಲೂಕ ಸಂಚಾಲಕರು. ಹಣಮಂತ ರತ್ತಾಳ, ಗೋಪಾಲ್ ಭಜಂತ್ರಿ, ಸತೀಶ ಯಡಿಯಾಪೂರ,ಯಮನಪ್ಪ ಕಟ್ಟಿಮನಿ, ಚಂದಪ್ಪ ಪಂಚಮ, ತಾಲೂಕ ಸಂಘಟನಾ ಸಂಚಾಲಕರು, ಜಾವೇದ್ ಪಟೇಲ್ ತಾಲೂಕ ಖಜಾಂಚಿ, ಅಲಿಯಾಸ್ ದೇವಿಕೇರಾ,ಶರಣು ಕೃಷ್ಣಾಪೂರ, ಮಲ್ಲು ಕುಂಬಾರಪೇಟ್ ತಾಲೂಕ ಸಮಿತಿ ಸದ್ಯರನ್ನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನಗರ ಘಟಕ: ಮಹಮ್ಮದ್ ಗೌಸ್ ನಗರ ಘಟಕದ ಸಂಚಾಲಕರು ವೆಂಕಟೇಶ್ ಬಡಿಗೇರ್,ಜಾಕೀರ್ ಹುಸೇನ್, ಆನಂದ ಝಂಡದಕೇರಾ, ಪರುಶು ಪಾಳದಕೇರಾ, ಮೊಹಮ್ಮದ್ ಹಾಜಿ, ಫಾರೂಖ್ ಅಸ್ಸರಮೊಹಲ್ಲಾ, ನಗರ ಘಟಕದ ಸಂಘಟನಾ ಸಂಚಾಲಕರು, ಮಹಮ್ಮದ್ ತೌಫೀ ನಗರ ಘಟಕದ ಖಜಾಂಚಿಯನ್ನಾಗಿ ನೇಮಿಸಲಾಯಿತು.

ಸಭೆಯ ಆರಂಬದಲ್ಲಿ ಬುದ್ದವಂದನೆಯನ್ನು ಸಲ್ಲಿಸಿ ನಂತರ ಬಾಬಾಸಾUಹೆಬ ಅಂಬೆಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿದನಂತರ ಸಭೆಯನ್ನು ಮುಗಿಸಲಾಯಿತು.

ಸಭೆಯಲ್ಲಿ ಮುಖಂಡರಾದ ಮಾನಪ್ಪ ರತ್ತಾಳ, ಶರಣು ಹುಲಿಮನಿ, ಮಲ್ಲು ಅಮ್ಮಾಪುರ, ಮುತ್ತು ಅಮ್ಮಪುರ,ಯಲ್ಲಪ್ಪ ರತ್ತಾಳ, ರವಿ ರತ್ತಾಳ, ಶೇಖ್‍ಅಲಿ, ಸಂತೋಶ ಯಕ್ತಾಪೂರು ,ಸಿದ್ದು, ಇನ್ನು ಹಲು ಕಾರ್ಯಾಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here