ಸುರಪುರ:ಸರಳವಾಗಿ ಡಿ.ದೇವರಾಜ ಅರಸು ಜಯಂತಿ ಆಚರಣೆ

0
9

ಸುರಪುರ: ನಗರದ ತಹಸೀಲ್ ಕಚೇರಿಯಲ್ಲಿ ಅರಳವಾಗಿ ಮಾಜಿ ಮುಖ್ಯಂಮತ್ರಿ ಡಿ.ದೇವರಾಜ ಅರಸು ಅವರ 106ನೇ ಜಯಂತಿ ಆಚರಿಸಲಾಯಿತು.ಶುಕ್ರವಾರ ಬೆಳಿಗ್ಗೆ ನಡೆದ ಜಯಂತಿ ಆಚರಣೆ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೂಫಿಯಾ ಸುಲ್ತಾನ,ಡಿ.ದೇವರಾಜ ಅರಸು ಅವರು ಈ ದೇಶಕಂಡ ಮಹಾನ್ ನಾಯಕರು ಹಾಗು ಮುಖ್ಯಮಂತ್ರಿಗಳಲ್ಲಿ ಒಬ್ಬರು,ಅವರು ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಸಿಎಮ್ ಅಧಿಕಾರಿ ತಿಪ್ಪಾರಡ್ಡಿ ಪಾಟೀಲ್ ಮಾತನಾಡಿ, ಈ ನಾಡುಕಂಡ ಧೀಮಂತ ನಾಯಕರಲ್ಲಿ ಒಬ್ಬರಾಗಿರುವ ಡಿ.ದೇವರಾಜ ಅರಸು ಅವರು ಕೃಷಿ ಕುಟುಂಬದಲ್ಲಿ ಜನಸಿ ನಾಡಿಜ ಜನರು ನೆನಪಲ್ಲಿ ಉಳಿಯುವಂತ ಕೆಲಸ ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ.ಅವರು ಮುಖ್ಯಮಂತ್ರಿಯಾಗಿದ್ದಾಗ ನಾಡಿನ ಎಲ್ಲಾ ಹಿಂದುಳಿದ ವರ್ಗಗಳನ್ನು ಗುರುತಿಸಿ ಆ ಎಲ್ಲಾ ವರ್ಗಗಳ ಅಭೀವೃಧ್ಧಿಗಾಗಿ ನೀಡಿದ ಯೋಜನೆಗಳು ಇಂದಿಗೂ ಪ್ರಸ್ತುತವಾಗಿದೆ,ಅಂತಹ ಆಡಳಿತವನ್ನು ನೀಡುವ ಮೂಲಕ ನಾಡಿನ ಎಲ್ಲಾ ಹಿಂದುಳಿದ ವರ್ಗಗಳ ಪಾಲಿನ ಅಭೀವೃಧ್ಧಿ ಹರಿಕಾರರಾಗಿರುವ ಅರಸು ಅವರ ಜಯಂತಿ ಇಂದು ನಾವೆಲ್ಲರು ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ ಕಚೇರಿಯ ಸಿರಸ್ತೆದಾರರಾದ ಕೊಂಡಲ ನಾಯಕ,ಸೋಮನಾಥ ನಾಯಕ ಸೇರಿದಂತೆ ತಹಸೀಲ್ ಕಚೇರಿಯ ಎಲ್ಲಾ ಸಿಬ್ಬಂದಿಗಳು ಹಾಗು ಅನೇಕ ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರು ಸಮಾಜದಲ್ಲಿನ ಎಲ್ಲಾ ಜನರು ಜಾತಿ ಮತಗಳನ್ನು ಪಕ್ಕಕ್ಕಿರಿಸಿ ಎಲ್ಲರು ಒಂದೆ ಎಂಬ ಭಾಗದಲ್ಲಿ ಸ್ವಚ್ಛಂದ ಸಮಾಜದ ನಿರ್ಮಾಣಕ್ಕೆ ಮುಂದಾಗುವುದಾಗಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಬಿಸಿಎಮ್ ಕಚೇರಿಯಲ್ಲಿ ಅರಸು ಜಯಂತಿ: ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಆಚರಿಸಲಾಯಿತು.

ಬಿಸಿಎಮ್ ಅಧಿಕಾರಿ ತಿಪ್ಪಾರಡ್ಡಿ ಪಾಟೀಲ್ ಅವರ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.ಈ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here