22 ರಂದು ಸುರಪುರ ಇತಿಹಾಸದ ಕುರಿತ ಕೃತಿ ಬಿಡುಗಡೆ: ಚಂದ್ರಕಾಂತ ಭಂಡಾರೆ

0
16

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ರಂಗನಗೌಡ ಪಾಟೀಲ ವಿರಚಿತ “ಸುರಪುರ: ಒಂದು ಪ್ರಾಚೀನ ಬೇಡರ ರಾಜ್ಯ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಅ22(ರವಿವಾರ) ರಂದು ಬೆಳಿಗ್ಗೆ 10.30ಕ್ಕೆ ನಗರದ ಅದಿತಿ ಹೋಟೆಲ್‍ನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಎಸ್.ಪಿ.ಸಿ.ಎನ್.ಭಂಡಾರೆ ತಿಳಿಸಿದರು.

ಗುರುವಾರದಂದು ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಭಾರತದಲ್ಲಿ ಅನೇಕ ಸಂಸ್ಥಾನಗಳು ಹೋರಾಡಿದ್ದು ಈ ಸಂಸ್ಥಾನಗಳಲ್ಲಿ ಸಗರನಾಡಿನ ಸುರಪುರ ಸಂಸ್ಥಾನದ ಬೇಡರ ಕುಲದ ಗೋಸಲ ಬೆಡಗಿನ ಚಂದ್ರ ವಂಶದ ಅರಸರು ಪ್ರಮುಖರಾಗಿದ್ದು ಇವರ ಬಗ್ಗೆ ಯಾರಿಗೂ ಗೊತ್ತಿರದ ಸುರಪುರ ಸಂಸ್ಥಾನದ ಇತಿಹಾಸ ಕುರಿತು ಹೈದ್ರಾಬಾದ ನಿಜಾಮ ಸಂಸ್ಥಾನದ ಅಧಿಕಾರಿಯಾಗಿದ್ದ ನವಾಬ್ ಫ್ರಾಮುರ್ಜ ಜಂಗ್ ಬಹಾದ್ದೂರ ಇಂಗ್ಲೀಷನಲ್ಲಿ ರಚಿಸಿರುವ ಕೃತಿಯಲ್ಲಿ ಅನೇಕ ವಿಷಯಗಳನ್ನು ಪ್ರಕಟಿಸಿದ್ದಾನೆ ಎಂದ ಅವರು ತಿಳಿಸಿದರು.

Contact Your\'s Advertisement; 9902492681

1904-06ವರೆಗೆ ರಾಯಚೂರನ ಪ್ರಥಮ ತಾಲೂಕುದಾರ್(ಕಲೆಕ್ಟರ್) ಹಾಗೂ ದಕ್ಷಿಣ ಕಲಬುರಗಿ ವಿಭಾಗದ ಸುಬೇದಾರನಾಗಿದ್ದ ಫ್ರಾಮುರ್ಜ ಜಂಗ್ ಅವರು 1904ರಲ್ಲಿ ಭೇಟಿ ಕೊಟ್ಟ ಸಂದರ್ಭದಲ್ಲಿ ಹಕೀಮ ಪಾಪಯ್ಯ ಶಾಸ್ತ್ರಿಗಳಿಂದ ವಿವರವಾದ ರಾಜರ ವಂಶಾವಳಿ ಪಡೆದು ಹಾಗೂ ಇತರೆ ಅಧಾರಗಳೊಂದಿಗೆ 1906ರಲ್ಲಿ ಮದ್ರಾಸ್‍ನಲ್ಲಿ ಪ್ರಕಟಿಸಿದರು.

ಈಗ ಇದೇ ಕೃತಿಯನ್ನು ನಿವೃತ್ತ ವಾಣಿಜ್ಯ ಅಧಿಕಾರಿ ರಂಗನಗೌಡ ಪಾಟೀಲ ಅವರು ಕನ್ನಡಕ್ಕೆ ಅನುವಾದಿಸಿದ್ದು ಸುಮಾರು 115 ವರ್ಷಗಳ ನಂತರ ಸುರಪುರ ಇತಿಹಾಸದ ಬಗ್ಗೆ ಯಾರಿಗೂ ಗೊತ್ತಿರದ ಇತಿಹಾಸ ಕನ್ನಡ ಆವೃತ್ತಿಯಲ್ಲಿ ಹೊರ ಬರುತ್ತಿರುವುದು ಸಂತಸದ ವಿಷಯ ಎಂದು ಅವರು ತಿಳಿಸಿದರು, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯವನ್ನು ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು.

ವಹಿಸುವರು,ಸುರಪುರ ಸಂಸ್ಥಾನದ ರಾಜ ಮನೆತನದವರಾದ ಡಾ.ರಾಜಾ ಕೃಷ್ಣಪ್ಪ ನಾಯಕ,ಸುಪ್ರೀಂಕೋರ್ಟ ನ್ಯಾಯವಾದಿಗಳಾದ ರಾಜಾ ವೆಂಕಟಪ್ಪ ನಾಯಕ ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃತಿ ಮತ್ತು ಸಾಂಸ್ಕøತಿಕ ಸಂಘ ಕಲಬುರಗಿಯ ಅಧ್ಯಕ್ಷರಾದ ಡಾ.ಬಸವರಾಜ ಪಾಟೀಲ ಸೇಡಂ ಕಾರ್ಯಕ್ರಮ ಉದ್ಘಾಟಿಸುವರು,ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದು,ಸಂಘದ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲ ಹಾಗೂ ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಜಿ.ಟಿ.ಚಂದ್ರಶೇಖರಪ್ಪ ಹಾಗೂ ಕೃತಿಯ ಲೇಖಕ ರಂಗನಗೌಡ ಪಾಟೀಲ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಶ್ರೀಹರಿರಾವ ಆದವಾನಿ,ಇಕ್ಬಾಲ್ ರಾಹಿ,ಲೇಖಕ ರಂಗನಗೌಡ ಪಾಟೀಲ,ರಾಘವೇಂದ್ರ ಭಕ್ರಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here