ಕಲಬುರಗಿ: ನಗರದ ಕರೀಮ್ ನಗರದ ಎ.ಕೆ ಸೂಪರ್ ಬಜಾರ್ ಹತ್ತಿರ ರಸ್ತೆಯ ಮೇಲೆ ಇರುವ ವಿದ್ಯುತ್ ಬಾಂಕ್ಸ್ ನಿಂದ ಕುರಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಕುರಿ ಒಂದು ಸಾವನಪ್ಪಿರುವ ಘಟನೆ ಸಂಭವಿಸಿದೆ.
ವಿದ್ಯುತ್ ಕಂಟ್ರೋಲರ್ ಬಾಕ್ಸ್ ನಿರ್ಮಿತಿ ಕೇಂದ್ರಕ್ಕೆ ಸೇರಿದ್ದಾಗಿದ್ದು, ಹೈಓಲಟ್ ವಿದ್ಯುತ್ ಕಂಟ್ರೋಲರ್ ಬಾಕ್ಸ್ ಇದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಯ ಬದಿಯಲ್ಲಿ ಈ ಬಾಕ್ಸ್ ಇರುವುದರಿಂದ ಪ್ರಾಣಿ ಹಾಗೂ ಮಕ್ಕಳಿಗೆ ಜೀವಕ್ಕೆ ಅಪಾಯಕ್ಕೆ ಕಾರಣವಾಗುತ್ತಿದ್ದು, ನಿರ್ಮಿತಿ ಕೇಂದ್ರ ನಿರ್ಲಕ್ಷ್ಯದಿಂದ ಇಂದು ಒಂದು ಪ್ರಾಣಿಯನ್ನು ಬಲಿ ಪಡೆದಿದೆ ಎಂದು ಸ್ಥಳೀಯರು ಹಾಗೂ ಕುರಿಯ ಮಾಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಿಯ ಸಾವಿಗೆ ನಿರ್ಮಿತಿ ಕೇಂದ್ರವೆ ಕಾರಣ ಇದಕ್ಕೆ ಪರಿಹಾರ ಒದಗಿಸಿ, ವಿದ್ಯುತ್ ಬಾಕ್ಸ್ ರಸ್ತೆಯಿಂದ ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿ, ಈ ಕುರಿತು ನಿರ್ಮಿತಿ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.